ಕರಾವಳಿ

ಮಲ್ಟಿಪ್ಲೆಕ್ಸ್ ಥಿಯೇಟರ್ ನಿರ್ಮಿಸುವ ಆಸೆ: ಬೈಂದೂರಿನ ಸಿನಿರಸಿಕರಿಗೆ ಸಿಹಿ ಸುದ್ದಿ ಕೊಟ್ಟ ನಟ, ನಿರ್ದೇಶಕ ರಿಷಬ್ ಶೆಟ್ಟಿ (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ರೈತರಿಗೆ ಅಗತ್ಯವಾಗಿರುವ ಎಲ್ಲಾ ಅಂಗಡಿ, ಉಪಕರಣ ಒಂದೇ ಸೂರಿನಡಿಯಲ್ಲಿ ನೀಡುವ ಅಗ್ರಿಮಾಲ್‍ನ ಯೋಜನೆ ಈ ಭಾಗಕ್ಕೆ ಅತ್ಯಂತ ಅಗತ್ಯವಾಗಿದೆ. ಈ ಮಾಲ್‍ನಲ್ಲಿ ಮಲ್ಟಿ ಪ್ಲೆಕ್ಸ್ ಸಿನೆಮಾ ಥಿಯೇಟರ್‍ ನಿರ್ಮಾಣ ಮಾಡಲು ಸಂಬಂಧಪಟ್ಟವರ ಯೋಜನೆಯಿದ್ದು ಅವಕಾಶ ದೊರೆಕಿದಲ್ಲಿ ನಾನೇ ಥಿಯೇಟರ್ ಮಾಡುವೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.

ಬೈಂದೂರಿನ‌ ಖಂಬದಕೋಣೆಯಲ್ಲಿ ಮಾತನಾಡಿದ ಅವರು, ತಂದೆ ಊರಲ್ಲಿ ಮಲ್ಟಿಫ್ಲೆಕ್ಸ್ ನಿರ್ಮಿಸುವ ಭಾಗ್ಯ ದೊರತರೆ ಜೀವನದಲ್ಲೇ ಇದೊಂದು ಉತ್ತಮ ಗಳಿಗೆ ಎಂದವರು ಹೇಳುವ ಮೂಲಕ ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಬೈಂದೂರಿನ ಜನತೆಗೆ ಸಂತಸದ ಸುದ್ದಿ ನೀಡಿದರು.

Comments are closed.