Mumbai

ತೀಯಾ ಸಮಾಜ ಪಶ್ಚಿಮ ವಲಯ: 20ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ, ಅರಸಿನ ಕುಂಕುಮ

Pinterest LinkedIn Tumblr

ಮುಂಬಯಿ: ತೀಯಾ ಸಮಾಜ ಮುಂಬಯಿ ಇದರ ಪಶ್ಚಿಮ ವಲಯ ವತಿಯಿಂದ 20ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಮಾ.20ರಂದು ಜೋಗೇಶ್ವರಿ ಪೂರ್ವ ಸಾಯಿ ಸಿದ್ದಿ ವೆಲ್ಪೇರ್ ಅಸೋಷಿಯೇಷನ್ ಸಭಾಗೃಹ, ಇಲ್ಲಿ ವೈಕುಂಠ ಭಟ್ ಇವರ ಪೌರೋಹಿತ್ಯದಲ್ಲಿ ತೀಯಾ ಸಮಾಜ ಮುಂಬಯಿ ಪಶ್ಚಿಮ ವಲಯದ ಕಾರ್ಯಾಧ್ಯಕ್ಷ ಸುಧಾಕರ್ ಉಚ್ಚಿಲ್ ಇವರ ನೇತೃತ್ವದಲ್ಲಿ ನಡೆಯಿತು.

ಪೂಜಾ ವಿಧಿಯಲ್ಲಿ ಶುಶಾಂತ್ ಸಾಲ್ಯಾನ್ ಮತ್ತು ಅಂಕಿತಾ ಸಾಲ್ಯಾನ್ ದಂಪತಿ ಬಾಗವಹಿಸಿದ್ದರು.

ಪ್ರತೀ ವರ್ಷದಂತೆ ಈ ಸಲವೂ ನವ ವಿವಾಹಿತರನ್ನು ತೀಯಾ ಸಮಾಜ ಪಶ್ಚಿಮ ವಲಯದ ವತಿಯಿಂದ ಗೌರವಿಸಲಾಯಿತು. ನವವಿವಾಹಿತರಾದ ರವಿರಾಜ್ ಮತ್ತು ಜ್ಯೋತಿ, ಅನಿಶ್ ಮತ್ತು ಶ್ವೇತಾ ಹಾಗೂ ಶುಶಾಂತ್ ಮತ್ತು ಅಂಕಿತಾ ಇವರನ್ನು ಹಿರಿಯರಾದ ಚಂದ್ರಶೇಖರ ಕೆ. ಬಿ. ದಂಪತಿ, ಅಮರ್ ನಾಥ್ ಉಚ್ಚಿಲ್ ಮತ್ತು ನರ್ಮದಾ ಉಚ್ಚಿಲ್, ಮೋಹನ್ ದಾಸ್ ಸುವರ್ಣ ಮತ್ತು ಚಂದ್ರಾ ಸುವರ್ಣ ಇವರು ಗೌರವಿಸಿ ಶುಭ ಹಾರೈಸಿದರು. ಆ ನಂತರ ಸಮಾಜದ ಮಹಿಳೆಯರಿಂದ ಅರಸಿನ ಕುಂಕುಮ ನಡೆಯಿತು. ಪಶ್ಚಿಮ ವಲಯದ ಕಾರ್ಯಾಧ್ಯಕ್ಷರಾದ ಸುಧಾಕರ್ ಉಚ್ಚಿಲ್ ಮತ್ತು ಸುಜಾತ ಉಚ್ಚಿಲ್ ಇವರಿಗೆ ಪುರೋಹಿತರು ಪ್ರಸಾದವನ್ನು ನೀಡಿ ಆಶೀರ್ವದಿಸಿದರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ತೀಯಾ ಸಮಾಜ ಪಶ್ಚಿಮ ವಲಯದ ಸ್ಥಾಪಕ ಕಾರ್ಯಾಧ್ಯಕ್ಷ ಬಾಬು ಐಲ್, ಸಮಾಜದ ಮಾಜಿ ಕೋಶಾಧಿಕಾರಿ ಸುಂದರ್ ಬಿ ಐಲ್, ರಂಗ ನಟ ಪುರಂದರ ಸಾಲ್ಯಾನ್, ಸಮಾಜದ ಪಶ್ಚಿಮ ವಲಯ ದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರುಗಳಾದ ಸೀತಾ ಸಾಲ್ಯಾನ್, ಚಂದ್ರ ಸುವರ್ಣ, ದಿವ್ಯ ಆರ್ ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯದರ್ಶಿ ಶಶಿಪ್ರಭಾ ಬಂಗೇರ, ಪಶ್ಚಿಮ ವಲಯ ದ ಮಾಜಿ ಕಾರ್ಯಾಧ್ಯಕ್ಷ ಬಾಬು ಕೋಟ್ಯಾನ್, ಸಮಾಜದ ಮಾಜಿ ಜೊತೆ ಕಾರ್ಯದರ್ಶಿಗಳಾದ ನ್ಯಾ. ಸದಾಶಿವ ಬಿ.ಕೆ., ನ್ಯಾ. ನಾರಾಯಣ ಸುವರ್ಣ, ಸದಾಶಿವ ಉಚ್ಚಿಲ್, ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ವಾಸುದೇವ ಪಾಲನ್, ವಿಶ್ವಥ್ ಬದ್ದೂರು ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ತೀಯಾ ಸಮಾಜದ ಮಾಜಿ ಪ್ರಧಾನ ಕಾರ್ಯದರ್ಶಿ ಈಶ್ವರ ಎಂ. ಐಲ್ ಮತ್ತು ಪಶ್ಚಿಮ ವಲಯ ಸಮಿತಿಯ ಕಾರ್ಯದರ್ಶಿ ಪದ್ಮನಾಭ ಸುವರ್ಣ ನೆರವೇರಿಸಿದರು. ಕೋಶಾಧಿಕಾರಿ ರಾಮಚಂದ್ರ ಎನ್. ಕೋಟ್ಯಾನ್, ಉಪಕಾರ್ಯಾಧ್ಯಕ್ಷ ಬಾಬು ಕೋಟ್ಯಾನ್, ಜೊತೆ ಕಾರ್ಯದರ್ಶಿ ಚಂದ್ರಶೇಖರ ಸಾಲ್ಯಾನ್, ಜೊತೆ ಕೋಶಾಧಿಕಾರಿ ಗಣೇಶ್ ಉಚ್ಚಿಲ್, ಸಮಿತಿಯ ಸದಸ್ಯರುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ವರದಿ : ಈಶ್ವರ ಎಂ. ಐಲ್
ಚಿತ್ರ : ಬಾಬು ಕೋಟ್ಯಾನ್

Comments are closed.