Mumbai

ಧಾರ್ಮಿಕ ಮುಂದಾಳು, ಸಮಾಜ ಸೇವಕ, ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ಟ್ರಸ್ಟಿ ಸುರೇಶ್ ಡಿ. ಪಡುಕೋಣೆ ವಿಧಿವಶ

Pinterest LinkedIn Tumblr

ಕುಂದಾಪುರ : ಧಾರ್ಮಿಕ ಮುಂದಾಳು, ಸಮಾಜ ಸೇವಕ, ವಿವಿಧ ಸಾಮಾಜಿಕ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದ ಸುರೇಶ್ ಡಿ. ಪಡುಕೋಣೆ (82) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿ ಅಗಲಿದ್ದಾರೆ.

ಸುರೇಶ ಪಡುಕೋಣೆ ಚಿಕ್ಕವಯಸ್ಸಿನಲ್ಲೇ ಬಾಂಬೆ ಸೇರಿ ಭಾರತ್ ಬೋರಿಂಗ್ ಕಂಪನಿಯಲ್ಲಿ ಗ್ರೈಂಡರ್ ಆಪರೇಟರಾಗಿ ವೃತ್ತಿ ಆರಂಭಿಸಿ,ನಂತರ ಅಪೋಲೋ ಬೋರಿಂಗ್ ಇಂಡಸ್ಟ್ರೀಸ್ ಮೂಲಕ ಸ್ವಂತ ಉದ್ಯಮ ಆರಂಭಿಸಿ ಹೊಟೇಲ್ ಉದ್ಯಮಕ್ಕೂ ಕಾಲಿಟ್ಟರು.
ಧಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡ ಅವರು ಪಡುಕೋಣೆ ಆನೆಗುಡ್ಡ ಸ್ವಾಗತ ಗೋಪುರ, ಪಡುಕೋಣೆ ಶ್ರೀ ಮಹಾವಿಷ್ಣು ದೇವಸ್ಥಾನ, ಶ್ರೀ ಈಶ್ವರ, ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಕೆರೆ ನವೀಕರಿಸಿದ್ದರು.

ಆಂಜನೇಯ ಸ್ವಾಮಿ ಪರಮ ಭಕ್ತರಾಗಿದ್ದ, ಪಡುಕೋಣೆ ಕುಂದಾಪುರ ಹಂಗಳೂರಲ್ಲಿ ಬೃಹತ್ ಎತ್ತರದ ಆಂಜನೇಯ ಸ್ವಾಮಿ ಪ್ರತಿಷ್ಠಾನೆ ಮಾಡಿ, ಪ್ರತೀ ವರ್ಷ ಪ್ರತಿಷ್ಠಾ ಮಹೋತ್ಸವ ನಡೆಸಿ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಸಿಕೊಂಡು ಬರುತ್ತಿದ್ದರು. ಶೈಕ್ಷಣಿಕ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದರು. ಕೋಮಾ ಕಾರಂತ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ, ಗೌರವ ಸಿಕ್ಕಿದೆ. ಬಾರಕೂರು ಏಕನಾಥೇಶ್ವರಿ ದೇವಸ್ಥಾನದ ಟ್ರಸ್ಟಿ, ಕುಂದಾಪುರ ತಾಲೂಕು ದೇವಾಡಿಗರ ಸಂಘದ ಮಹಾಪೋಷಕರು ಕೂಡ ಆಗಿದ್ದಾರೆ‌.

ಮಾಜಿ ಕೇಂದ್ರ ಸಚಿವ ವೀರಪ್ಪ ಮೋಯಿಲಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಂತಾಪ ಸೂಚಿಸಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಮಾಜಿ ಶಾಸಕ ಗೋಪಾಲ ಪೂಜಾರಿ ಅಂತಿಮ ದರ್ಶನ ಪಡೆದರು.

Comments are closed.