Mumbai

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಹಾವು ಕಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ

Pinterest LinkedIn Tumblr

ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಡರಾತ್ರಿ ತಮ್ಮ ಫಾರ್ಮ್​ಹೌಸ್​ನಲ್ಲಿದ್ದಾಗ ಹಾವು ಕಚ್ಚಿದೆ.

ಪನ್ವೇಲ್​ನಲ್ಲಿರುವ ತಮ್ಮ ಫಾರ್ಮ್ ಹೌಸ್ ಗೆ ತಡರಾತ್ರಿ ಸಲ್ಮಾನ್​ ಖಾನ್​ ವಾಯು ವಿಹಾರ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಹಾವೊಂದು ಕಚ್ಚಿದೆ. ವಿಷ ರಹಿತ ಹಾವು ಕಚ್ಚಿದೆ ಎನ್ನಲಾಗಿದೆ.

ಮುಂಜಾಗ್ರತ ಕ್ರಮವಾಗಿ ಸಲ್ಮಾನ್​ ಖಾನ್​ ಅವರನ್ನು ಆಸ್ಪತ್ರೆಸೇರಿದ್ದಾರೆ. ಚಿಕಿತ್ಸೆ ಪಡೆದು ಇಂದು ಬೆಳಗ್ಗೆ 9 ಗಂಟೆಗೆ ಸಲ್ಮಾನ್​ ಖಾನ್​ ಡಿಸ್ಚಾರ್ಜ್​ ಆಗಿದ್ದಾರೆ. ಮರಳಿ ಮತ್ತೆ ತಮ್ಮ ಫಾರ್ಮ್​ಹೌಸ್​ಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯ ಸಲ್ಮಾನ್​ ಆರೋಗ್ಯದ ಬಗ್ಗೆ ಯಾವುದೇ ಚಿಂತೆ ಬೇಡ ಎಂದು ವೈದ್ಯರು ತಿಳಿಸಿದ್ದಾರೆ.

Comments are closed.