ಕರ್ನಾಟಕ

ಡಿ.28 ರಿಂದ 10 ದಿನ ರಾಜ್ಯದಲ್ಲಿ ನೈಟ್ ಕರ್ಫ್ಯೂ: ರಾತ್ರಿ 10ರಿಂದ ಬೆಳಿಗ್ಗೆ 5ರ ತನಕ ಕಂಪ್ಲೀಟ್ ಬಂದ್..!

Pinterest LinkedIn Tumblr

ಬೆಂಗಳೂರು: ಕೊರೋನಾ‌ ಹಾಗೂ ಓಮಿಕ್ರಾನ್ ಸೋಂಕು ಹರಡುವಿಕೆ‌ ಮತ್ತೆ ಹೆಚ್ಚುತ್ತಿರುವ ಹಿನ್ನೆಲೆ‌ ಸೋಂಕಿನ ಪ್ರಸರಣ ತಡೆಯಲು ರಾಜ್ಯದಲ್ಲಿ ಡಿಸೆಂಬರ್ 28ರಿಂದ ಹತ್ತು ದಿನಗಳ ಕಾಲ ನೈಟ್ ಕರ್ಪ್ಯೂ ಜಾರಿಗೊಳಿಸಲಾಗುತ್ತದೆ.

(ಸಾಂದರ್ಭಿಕ ಚಿತ್ರ)

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಆರೋಗ್ಯ ಸಚಿವ ಕೆ. ಸುಧಾಕರ್ ಈ ಮಾಹಿತಿ ನೀಡಿದರು.

ಡಿ.28 ರಿಂದ 10 ದಿನಗಳ ಕಾಲ ರಾತ್ರಿ ಕರ್ಫ್ಯೂ ಇರಲಿದೆ ರಾತ್ರಿ 10:00 ಗಂಟೆಗೆಯಿಂದ ಬೆಳಿಗ್ಗೆ 5ರ ತನಕ ನೈಟ್ ಕರ್ಫ್ಯೂ ಜಾರಿ ಇರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಅನುಮತಿ ಇಲ್ಲ. ಇನ್ನು‌ ಡಿ.28ರಿಂದ ಹೋಟೆಲ್, ಪಬ್, ಬಾರ್ ಗಳಲ್ಲಿ %50 ಮಿತಿ ಜಾರಿ ಮಾಡಲಾಗುತ್ತದೆ ಎಂದು ಅವರು‌ ಮಾಹಿತಿ‌ ನೀಡಿದರು‌.

Comments are closed.