Mumbai

ಇಂಡಿಗೋ ಏರ್​ಲೈನ್ಸ್ ವಿಮಾನದಲ್ಲಿ ತುಳು ಭಾಷೆಯ ಅನೌನ್ಸ್​ಮೆಂಟ್ ಮಾಡಿದ ಪೈಲೆಟ್..!

Pinterest LinkedIn Tumblr

ಮಂಗಳೂರು: ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸಿದರೆ ಅಲ್ಲಿ ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಸೂಚನೆಗಳನ್ನು ನೀಡಲಾಗುತ್ತದೆ. ವಿಮಾನದಲ್ಲಿನ ಪ್ರಯಾಣ ಕಾಲಮಿತಿ, ನಡವಳಿಕೆಗಳ ವಿಚಾರದ ಬಗ್ಗೆ ಒಂದಷ್ಟು ಸೂಚನೆಗಳನ್ನು ಅಲ್ಲಿ ಹೇಳುತ್ತಾರೆ. ಮಹಾರಾಷ್ಟ್ರದ ಮುಂಬೈ ಇಂಟರ್ ನ್ಯಾಶನಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನದಲ್ಲಿ ತುಳು ಭಾಷೆಯಲ್ಲಿ ಕೂಡ ಸೂಚನೆ ನೀಡುವ ಮೂಲಕ ತುಳು ಭಾಷೆಯ ಕಂಪು‌ ಪಸರಿಸುವಂತೆ ಮಾಡಲಾಗಿದೆ.

ಡಿಸೆಂಬರ್ 24 ರಂದು ಮುಂಬೈನಿಂದ ಮಂಗಳೂರಿಗೆ ಹೊರಟ ಇಂಡಿಗೋ ಏರ್​ಲೈನ್ಸ್ ವಿಮಾನದಲ್ಲಿ ಹೀಗೆ ತುಳು ಭಾಷೆಯ ಘೋಷಣೆ ಉದ್ಘೋಷ ಕೇಳುವಂತಾಗಿದೆ. ಉಡುಪಿ ಮೂಲದ ಪ್ರದೀಪ್ ಕುಮಾರ್ ಪದ್ಮಶಾಲಿ ಎಂಬ ಪೈಲೆಟ್ ತುಳು ಭಾಷೆಯಲ್ಲಿ ಪ್ರಯಾಣಿಕರಿಗೆ ಮಾಹಿತಿ ಜೊತೆಗೆ ಶುಭಾಶಯ ಕೋರಿದ್ದಾರೆ.

ಎಲ್ಲರಿಗೂ ನಮಸ್ಕಾರ ಎನ್ನುತ್ತಾ ಕಾಕ್‌ ಪಿಟ್‌ನಿಂದ ತುಳುವಿನಲ್ಲಿ ಮಾತು ಆರಂಭಿಸಿದ ಪೈಲಟ್‌, ‘ಇನ್ನು 1 ಗಂಟೆ 5 ನಿಮಿಷಕ್ಕೆ ಮಂಗಳೂರು ತಲುಪುತ್ತೇವೆ. ದಯಮಾಡಿ ಎಲ್ಲರೂ ಆರಾಮವಾಗಿದ್ದು ಸಹಕರಿಸಬೇಕು. ಈ ವಿಮಾನ ಪ್ರಯಾಣದ ಖುಷಿ ಅನುಭವಿಸಬೇಕು. ಇಂದು ನಮ್ಮೊಂದಿಗೆ ಪ್ರಯಾಣಿಸಲು ಮನಸ್ಸು ಮಾಡಿದ್ದಕ್ಕೆ ನಿಮಗೆಲ್ಲ ನನ್ನ ಹೃದಯಾಂತರಾಳದ ನಮಸ್ಕಾರ’ ಎಂದಿದ್ದಾರೆ. ಬಳಿಕ ಇಂಗ್ಲಿಷ್‌ನಲ್ಲಿ, ‘ನಾನೀಗ ಸ್ಥಳೀಯವಾಗಿ, ದಕ್ಷಿಣ ಕರ್ನಾಟಕದ ಭಾಷೆ ತುಳುವಿನಲ್ಲಿ ಮಾತನಾಡಿದೆ’ ಎಂದಿದ್ದಾರೆ.

ಸಾಮಾನ್ಯವಾಗಿ ಅಂತರಾಷ್ಟ್ರೀಯ ವಿಮಾನಗಳಲ್ಲಿ ಇಂಗ್ಲೀಷ್ ಭಾಷೆ ಬಳಸಿದರೆ, ಡೊಮೆಸ್ಟಿಕ್ ವಿಮಾನಗಳಲ್ಲಿ ಇಂಗ್ಲೀಷ್ ಜೊತೆ ಹಿಂದಿ ಭಾಷೆಯನ್ನು ಬಳಸುತ್ತಾರೆ. ಆದರೆ ಪ್ರಾದೇಶಿಕ ಭಾಷೆಯನ್ನು ಬಳಸೋದು ವಿರಳ. ಇದೀಗಾ ತುಳು ಭಾಷೆಯನ್ನು ಬಳಸಿದ್ದು ಈಗ ತುಳುವರಿಗೆ ಹೆಮ್ಮ ಪಡುವ ವಿಚಾರವಾಗಿದೆ.

Comments are closed.