International

ಫಿಲಿಪೀನ್ಸ್‌ನಿಂದ ಗ್ಯಾಂಗ್‌ಸ್ಟರ್ ಸುರೇಶ್ ಪೂಜಾರಿ ಗಡಿಪಾರು; ಮುಂಬೈ ಪೊಲೀಸರ ವಶಕ್ಕೆ ವಾಂಟೆಡ್ ಆರೋಪಿ..!?

Pinterest LinkedIn Tumblr

ಮುಂಬೈ: ಹಲವು ಸುಲಿಗೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಭೂಗತ ಪಾತಕಿ ಸುರೇಶ್ ಪೂಜಾರಿಯನ್ನು ಫಿಲಿಪೈನ್ಸ್​ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಥಾಣೆ, ಕಲ್ಯಾಣ್, ಉಲ್ಲಾಸನಗರ ಹಾಗೂ ಡೊಂಬಿವಿಲಿಯಲ್ಲಿ ನಡೆದ ಸುಲಿಗೆ ಪ್ರಕರಣಗಳಲ್ಲಿ ಆತ ಪೊಲೀಸರಿಗೆ ಬೇಕಾಗಿರುವ ಅರೋಪಿ. ನಿನ್ನೆ ತಡರಾತ್ರಿ ಆತನನ್ನು ದೆಹಲಿಗೆ ಕರೆತರಲಾಗಿದ್ದು ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಬೇಹುಗಾರಿಕೆ ದಳ ಹಾಗೂ ಸಿಬಿಐ ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಗುಪ್ತಚರದಳ (ಐಬಿ) ಹಾಗೂ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ ನಂತರ ಆತನನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗುವುದು. ಆತನನ್ನು ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲು ಮುಂಬೈ ಅಪರಾಧ ವಿಭಾಗದ ತಂಡವೊಂದು ಈಗಾಗಲೇ ದೆಹಲಿಗೆ ತೆರಳಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

2017 ರಲ್ಲಿ ಮುಂಬೈ ಹಾಗೂ 2018ರಲ್ಲಿ ಥಾಣೆ ಪೊಲೀಸರುಸುರೇಶ್ ಪೂಜಾರಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದರು. 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪೂಜಾರಿಯನ್ನು ಅಕ್ಟೋಬರ್‌ನಲ್ಲಿ ಫಿಲಿಪೈನ್ಸ್‌ನಲ್ಲಿ ಬಂಧಿಸಲಾಗಿತ್ತು.

ಸುರೇಶ್ ಪೂಜಾರಿ ವಿರುದ್ಧ ಥಾಣೆಯಲ್ಲಿ ಒಟ್ಟು 23 ಸುಲಿಗೆ ಪ್ರಕರಣಗಳು ದಾಖಲಾಗಿದ್ದು, ಆತ ಗ್ಯಾಂಗ್’ಸ್ಟರ್ ರವಿ ಪೂಜಾರಿಯ ಸಹಚರನಾಗಿದ್ದನು. 2007ರಲ್ಲಿ ಆತ ರವಿ ಪೂಜಾರಿಯಿಂದ ದೂರ ಸರಿದು ವಿದೇಶಕ್ಕೆ ಪರಾರಿಯಾಗಿದ್ದನು.

Comments are closed.