Karavali

ಕರ್ನಾಟಕ ರಾಜ್ಯ ದೇವಾಡಿಗರ ಸಂಘ(ರಿ.) ಮಂಗಳೂರು ಹಾಗೂ ದೇವಾಡಿಗ ಸಂಘ ದುಬೈ ವತಿಯಿಂದ ವಿದ್ಯಾರ್ಥಿವೇತನ ವಿತರಣೆ

Pinterest LinkedIn Tumblr

*ಸನ್ಮಾನ, ಪ್ರಶಸ್ತಿಗಳು ಗುರಿ-ಸಾಧನೆಯ ಆರಂಭದ ಮೆಟ್ಟಿಲಾಗಬೇಕು: ಉದ್ಯಮಿ ಹರೀಶ್ ಶೇರಿಗಾರ್*

ಮಂಗಳೂರು: ಶಿಕ್ಷಣ ಎಂಬುದು ವಿದ್ಯಾರ್ಥಿಗಳ ಜೀವನದ ಮಹಾನ್ ಘಟ್ಟ. ಪ್ರಶಸ್ತಿ ಪಡೆದ ಬಳಿಕ ಗುರಿಯ ಅಂತ್ಯ ಆಗಬಾರದು. ಸನ್ಮಾನ, ಪ್ರಶಸ್ತಿಗಳು ಗುರಿ-ಸಾಧನೆಯ ಆರಂಭದ ಮೆಟ್ಟಿಲಾಗಬೇಕು. ವಿದ್ಯಾರ್ಥಿವೇತನ ಪಡೆಯುವುದರಿಂದ ಬದ್ದತೆ ಹಾಗೂ ಜವಬ್ದಾರಿ ಹೆಚ್ಚಲಿದ್ದು ಸಮಾಜಕ್ಕೆ ಹೆಮ್ಮೆ ತರುವ ಸಾಧನೆ ಮಾಡಬೇಕು. ನಿರಂತರ ಪರಿಶ್ರಮ, ಶಿಸ್ತು, ಸಮಯದ ಮೌಲ್ಯ, ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿದು ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯ ದೇವಾಡಿಗರ ಸಂಘ(ರಿ.) ಮಂಗಳೂರು ಇದರ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷರು, ದುಬೈ ಉದ್ಯಮಿಗಳಾದ ಹರೀಶ್ ಶೇರಿಗಾರ್ ಹೇಳಿದರು.

ಕರ್ನಾಟಕ ರಾಜ್ಯ ದೇವಾಡಿಗರ ಸಂಘ(ರಿ.) ಮಂಗಳೂರು ಹಾಗೂ ದೇವಾಡಿಗ ಸಂಘ ದುಬೈ ಇವರ ಆಶ್ರಯದಲ್ಲಿ ಆ.9 ರವಿವಾರ ಮಂಗಳೂರಿನ ಮಣ್ಣಗುಡ್ಡದಲ್ಲಿರುವ ದೇವಾಡಿಗ ಸಮಾಜಭವನದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ನಿರಾಸೆ ಬೇಡ. ಸೋಲು ಗೆಲುವಿನ ಸೋಪಾನವಾಗಬೇಕು. ನಿಮ್ಮ ಜೊತೆ ದೇವಾಡಿಗ ಸಮಾಜ ಜೊತೆಗಿರಲಿದೆ. ವಿದ್ಯಾರ್ಥಿಗಳು ಕಂಡ ಕನಸ್ಸನ್ನು ನನಸು ಮಾಡಿಕೊಳ್ಳಲು ಗರಿಷ್ಠ ಯತ್ನ ಮಾಡಬೇಕು ಎಂದು ಕರೆ ನೀಡಿದ ಅವರು ಕರ್ನಾಟಕ ರಾಜ್ಯ ದೇವಾಡಿಗರ ಸಂಘ(ರಿ.) ಮಂಗಳೂರು ಇದರ ಶತಮಾನೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ ತಿಂಗಳ 20ರಂದು ನಡೆಸಲು ಉದ್ದೇಶಿಸಲಾಗಿದೆ. ಈ ಪ್ರಯುಕ್ತ ಮಂಗಳಾ ಶಾಲೆಯನ್ನು ಅಭಿವೃದ್ದಿ ಜೊತೆಗೆ, ಕ್ಯಾಂಪಸ್, ಕಟ್ಟಡ ಮೊದಲಾದವುಗಳನ್ನು ನಿರ್ಮಿಸುವ ‘ಮಂಗಳಾ ಮಿಷನ್’ ಯೋಜನೆ ಮಾಡಲಾಗುತ್ತಿದೆ ಎಂದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆ ಅಂಕಗಳನ್ನು ಗಳಿಸುವ ಜೊತೆಗೆ ಜೀವನದ ಶಾಲೆಯಲ್ಲಿ ತೇರ್ಗಡೆ ಹೊಂದಿ ಮುಖ್ಯವಾಹಿನಿಗೆ ಬರಬೇಕು. ಅವರಿಗೆ ಉತ್ತಮ ಅವಕಾಶಗಳು ಲಭಿಸಬೇಕು. ವಿದ್ಯೆಯಲ್ಲಿ ಕಾಳಜಿ ವಹಿಸಿ ಉನ್ನತ ಸ್ಥಾನಕ್ಕೆ ಬಂದು ಯಶಸ್ಸು ಗಳಿಸಲು ಈ ಕಾರ್ಯಕ್ರಮ ಸಹಕಾರಿ. ಈ ನಿಟ್ಟಿನಲ್ಲಿ ಕರ್ನಾಟಕ ದೇವಾಡಿಗ ಸಂಘದ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳು ತಂದೆ-ತಾಯಿಯ ಸಹಕಾರವನ್ನು ನಿರ್ಲಕ್ಷಿಸಬಾರದು. ಅವರ ತ್ಯಾಗವನ್ನು ಅರ್ಥೈಸಿಕೊಳ್ಳಬೇಕು. ವಿದ್ಯಾರ್ಥಿಗಳ ಮನಸ್ಸು, ಮಾನಸಿಕತೆ ಚಂಚಲಗೊಳ್ಳಬಾರದು. ಯಾವುದೇ ವಿಚಾರವನ್ನು ಕಣ್ಣಾರೆ ಕಂಡರೂ ಅದನ್ನು ಪರಾಮರ್ಶಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಸತ್ಯವನ್ನು ಅರಿಯುವ ಮಾನಸಿಕತೆ ಇರಬೇಕು. ಗುರು-ಹಿರಿಯರಿಗೆ ಗೌರವ ನೀಡುವ ವಿನಯತೆ ಬೆಳೆಸಿಕೊಳ್ಳಬೇಕು. ವಿದ್ಯೆ ಮತ್ತು ಸಾಕ್ಷರತೆಯ ನಡುವಿನ ವಿಚಾರ ಅರಿಯಬೇಕು ಎಂದು ಕರೆನೀಡಿದರು. ಆಧುನಿಕತೆಯ ಹೊಡೆತಕ್ಕೆ ಸಿಕ್ಕು ಹಳೆಯ ನೆನಪು, ಅನುಭವಗಳು ಮರೆಯಾಗಿದೆ. ಹಿಂದಿನ ಇತಿಹಾಸವನ್ನು ಅರಿಯುವ ಕೆಲಸ ಮಾಡಿದರೆ ಸಮಾಜದಲ್ಲಿ ನಡೆದ ಬದಲಾವಣೆಗಳ ಬಗ್ಗೆ ತಿಳಿಯಲು ಸಾಧ್ಯ ಎಂದರು.

ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಮಾಜಿ ಪ್ರಧಾನ‌ಕಾರ್ಯದರ್ಶಿ ಬಾಬು ದೇವಾಡಿಗ ಅಂಬ್ಲಮೊಗರು

ಅವರ ವತಿಯಿಂದ ವೈದ್ಯಕೀಯ ವಿಭಾಗದಲ್ಲಿ ವಂಶಿ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನನ್ಯಾ ಎಂ. ಅವರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಕರ್ನಾಟಕ ರಾಜ್ಯ ದೇವಾಡಿಗರ ಸಂಘ‌ (ರಿ) ಮಂಗಳೂರು ಇದರ ಉಪಾಧ್ಯಕ್ಷ ಕರುಣಾಕರ್ ಎಮ್.ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇದರ ಮಾಜಿ ಅಧ್ಯಕ್ಷರು ಹಾಗೂ ವಿಷನ್ ಮಂಗಳ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷರಾದ ಡಾ. ದೇವರಾಜ್ ಕೆ., ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರೊಫೆಸ‌ರ್ ಮತ್ತು ಜೀವಶಾಸ್ತ್ರ ವಿಭಾಗೀಯ ಮುಖ್ಯಸ್ಥರಾದ ಡಾ. ಶೋಭಾ ಬಾಬು ದೇವಾಡಿಗ ಅಂಬ್ಲಮೊಗರು, ದುಬೈ ದೇವಾಡಿಗರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ದೇವಾಡಿಗ, ಉಡುಪಿ ನಗರಸಭೆ ಮಾಜಿ ಸದಸ್ಯ ವಿಜಯ್ ಕೊಡವೂರು, ಗಲ್ಫ್ ಫೈಪ್ಲೇನ್ ಟೆಸ್ಟಿಂಗ್ ಆಂಡ್ ಇನ್ಸ್‌ಪೆಕ್ಷನ್ ದುಬೈನ ವಿನೀತ್ ಕದ್ರಿ, ಟೈರೋಲಿಟ್ ಮಿಡಲ್ ಈಸ್ಟ್(ಎಫ್.ಝಡ್.ಇ) ಭರತ್ ದಾಮೋದರ್, ಶಾಂತಿ ಚರ್ಚ್ ಹಿರಿಯ ನಾಗರಿಕ ಸಹಭಾಗಿತ್ವ ವಿಭಾಗದ ಅಧ್ಯಕ್ಷ ಲಯನ್ ಎಡ್ವಿನ್ ವಾಲ್ಟರ್, ರೋಟರಿ ಕ್ಲಬ್ ಮಂಗಳೂರು ಉತ್ತರದ ಕಾರ್ಯದರ್ಶಿ ಗಣೇಶ್ ಹೆಗ್ಡೆ, ರೊಟೇರಿಯನ್ ಎಂ.ಕೆ. ಸುಬ್ರಾಯ ಪ್ರಭು, ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರಿನ ಕೋಶಾಧಿಕಾರಿ ಗೀತಾ ವಿ. ಕಲ್ಯಾಣ್‌ಪುರ್, ಜೊತೆ ಕಾರ್ಯದರ್ಶಿಗಳಾದ ಉದಯ್ ಕುಮಾರ್ ಕಣ್ವತೀರ್ಥ, ಸಂಘಟನಾ ಕಾರ್ಯದರ್ಶಿ ಸತೀಶ್, ಮಂಗಳಾ ಶಾಲೆಯ ಸಂಚಾಲಕ ಶೇಖರ್ ಮೊಯಿಲಿ ಪದೆಬೆಟ್ಟು, ಮಹಿಳಾ ಸಂಘಟನೆಯ ಅಧ್ಯಕ್ಷೆ ಜ್ಯೋತಿ ಪ್ರವೀಣ್, ಕಾರ್ಯದರ್ಶಿ ಜ್ಯೋತಿ ಸುನೀಲ್, ಯುವ ಸಂಘಟನೆ ಅಧ್ಯಕ್ಷ ಸುಮಿತ್ ದೇವಾಡಿಗ, ಕಾರ್ಯದರ್ಶಿ ಅವಿನಾಶ್ ದೇವಾಡಿಗ ಹಾಗೂ ಕೇಂದ್ರ ಸಮಿತಿ ಮತ್ತು ಮಹಿಳಾ ಹಾಗೂ ಯುವ ಸಂಘಟನೆ ಪದಾಧಿಕಾರಿಗಳಿದ್ದರು.

ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರಿನ ಪ್ರಧಾನ ಕಾರ್ಯದರ್ಶಿ ವೀಣಾ ಗಣೇಶ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಯಶ್ವಿತಾ ನಿರೂಪಿಸಿ, ಜೊತೆಕಾರ್ಯದರ್ಶಿ ರೋಹಿತಾಕ್ಷ ಮರೋಳಿ ವಂದಿಸಿದರು.

ಇದೇ ಸಂದರ್ಭದಲ್ಲಿ ಎಮ್. ಕೆ ಸುಬ್ರಾಯ ಪ್ರಭು ಇವರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ವೃತ್ತಿ ಮಾರ್ಗದರ್ಶನ, ಶೈಕ್ಷಣಿಕ ಸಾಲಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನೀಡಿದರು.

ಸನ್ಮಾನ, ವಿದ್ಯಾರ್ಥಿವೇತನ ವಿತರಣೆ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಾದ ಸಮೀಕ್ಷಾ, ತುಷಾರ್ ಎಸ್. ದೇವಾಡಿಗ, ಅಧಿತಿ ವಿಜಯ ದೇವಾಡಿಗ, ಮನೋಜ್, ರಶ್ಮಿತಾ ರವಿ, ಸಮನ್ವಿ ಎಸ್, ಆರೂಷ್ ಪಿ. ದೇವಾಡಿಗ, ನಿಸರ್ಗಾ, ಧನ್ಯಾ ಎಸ್. ದೇವಾಡಿಗ, ಶಮಿತ್ ದೇವಾಡಿಗ, ರಿಧಿ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಶ್ರಾವ್ಯಾ ಜಿ. ದೇವಾಡಿಗ, ಅಮೂಲ್ಯಾ, ಶ್ರಿಮಾ, ಕೃತಿ ಕೆ. ದೇವಾಡಿಗ, ಶ್ರೀನಿಧಿ ದೇವಾಡಿಗ, ಪ್ರಜ್ಞಾ,  ರಶ್ಮಿತಾ ಪೂರ್ಣಿಮಾ, ದೀಕ್ಷಿತಾ, ಅರ್ಚನಾ ದೇವಾಡಿಗ ಅವರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

(ಚಿತ್ರಗಳು, ವರದಿ- ಯೋಗೀಶ್ ಕುಂಭಾಶಿ)

Comments are closed.