International

ಅಮೆರಿಕದ ಕೆಂಟಕಿ ಸೇರಿ ಹಲವೆಡೆ ಸುಂಟರಗಾಳಿ ಆರ್ಭಟ; 80ಕ್ಕೂ ಹೆಚ್ಚು ಮಂದಿ ಬಲಿಯಾಗಿರುವ ಶಂಕೆ

Pinterest LinkedIn Tumblr

ವಾಷಿಂಗ್ಟನ್: ಸುಂಟರಗಾಳಿಯ ಅಬ್ಬರಕ್ಕೆ ಅಮೆರಿಕದ 5 ರಾಜ್ಯಗಳ ಜನರು ತತ್ತರಿಸಿ ಹೋಗಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಈವರೆಗೆ ಅನಾಹುತದಲ್ಲಿ 80ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಅಮೆರಿಕದ ಇತಿಹಾಸದಲ್ಲಿಯೇ ಇದು ಬಹುದೊಡ್ಡ ಸುಂಟರಗಾಳಿ’ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಅರ್ಕಾನ್ಸಾಸ್, ಮಿಸಿಸಿಪಿ, ಇಲಿನಾಯ್ಸ್, ಕೆಂಟುಕಿ, ಟೆನ್ನೆಸ್ಸಿ ರಾಜ್ಯಗಳಲ್ಲಿ ಶನಿವಾರ ಸುಂಟರಗಾಳಿಯು ಭಾರೀ ಹಾನಿ ಮಾಡಿದೆ. ಕೆಂಟುಕಿಯಲ್ಲಿಯೇ ಸುಮಾರು 50 ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಗಾಳಿಯ ಅಬ್ಬರಕ್ಕೆ ಮೇಣದ ಬತ್ತಿ ತಯಾರಿಕಾ ಕಾರ್ಖನೆ ಸಂಪೂರ್ಣ ನಾಶಗೊಂಡಿದೆ. ಸುಂಟರಗಾಳಿ ಬೀಸುವಾಗ ಕಾರ್ಖನೆಯಲ್ಲಿ 110 ಜನರು ಕೆಲಸ ಮಾಡುತ್ತಿದ್ದರು. ಗಾಳಿಯ ತೀವ್ರತೆಗೆ ಕಾರ್ಖಾನೆ ಮೇಲ್ಛಾವಣಿ ಕುಸಿದಿದೆ. 40 ಜನರನ್ನು ಅವಶೇಷಗಳ ಅಡಿಯಿಂದ ರಕ್ಷಣೆ ಮಾಡಲಾಗಿದೆ.

ಸುಂಟರಗಾಳಿಯ ಅಬ್ಬರದಿಂದ ಹಾನಿಯಾದ ಹಿನ್ನಲೆಯಲ್ಲಿ ಕೆಂಟುಕಿ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿ ಗವರ್ನರ್ ಆಂಡಿ ಬೆಶಿಯರ್ ಆದೇಶ ಹೊರಡಿಸಿದ್ದಾರೆ. ಕೆಂಟುಕಿಯ ಇತಿಹಾಸದಲ್ಲಿಯೇ ಇಂತಹ ಸುಂಟರಗಾಳಿ ನೋಡಿಲ್ಲ. ಇಂತಹ ಗಾಳಿಯನ್ನು ನಾನು ನೋಡಿಲ್ಲ. ಗಾಳಿಯ ತೀವ್ರತೆ ತಿಳಿಸಲು ನನಗೆ ಪದಗಳೇ ಸಿಗುತ್ತಿಲ್ಲ ಎಂದು ಗವರ್ನರ್ ಆಂಡಿ ಬೆಶಿಯರ್ ಹೇಳಿದ್ದಾರೆ.

ಇಲಿನಾಯನ್ಸ್‌ನಲ್ಲಿರುವ ಅಮೆಝಾನ್ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ 6 ಜನರು ಮೃತಪಟ್ಟಿದ್ದಾರೆ. ಕ್ರಿಸ್‌ಮಸ್ ಹಿನ್ನಲೆಯಲ್ಲಿ ಹೆಚ್ಚಿನ ಆರ್ಡರ್‌ಗಳಿದ್ದ ಕಾರಣ ರಾತ್ರಿ ಪಾಳಿಯಲ್ಲಿ ಹಲವಾರು ಜನರು ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಪುರಾತನ ಕಟ್ಟಡಗಳಿಗೂ ಸುಂರಟಗಾಳಿಯಿಂದ ಹಾನಿಯಾಗಿದೆ. ಹಲವು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಕಾರು ಸೇರಿದಂತೆ ಇತರ ವಾಹನಗಳು ಮೈದಾನಕ್ಕೆ ಹೋಗಿ ಬಿದ್ದಿವೆ.  ಕೆಲವು ಪ್ರದೇಶಗಳಲ್ಲಿ ಚರ್ಚ್‌ಗೆ ಹಾನಿಯಾಗಿದೆ. ಹಲವಾರು ಕಡೆ ನೀರಿನ ಸಂಪರ್ಕ ಸ್ಥಗಿತಗೊಂಡಿದೆ. ವಿದ್ಯುತ್ ವಿತರಣಾ ವ್ಯವಸ್ಥೆಗೆ ಹಾನಿಯಾಗಿದೆ. ಸುಂಟರಾಳಿಯ ಅಬ್ಬರಕ್ಕೆ ಬಾಂಬ್ ಸ್ಫೋಟದಂತೆ ಅನುಭವವಾಯಿತು ಎಂದು ಕೆಲವು ಜನರು ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ.

ಗಾಳಿಯ ಅಬ್ಬರಕ್ಕೆ ನಾಲ್ಕು ರಾಜ್ಯಗಳಲ್ಲಿ ಸುಮಾರು 3,31,549 ಗ್ರಾಹಕರು ವಿದ್ಯುತ್ ಸಂಪರ್ಕ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಒಟ್ಟು 5 ರಾಜ್ಯಗಳಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚುವ ಸಂಭವವಿದೆ.

ಅರ್ಕಾನ್ಸಾಸ್ ಪ್ರದೇಶದಲ್ಲಿ ಮೊನೆಟ್ ನರ್ಸಿಂಗ್ ಹೋಂಗೆ ಸುಂಟರಗಾಳಿ ಹಾನಿ ಮಾಡಿದೆ. ಇಬ್ಬರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸುಂಟರಗಾಳಿಯ ಅಬ್ಬರದ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Comments are closed.