International

ಫ್ರಿಡ್ಜ್’ನಲ್ಲಿಟ್ಟಿದ್ದ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ದುರ್ಮರಣ

Pinterest LinkedIn Tumblr

ಬೀಜಿಂಗ್: ಪ್ರಿಡ್ಜ್ ನಲ್ಲಿಡಲಾಗಿದ್ದ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವಿಗೀಡಾಗಿದ್ದಾರೆ. ರುಚಿ ಇಲ್ಲವೆಂದು ಜೋಳದ ನೂಡಲ್ಸ್ ತಿರಸ್ಕರಿಸಿದ್ದ ಮೂವರು ಮಕ್ಕಳು ಅದೃಷ್ಟವಶಾತ್ ಬದುಕುಳಿದ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ಈಶಾನ್ಯ ಪ್ರಾಂತ್ಯ ಹೆಲಾಂಗ್ಜಿಯಾಂಗ್ನ ಜಿಕ್ಸಿ ನಗರದ ನಿವಾಸಿಗಳು ಮೃತ ದುರ್ದೈವಿಗಳು.

ಜೋಳದ ಹಿಟ್ಟಿನ ನೂಡಲ್ಸ್ ಅನ್ನು ಸುಮಾರು ಒಂದು ವರ್ಷಗಳಿಂದ ಫ್ರಿಡ್ಜ್ ನಲ್ಲಿಡಲಾಗಿತ್ತು. ಅದನ್ನು ಗಮನಿಸದೆ ಎಲ್ಲರೂ ನೂಡಲ್ಸ್ ಸೇವಿಸಿದ್ದಾರೆ. ನೂಡಲ್ಸ್ ನಲ್ಲಿದ್ದ ಬೊಂಗ್ರೆಕಿಕ್ ವಿಷಕಾರಿ ಆಮ್ಲದ ಪರಿಣಾಮ ಎಲ್ಲರೂ ಮೃತಪಟ್ಟಿದ್ದಾರೆ.

ಬೊಂಗ್ರೆಕಿಕ್ ಆಸಿಡ್ ವಿಷವು ಹೆಚ್ಚು ಮಾರಕವಾಗಿರುತ್ತದೆ ಎಂದು ಹೆಲಾಂಗ್ಜಿಯಾಂಗ್ನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಆಹಾರ ಸುರಕ್ಷತಾ ನಿರ್ದೇಶಕ ಗಾವೋ ಫೀ ತಿಳಿಸಿದ್ದಾರೆ. ಕಲುಷಿತ ಆಹಾರ ಸೇವಿಸಿದ ಕೆಲವೇ ಗಂಟೆಗಳಲ್ಲಿ ಬೊಂಗ್ರೆಕಿಕ್ ಆಸಿಡ್ ರೋಗ ಲಕ್ಷಣಗಳು ಆರಂಭವಾಗುತ್ತವೆ. ಹೊಟ್ಟೆ ನೋವು, ಬೆವರುವುದು, ದೌರ್ಬಲ್ಯ ಮತ್ತು ಕೊನೆಯಲ್ಲಿ ಕೋಮಾಗೆ ಜಾರುತ್ತಾರೆ. ಬಳಿಕ ಬಹು ಅಂಗಾಂಗ ವೈಫಲ್ಯಗೊಂಡು 24 ಗಂಟೆಗಳಲ್ಲೇ ಸಾವು ಸಂಭವಿಸುವ ಸಾಧ್ಯತೆಗಳಿದೆ ಎಂದು ಗಾವೋ ಮಾಹಿತಿ ನೀಡಿದ್ದಾರೆ.

Comments are closed.