India

ನೆನೆಸಿ ಮೊಳಕೆಯೊಡೆದ ಕಾಳು, ಬೀಜ ಸೇವನೆ : ಆರೋಗ್ಯಕ್ಕೆ ಪೂರಕ

Pinterest LinkedIn Tumblr

socked_grains_pic

ಆರೋಗ್ಯ ಸುಧಾರಣೆಗೆ ನೆನೆಸಿದ ಕಾಳು, ಬೀಜ, ಮೊಳಕೆಯೊಡೆದ ಕಾಳುಗಳೂ ಸಹಕಾರಿಯಾಗಲಿದೆ. ಸಾಮಾನ್ಯವಾಗಿ ಹೆಸರು ಕಾಳುಗಳನ್ನು ನೆನೆಸಿ, ಮೊಳಕೆಯೊಡೆದ ನಂತರ, ಅವುಗಳನ್ನು ಬಳಸಿ ವಿವಿಧ ಖಾದ್ಯಗಳನ್ನು ಮನೆಗಳಲ್ಲಿ ಮಾಡುತ್ತಾರೆ.

ಇಂತಹ ಕಾಳುಗಳ ಸೇವನೆಯಿಂದ ಅಶಕ್ತರ ಮತ್ತು ಗರ್ಭೀಣಿಯರಲ್ಲಿ ಹೆಚ್ಚಿನ ಚೈತನ್ಯ ಬರಲು ನೆರವಾಗಲಿದೆ. ಹೆಸರುಕಾಳು ಮಾತ್ರವಲ್ಲದೆ, ಇನ್ನೂ ಹಲವು ಧಾನ್ಯ ಮತ್ತು ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ದೇಹದ ಮೇಲೆ ಒಳ್ಳೆಯ ಪರಿಣಾಮಗಳನ್ನು ಬೀರುತ್ತವೆ.

ಎಲ್ಲಾ ಕಾಳುಗಳಲ್ಲಿ ಸರ್ವೇಸಾಮಾನ್ಯವಾಗಿ ಫೈಟಿಕ್ ಆಮ್ಲ, ಟ್ಯಾನಿನ್ ಮತ್ತು ಇತರ ವಿಷಕಾರಿ ವಸ್ತುಗಳು ಇರುತ್ತವೆ. ಆದ್ದರಿಂದಲೇ ಕೆಲವು ಕಾಳು ಮತ್ತು ಬೀಜಗಳನ್ನು ಹಾಗೆಯೇ ತಿನ್ನುವಂತಿಲ್ಲ. ಏಕೆಂದರೆ ಕೆಲವೊಮ್ಮೆ ಇವು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿರುತ್ತದೆ.

ವಿಶೇಷವಾಗಿ ಫೈಟಿಕ್ ಆಮ್ಲ ಮತ್ತು ಟ್ಯಾನಿನ್ ಕಣಗಳಿಂದ ಅಲರ್ಜಿಯಾಗುವವರಿಗೆ ಮಾರಕವಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ನೆನೆಸಿಡುವ ಮೂಲಕ ಕಾಳು ಮತ್ತು ಬೀಜಗಳ ಒಳಭಾಗಗಳು, ಗಟ್ಟಿಯಾದ ದಳಗಳು ಮೃಧುವಾಗಿ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.

ಕಾಳು ಮತ್ತು ಬೀಜಗಳನ್ನು ನೆನೆಸಿಟ್ಟ ಅವಧಿಯಲ್ಲಿ ಅವುಗಳಲ್ಲಿರುವ ವಿಷಕಾರಿ ವಸ್ತುಗಳು ಕರಗಿ ನೀರಿನಲ್ಲಿ ಬೆರೆತು ಹೋಗುವ ಮೂಲಕ ಇವುಗಳಿಂದಾದ ಬಹುದಾದ ತೊಂದರೆಗಳು ದೂರವಾಗಲಿವೆ. ನಮ್ಮ ಜೀರ್ಣಾಂಗಗಳೂ ಸಹ ಹೆಚ್ಚಿನ ಕಾಳು ಮತ್ತು ಧಾನ್ಯಗಳನ್ನು ಹಾಗೆಯೇ ಜೀರ್ಣಿಸಿಕೊಳ್ಳಲಾರವು. ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಹಕ್ಕಿಗಳಿಗೆ ಇರುತ್ತದೆ. ಆದರೆ ಕೆಲವರಲ್ಲಿ ಅಗಾಧ ಶಕ್ತಿಯಿದ್ದು ಒಣಬೀಜಗಳನ್ನು ಸಮರ್ಥವಾಗಿ ಜೀರ್ಣಿಸಿಕೊಳ್ಳಬಲ್ಲರು.

ಆದರೆ ಇಂತಹ ಅಭ್ಯಾಸ ಒಳ್ಳೆಯದಲ್ಲ. ಒಂದೆರಡು ಬಾರಿ ಜೀರ್ಣಿಸಿಕೊಂಡರೂ ಅದಕ್ಕಾಗಿ ಜೀರ್ಣಾಂಗಗಳು ಹೆಚ್ಚಿನ ಕ್ರಮ ವಹಿಸಿರುತ್ತವೆ. ಅದು ನಮ್ಮ ಅರಿವಿಗೆ ಬರುವುದಿಲ್ಲ.ನೆನೆಸಿಟ್ಟ ಕಾಳುಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿರುವ ತೊಂದರೆ ನಿವಾರಣೆಯಾಗಲಿದೆ. ನೆನೆಸಿಡದ ಕಾಳುಗಳಲ್ಲಿರುವ ಫೈಟಿಕ್ ಆಮ್ಲ, ದೇಹ ಖನಿಜಗಳನ್ನು ಹೀರಿಕೊಳ್ಳದಂತೆ ತಡೆಯುತ್ತದೆ. ಪರಿಣಾಮವಾಗಿ ಆಹಾರದಲ್ಲಿನ ಸತು, ಕಬ್ಬಿಣ, ಮೆಗ್ನೀಶಿಯಂನಂತಹ ಉತ್ತಮ ಖನಿಜಗಳನ್ನು ಹೀರಿಕೊಳ್ಳಲು ಜೀರ್ಣಾಂಗಗಳು ಅಸಮರ್ಥವಾಗುತ್ತವೆ.

ಕೆಲವೊಮ್ಮೆ ಅಂಗಾಂಗಗಳ ಸಾಮರ್ಥಕ್ಯೂ ಮೀರಿ ವಿಷಕಾರಿ ವಸ್ತುಗಳು ಬಂದಾಗ ಅಂಗಾಂಗಗಳು ಕೈಚೆಲ್ಲಿ, ಅಜೀರ್ಣವಾಗುವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು. ಕಾಳುಗಳನ್ನು ನೆನೆಸಿಟ್ಟು ಸೇವಿಸುವ ಮೂಲಕ ಮೂಲದಲ್ಲಿಯೇ ಇಂತಹ ತೊಂದರೆಯನ್ನು ದೂರ ಮಾಡಬಹುದು.

Write A Comment