India

ಒರಿಸ್ಸಾದ ಮಾಜಿ ಮುಖ್ಯಮಂತ್ರಿ ಪಟ್ನಾಯಕ್ ನಿಧನ

Pinterest LinkedIn Tumblr

JP-Patnayak

ಗುವಾಹಟಿ, ಏ.21- ಅಸ್ಸೋಂನ ಮಾಜಿ ರಾಜ್ಯಪಾಲ ಒರಿಸ್ಸಾದ ಮಾಜಿ ಮುಖ್ಯಮಂತ್ರಿ ಜೆ.ಪಿ.ಪಟ್ನಾಯಕ್ ತೀವ್ರ ಹೃದಯಾಘಾತದಿಂದ ಇಂದು ತಿರುಪತಿಯಲ್ಲಿ ನಿಧನರಾಗಿದ್ದಾರೆ. 89 ವರ್ಷದ ಕಾಂಗ್ರೆಸ್ ಹಿರಿಯ ಮುಖಂಡ ಜೆ.ಪಿ.ಪಟ್ನಾಯಕ್ ತಿರುಪತಿಯಲ್ಲಿ ನಡೆಯುತ್ತಿದ್ದ ಸಂಸ್ಕೃತ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಸೋಮವಾರ ತಡರಾತ್ರಿ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರೆಂದು ವೈದ್ಯರು ತಿಳಿಸಿದ್ದಾರೆ.

ತಿರುಪತಿಯಿಂದ ಪಟ್ನಾಯಕ್ ಮೃತದೇಹವನ್ನು ಅವರ ಹುಟ್ಟೂರಾದ ಪುರಿಗೆ ವಿಶೇಷ ವಿಮಾನದಲ್ಲಿ ಕರೆದೊಯ್ಯಲಾಗುತ್ತಿದ್ದು, ಅಂತಿಮ ವಿಧಿ-ವಿಧಾನಗಳು ಅಲ್ಲಿಯೇ ನಡೆಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜೆ.ಪಿ.ಪಟ್ನಾಯಕ್ ನಿಧನಕ್ಕೆ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಒಂದು ವಾರದ ಕಾಲ ಶೋಕಾಚರಣೆ ಘೊಷಣೆ ಮಾಡಲಾಗಿದೆ.  1980-89 ಮತ್ತು 1995-99ರ ಅವಧಿಯಲ್ಲಿ ಒರಿಸ್ಸಾದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಪಟ್ನಾಯಕ್ ಹಲವು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದು ಮನೆಮಾತಾಗಿದ್ದರು.  2009ರಿಂದ 2014ರ ವರೆಗೆ ಅಸ್ಸೋಂನ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು. 1927 ಜನವರಿ 3ರಂದು ಜನಿಸಿದ್ದ ಪಟ್ನಾಯಕ್ ಉತ್ಕಲ್ ಸಂಸ್ಕೃತಿ ವಿಶ್ವವಿದ್ಯಾನಿಲಯದಲ್ಲಿ ಪದವೀದರರಾಗಿದ್ದರು.  1949ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲದ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ನಂತರ ಒರಿಸ್ಸಾದ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿದ್ದರು.  1989ರಲ್ಲಿ ಕೇಂದ್ರದ ಪ್ರವಾಸೋದ್ಯಮ, ನಾಗರಿಕ ವಿಮಾನಯಾನ, ಕಾರ್ಮಿಕ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರಾಜಕೀಯ ಜಂಜಾಟಗಳ ನಡುವೆಯೂ ಪಟ್ನಾಯಕ್ ಒಬ್ಬ ಅತ್ಯುತ್ತಮ ಬರಹಗಾರರಾಗಿದ್ದರು. ಅವರು ಅನೇಕ ಪುಸ್ತಕಗಳನ್ನು ಬರೆದಿರುವುದೇ ಸಾಕ್ಷಿಯಾಗಿದೆ.

Write A Comment