ಆರೋಗ್ಯ

ಶಿರೂರಿನಲ್ಲಿ ಮೋದಿ ಹೆಸರಲ್ಲಿ ಆರೋಗ್ಯ ತಪಾಸಣಾ ಶಿಬಿರ: ಜಿಲ್ಲಾ ಎಸ್ಟಿ ಮೋರ್ಚಾ ಪ್ರ.ಕಾರ್ಯದರ್ಶಿ ಪ್ರಭಾಕರ್ ಉದ್ಘಾಟನೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆ ಸೇವಾ ಪಾಕ್ಷಿಕ ಕಾರ್ಯಕ್ರಮವು ಶಿರೂರಿನ ಐದು ಬೂತ್ ಮಟ್ಟದಲ್ಲಿ ಶಿರೂರು ವೆಂಕಟರಮಣ ಸಭಾಭವನದಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿಜೆಪಿ ಎಸ್ಟಿ ಮೋರ್ಚಾದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಂದಾಪುರ ಮಾತನಾಡಿ, ಮೋದಿಯವರ 72ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಆದರ್ಶಗಳನ್ನು ನಾನು ಪಾಲಿಸಬೇಕಿದೆ. ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವಲ್ಲಿ ಪ್ರಧಾನಿಯವರ ದಿಟ್ಟ ಹೆಜ್ಜೆ ಮೆಚ್ಚುವಂತದ್ದು. ಆರೋಗ್ಯ ಹಾಗೂ ಸ್ವಚ್ಚತೆ ವಿಚಾರದಲ್ಲಿ ಪ್ರಧಾನಿಯವರು ಹಾಕಿಕೊಟ್ಟ ಮಾರ್ಗದಂತೆ ಈ ಮಹತ್ವದ ಕಾರ್ಯಕ್ರಮ ರೂಪಿಸಿದ್ದು ಮುಂದಿನ ದಿನಗಳಲ್ಲೂ ಕೂಡ ಬಡವರು ಹಾಗೂ ಮದ್ಯಮ ವರ್ಗದವರ ಪಾಲಿಗೆ ಈ ಕಾರ್ಯಕ್ರಮ ತಲುಪಬೇಕಿದೆ.

ಮಾಜಿ ತಾ.ಪಂ ಸದಸ್ಯ ಪುಷ್ಪರಾಜ್ ಶೆಟ್ಟಿ ಮಾತನಾಡಿ, ಪ್ರಧಾನಿಯವರ ಹುಟ್ಟುಹಬ್ಬದ ನಿಮಿತ್ತ ಹದಿನೈದು ದಿನಗಳ ಕಾಲ ಪ್ರತಿಯೊಂದು ಶಕ್ತಿ ಕೇಂದ್ರದಲ್ಲಿ ಸೇವಾ ಪಾಕ್ಷಿಕ ಹೆಸರಿನಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಬೂತ್ ಮಟ್ಟದಲ್ಲಿ ಐದೈದು ಬೂತ್ ಸೇರಿಸಿಕೊಂಡು ಈ ಕಾರ್ಯಕ್ರಮ ಸಂಯೋಜಿಸಲಾಗಿದೆ. ಪಕ್ಷ ಸಂಘಟನೆ ಜೊತೆಗೆ ಜನಪರವಾದ ಕಾರ್ಯಕ್ರಮ ನಡೆಸುವುದು ಹಾಗೂ ಅರಿವು ಮೂಡಿಸುವುದು ಇದರ ಮೂಲ ಉದ್ದೇಶ ಎಂದರು.

ಶಿರೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ ಮೊಗವೀರ ಉಪ್ಪುಂದ ಮಾತನಾಡಿ, ಭ್ರಷ್ಟಾಚಾರ ರಹಿತ ಆಡಳಿತವನ್ನು ದೇಶಕ್ಕೆ ನೀಡಿದ್ದು ಇದು ವಿಶ್ವಕ್ಕೆ ಮಾದರಿ. ಮೋದಿಯವರ ಆದರ್ಶಗಳು ನಮಗೆ ಮಾದರಿಯಾಗಿದ್ದು ಮುಂಬರುವ ಚುನಾವಣೆಯಲ್ಲಿ ರಾಷ್ಟ್ರದ ಹಿತಾಸಕ್ತಿಯಿಂದ ಕೆಲಸ ಮಾಡಬೇಕಿದೆ. ಬಿಜೆಪಿ ಕಾರ್ಯಕರ್ತರ ಪಕ್ಷ ಎಂಬುದು ಹಲವು ವಿಚಾರಗಳಲ್ಲಿ ನಿರೂಪಿಸಿದೆ ಎಂದರು.

ಶಿರೂರು ಸಮುದಾಯ ಆರೋಗ್ಯಾಧಿಕಾರಿ ಅಶ್ವಿನಿ ಆರೋಗ್ಯ ಮಾಹಿತಿ ನೀಡಿದರು. ಇದೇ ಸಂದರ್ಭ ಮದುಮೇಹ ತಪಾಸಣೆ, ರಕ್ತದೊತ್ತಡ ತಪಾಸಣೆ ಹಾಗೂ ಬೂಸ್ಟರ್ ಲಸಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಿರೂರು ಗ್ರಾ.ಪಂ ಸದಸ್ಯರಾದ ಬಾಬು ಮೊಗವೀರ, ರವೀಂದ್ರ ಶೆಟ್ಟಿ, ಶಂಕರ್ ಮೇಸ್ತ, ಗೀತಾ ವಿ. ಮೇಸ್ತ, ಬೂತ್ ಪ್ರಮುಖರಾದ ಸುಬ್ರಾಯ ನಾಯ್ಕ್, ಅನ್ನಪೂರ್ಣ ಎ. ಮೇಸ್ತ, ಪ್ರಕಾಶ್ ಮೇಸ್ತ, ದತ್ತಾತ್ರೇಯ ಮೊಗವೀರ, ಕೇಶವ ಮೇಸ್ತ ಮೊದಲಾದವರಿದ್ದರು.

ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ತುಳಸಿದಾಸ್ ಮೊಗವೀರ ಸ್ವಾಗತಿಸಿ, ವಂದಿಸಿದರು.

Comments are closed.