ಆರೋಗ್ಯ

ಎಲ್.ಜಿ. ಫೌಂಡೇಶನ್ ಹಂಗಳೂರು-ಕುಂದಾಪುರ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಎಲ್.ಜಿ. ಫೌಂಡೇಶನ್ ಹಂಗಳೂರು,ಕುಂದಾಪುರ ಇವರ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿವಾರಣಾ ವಿಭಾಗ, ಮರವಂತೆ ಗ್ರಾಮಪಂಚಾಯತ್, ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ದಿವಂಗತ ಅಕ್ಕಯ್ಯ ದೇವಾಡಿಗರ ನೆನಪಿಗಾಗಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಭಾನುವಾರ ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರಾದ ಎಮ್. ಕೊರಗ ದೇವಾಡಿಗ ಉದ್ಘಾಟಿಸಿದರು.

ಎಲ್.ಜಿ. ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ನಾಗರಾಜ ಡಿ. ಪಡುಕೋಣೆ ಮಾತನಾಡಿ, ತಂದೆ-ತಾಯಿ ಹೆಸರಿನಲ್ಲಿ ಪ್ರಾರಂಭಿಸಿದ ಎಲ್.ಜಿ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಮೂರನೇ ನೇತ್ರ ತಪಾಸಣಾ ಶಿಬಿರ ಇದಾಗಿದ್ದು ಈ ಬಾರಿ ಸಹೋದರಿ ನೆನಪಿನಲ್ಲಿ‌ ಮರವಂತೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈಗಾಗಾಲೇ ಫೌಂಡೇಶನ್ ವತಿಯಿಂದ 6 ಮಕ್ಕಳ ವಿದ್ಯಾಭ್ಯಾಸ ಖರ್ಚು ಹಾಗೂ ಓರ್ವ ವಿದ್ಯಾರ್ಥಿನಿಯ ಸಂಪೂರ್ಣ ಶೈಕ್ಷಣಿಕ ಖರ್ಚು ಭರಿಸಲಾಗುತ್ತಿದೆ. ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಂದೆಯೂ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಮರವಂತೆ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಡಾ. ಪಿ. ದಯಾನಂದ ಪೈ ಮತ್ತು ಡಾ. ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಉಡುಪಿ, ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿ ಸಂಘ, ಮರವಂತೆ ದೇವಾಡಿಗ ಸಂಘ, ದೇವಾಡಿಗ ಅಕ್ಷಯ ಕಿರಣ, ಸ್ನೇಹ ಮಹಿಳಾ ಮಂಡಳಿ ಮರವಂತೆ, ಸಾಧನಾ ಸಮಾಜ ಸೇವಾ ವೇದಿಕೆ ಮರವಂತೆ ಕಾರ್ಯಕ್ರಮದ ಸಹಯೋಗ ವಹಿಸಿತ್ತು.

ಈ ಸಂದರ್ಬದಲ್ಲಿ ಡಾ. ಗುಣಶ್ರೀ ಹಾಗೂ ಎಮ್. ಕೊರಗ ದೇವಾಡಿಗರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮರವಂತೆ ಗ್ರಾಮಪಂಚಾಯತ್ ಅಧ್ಯಕ್ಷೆ ರುಕ್ಮಿಣಿ, ಕುಸುಮಾ ನಾಗರಾಜ ದೇವಾಡಿಗ, ಕೈಗಾರಿಕೋಧ್ಯಮಿ ರಮೇಶ್ ದೇವಾಡಿಗ ವಂಡ್ಸೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಕುಂದಾಪುರ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಡಾ. ಮಧುಕರ್, ಫಿಲಿಫ್, ವಿವಿಧ ಸಂಘಟನೆಗಳ ಪ್ರಮುಖರಾದ ರವಿ ಮಡಿವಾಳ, ಗಿರೀಶ್ ದೇವಾಡಿಗ, ಭಾಗ್ಯ, ಕಾವ್ಯಾ, ಚಂದ್ರ ಬಿಲ್ಲವ, ಡಾ. ಗುಣಶ್ರೀ ಮೊದಲಾದವರು ಇದ್ದರು.

ರವಿ ದೇವಾಡಿಗ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Comments are closed.