ಆರೋಗ್ಯ

ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿ ನರಳಾಟದ ವೇಳೆ ವಿಡಿಯೋ ಗೇಮ್‌ನಲ್ಲಿ ನಿರತವಾಗಿದ್ದ ಸ್ನಾತಕೋತ್ತರ ವಿದ್ಯಾರ್ಥಿ ಅಮಾನತು

Pinterest LinkedIn Tumblr

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಯ ನರಳಾಡುವ ವೇಳೆ ಸಿಬ್ಬಂದಿಯಿಂದ ವೀಡಿಯೋ ಗೇಮ್ ಆಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋಗೆ ಸಂಬಂಧಿಸಿದಂತೆ ಸ್ನಾತಕೋತ್ತರ ವಿದ್ಯಾರ್ಥಿಯನ್ನು ಅಮಾನತಿನಲ್ಲಿಡಲಾಗಿದೆ.

ಕರ್ತವ್ಯ ಸಮಯದಲ್ಲಿ ವೀಡಿಯೋ ಗೇಮ್ ಆಡುತ್ತಿದ್ದ ಆರೋಪ ಎದುರಾಗಿದ್ದು, ಈ ವಿಚಾರವಾಗಿ ವೆನ್ಲಾಕ್ ಆಸ್ಪತ್ರೆ ಅಧೀಕ್ಷರಿಂದ ತನಿಖೆ ನಡೆಸಲಾಗಿದೆ. ಈ ಘಟನೆ ಆಸ್ಪತ್ರೆಯಲ್ಲಿ ಜ. 23 ರಂದು ನಡೆದಿತ್ತು. ಕ್ಲಿನಿಕಲ್ ಸೇವೆ ನೀಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಈ ದುರ್ವರ್ತನೆ ತೋರಿದ್ದಾರೆ.

ಖಾಸಗಿ ವೈದ್ಯಕೀಯ ಕಾಲೇಜಿನ ಸ್ನಾತ್ತಕೋತ್ತರ ವೈದ್ಯಕೀಯ ವಿದ್ಯಾರ್ಥಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಸೇವೆ ನೀಡುತ್ತಿದ್ದರು. ಸದ್ಯ ವಿದ್ಯಾರ್ಥಿಯನ್ನು ಅಮಾನತಿನಲ್ಲಿಡಲಾಗಿದೆ ಎಂದು ವೆನ್ಲಾಕ್ ಜಿಲ್ಲಾಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಅಧೀಕೃತ ಮಾಹಿತಿ ನೀಡಿದ್ದಾರೆ.

Comments are closed.