ಆರೋಗ್ಯ

ರಾಜ್ಯದಲ್ಲಿ ಸೋಮವಾರ 1,290 ಮಂದಿಗೆ ಸೋಂಕು ದೃಢ | ಬೆಂಗಳೂರಿನಲ್ಲೂ ಕೊರೋನಾ ಪ್ರಕರಣ ಏರಿಕೆ..!

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಪ್ರಕರಣಗಳ ಏರಿಕೆಯಾಗಿವೆ. ರಾಜ್ಯದಲ್ಲಿ ಸೋಮವಾರದಂದು ಒಟ್ಟು 1,290 ಹೊಸ ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 30,10, 847ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲೇ ಸೋಂಕಿನ ಪ್ರಮಾಣ ಹೆಚ್ಚಿದೆ.

ಇನ್ನು ಸೋಮವಾರದಂದು 232 ಸೋಂಕಿತರು ಗುಣಮುಖರಾಗಿದ್ದಾರೆ. ಅಲ್ಲದೆ, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಆ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 29,61,122ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸದ್ಯ 11,345 ಸಕ್ರಿಯ ಪ್ರಕರಣಗಳಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸೋಂಕಿನಿಂದ ಸೋಮವಾರದಂದು ಐವರು ಸಾವನ್ನಪ್ಪಿದ್ದಾರೆ.

Comments are closed.