ಆರೋಗ್ಯ

ಬೆಂಗಳೂರಿನಲ್ಲಿ 10 ಸಹಿತ ರಾಜ್ಯದಲ್ಲಿಂದು 12 ಹೊಸ ಓಮಿಕ್ರಾನ್ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 31ಕ್ಕೇರಿಕೆ

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಓಮಿಕ್ರಾನ್ ಪ್ರಕರಣಗಳು ಏರಿಕೆಯಾಗುತ್ತಿದ್ದು ಇಂದು (ಡಿ.23) ಒಂದೇ ದಿನ 12 ಮಂದಿಯಲ್ಲಿ ಓಮಿಕ್ರಾನ್ ಸೋಂಕಿನ ಪ್ರಕರಣ ಪತ್ತೆಯಾಗಿದ್ದು ರಾಜ್ಯದಲ್ಲಿ ಸೊಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು 10 ಮಂದಿಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಬೆಂಗಳೂರಿನಲ್ಲಿ 20 ವರ್ಷದ ಯುವತಿ, 56 ವರ್ಷದ ವ್ಯಕ್ತಿ, 54 ವರ್ಷದ ಮಹಿಳೆಯಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಇನ್ನುಳಿದಂತೆ ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ 31 ವರ್ಷದ ಪುರುಷ, 42 ವರ್ಷದ ಪುರುಷ, 21 ವರ್ಷದ ಯುವಕ, 18 ವರ್ಷದ ಯುವತಿ, 11 ವರ್ಷದ ಬಾಲಕಿ ಇನ್ನು ನೈಜಿರಿಯಾದಿಂದ ಬಂದಿದ್ದ 59 ವರ್ಷದ ಮಹಿಳೆ ಹಾಗೂ ಡೆನ್ಮಾರ್ಕ್ ನಿಂದ ಬಂದಿದ್ದ 49 ವರ್ಷದ ಮಹಿಳೆಗೆ ಓಮಿಕ್ರಾನ್ ಸೋಂಕು ತಗುಲಿದೆ.

ಗಾನಾದಿಂದ ಮಂಗಳೂರಿಗೆ ಆಗಮಿಸಿರುವ 27 ವರ್ಷ ಯುವಕ ಹಾಗೂ ಸ್ವಿಜರ್ಲ್ಯಾಂಡ್ ನಿಂದ ಮೈಸೂರಿಗೆ ಆಗಮಿಸಿದ್ದ 9 ವರ್ಷದ ಬಾಲಕಿಗೆ ಓಮಿಕ್ರಾನ್ ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೂ 31 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.

ಈವರೆಗೆ ಬೆಂಗಳೂರಿನಲ್ಲಿ 18, ದಕ್ಷಿಣ ಕನ್ನಡದಲ್ಲಿ 7, ಉಡುಪಿ 2, ಧಾರವಾಡ, ಬೆಳಗಾವಿ, ಶಿವಮೊಗ್ಗ, ಮೈಸೂರಿನಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ.

Comments are closed.