ಆರೋಗ್ಯ

ದಕ್ಷಿಣಕನ್ನಡದಲ್ಲಿ 5 ಪ್ರಕರಣ ಸಹಿತ ರಾಜ್ಯದಲ್ಲಿಂದು 6 ಓಮೈಕ್ರಾನ್‌ ಪ್ರಕರಣ ಪತ್ತೆ: ಸಚಿವ ಡಾ. ಸುಧಾಕರ್

Pinterest LinkedIn Tumblr

ಬೆಂಗಳೂರು: ದಕ್ಷಿಣ ಕನ್ನಡದಲ್ಲಿ‌ 5 ಪ್ರಕರಣ ಸಹಿತ ರಾಜ್ಯದಲ್ಲಿ ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ನ ಆರು ಪ್ರಕರಣಗಳು ಶನಿವಾರ ದೃಢಪಟ್ಟಿವೆ. ಈ ಕುರಿತು ಆರೋಗ್ಯ ಸಚಿವ ಕೆ.ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಇದರೊಂದಿಗೆ ರಾಜ್ಯದಲ್ಲಿ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ಸಂಸ್ಥೆಗಳಲ್ಲಿ ಕೋವಿಡ್‌ನ ಎರಡು ಕ್ಲಸ್ಟರ್‌ಗಳನ್ನು ಗುರುತಿಸಲಾಗಿದೆ. ಮೊದಲ ಕ್ಲಸ್ಟರ್‌ನಲ್ಲಿ 14 ಮಂದಿ ಕೋವಿಡ್ ಸೋಂಕಿತರಿದ್ದು, ಈ ಪೈಕಿ ನಾಲ್ಕು ಓಮೈಕ್ರಾನ್‌ ಪ್ರಕರಣಗಳು ಹಾಗೂ ಎರಡನೇ ಕ್ಲಸ್ಟರ್‌ನಲ್ಲಿ 19 ಕೋವಿಡ್ ಸೋಂಕಿತರಿದ್ದು, 1 ಓಮೈಕ್ರಾನ್ ಪ್ರಕರವಿದೆ. ಬ್ರಿಟನ್‌ನಿಂದ ಬಂದ ವ್ಯಕ್ತಿಯೊಬ್ಬರಲ್ಲಿಯೂ ಓಮೈಕ್ರಾನ್ ದೃಢಪಟ್ಟಿದೆ ಎಂದು ಸಚಿವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Comments are closed.