ಆರೋಗ್ಯ

ಜಿಲ್ಲೆಯನ್ನು ಕೊರೋನಾ ಮುಕ್ತವನ್ನಾಗಿಸಲು ಜನರು ಕೋವಿಡ್ ನಿಯಮಾವಳಿ‌ ಪಾಲಿಸಬೇಕು: ಉಡುಪಿ ಡಿಸಿ ಕೂರ್ಮಾರಾವ್

Pinterest LinkedIn Tumblr

ಉಡುಪಿ: ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರು ಶನಿವಾರ ಜಿಲ್ಲಾಧಿಕಾರಿಗಳ ಜೊತೆ ವೀಡಿಯೋ ಸಂವಾದ ನಡೆಸಿದ್ದು ಕೋವಿಡ್-19 ಪ್ರಕರಣದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ‌ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಗತ್ಯ ಸೂಚನೆ, ಹಲವು‌ ನಿರ್ದೇಶನ ನೀಡಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.

ವಿದೇಶಗಳಿಂದ ಬಂದಿರುವ ಪ್ರಯಾಣಿಕರ ಬಗ್ಗೆ ಹಚ್ಚಿನ ನಿಗಾ ವಹಿಸಬೇಕು. ಮುಖ್ಯವಾಗಿ ಹಾಂಗ್ ಕಾಂಗ್, ಬೋತ್ಸ್ವಾನ, ಸೌತ್ ಆಫ್ರಿಕಾ ಸೇರಿದಂತೆ ಹೆಚ್ಚಿನ ಕೋವಿಡ್ ಪ್ರಕರಣಗಳಿರುವ ಇನ್ನಿತರ ದೇಶಗಳಿಂದ ಬಂದವರಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ನಡೆಸಲು ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ 100% ಮಾಡಲು ಕ್ರಮವಹಿಸಲು‌ ಮತ್ತು‌ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಬಳಸಿ ಕೋವಿಡ್ ನಿಯಮಾವಳಿ ಪಾಲಿಸುವಂತೆ‌ ಸೂಚಿಸಿದ್ದಾರೆ ಎಂದರು.

ಉಡುಪಿ ಜಿಲ್ಲೆಯನ್ನು ಕೋವಿಡ್ ಮುಕ್ತವನ್ನಾಗಿಸಲು ಎಲ್ಲಾ ಜನರು‌ ಕೋವಿಡ್ ನಿಯಮಾವಳಿಯನ್ನು ತಪ್ಪದೆ ಪಾಲಿಸಬೇಕು‌ ಎಂದು ಡಿಸಿ ಕೂರ್ಮಾರಾವ್ ಮನವಿ ಮಾಡಿದ್ದಾರೆ.

Comments are closed.