ಆರೋಗ್ಯ

ಉಡುಪಿಯಲ್ಲಿ ಮೆಗಾ ಲಸಿಕಾ ಮೇಳ: ನಿನ್ನೆ ಒಂದೇ ದಿನ 23,589 ಮಂದಿಗೆ ವ್ಯಾಕ್ಸಿನ್

Pinterest LinkedIn Tumblr

ಉಡುಪಿ: ಕೋವಿಡ್ -19 ಲಸಿಕಾಕರಣದಿಂದ ಹೊರಗುಳಿದಿರುವ ಅರ್ಹ 18 ವರ್ಷ ಮೇಲ್ಪಟ್ಟ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು ಪಡೆದುಕೊಳ್ಳುವ ಸಲುವಾಗಿ ಸೆ.22ರಂದು ಉಡುಪಿ ಜಿಲ್ಲೆಯಲ್ಲಿ ಕೋವಿಡ್ -19 ಲಸಿಕಾ ಮೆಗಾ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಮೆಗಾ ಮೆಳದಲ್ಲಿ 23,589 ಜನ ಲಸಿಕೆಯನ್ನು ಪಡೆದಿರುತ್ತಾರೆ. ಒಟ್ಟು ಉಡುಪಿ ಜಿಲ್ಲೆಯಲ್ಲಿ 8,93,460 ಜನ ಮೊದಲ ಡೋಸ್‌ ಪಡೆದಿದ್ದು ಶೇ 89.1% ಲಸಿಕಾಕರಣವಾಗಿರುತ್ತದೆ. ಎರಡನೇ ಡೋಸ್‌ 4,02,697 ಜನ ಪಡೆದುಕೊಂಡಿದ್ದು ಶೇ 40.2 ಲಸಿಕಾಕರಣವಾಗಿದೆ.

ಈ ಅಂಕಿಅಂಶಗಳಿಂದ ಉಡುಪಿ ಜಿಲ್ಲೆಯು ಲಸಿಕಾಕರಣದಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿದುಬರುತ್ತದೆ. ಜಿಲ್ಲೆಯಲ್ಲಿ ಉತ್ತಮ ಲಸಿಕಾಕರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ವೈದ್ಯಕೀಯ ರಂಗ ಹಾಗೂ ಇತರ ಎಲ್ಲಾ ಇಲಾಖೆಗಳಿಗೆ ಮತ್ತು ಉಡುಪಿ ಜಿಲ್ಲೆಯ ಸಂಘಸಂಸ್ಥೆಗಳು, ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರನ್ನು ತುಂಬುಹೃದಯದಿಂದ ಅಭಿನಂದಿಸುತ್ತಾ ತಾವೆಲ್ಲರೂ ಜಿಲ್ಲೆಯಲ್ಲಿ ಶೇ 100 ಲಸಿಕಾಕರಣವಾಗುವ ನಿಟ್ಟಿನಲ್ಲಿ ಕಾರ್ಯನ್ಮೋಕರಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ತಿಳಿಸಿದ್ದಾರೆ.

Comments are closed.