ಆರೋಗ್ಯ

ಕುಂದಾಪುರದ ಗೋಪಾಡಿ ಕೋವಿಡ್ ಸೋಂಕು ಮುಕ್ತ ಗ್ರಾಮ ಪಂಚಾಯತ್: ಸಚಿವ ಕೋಟ ಶ್ಲಾಘನೆ

Pinterest LinkedIn Tumblr

ಕುಂದಾಪುರ: ಗ್ರಾಮ ಪಂಚಾಯಿತಿ ಕೊರೋನಾ ಟಾಸ್ಕ್ ಪೋರ್ಸ್ ಸದಸ್ಯರು, ವೈದ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರ ಪರಿಶ್ರಮದಿಂದ 152 ಕೊರೋನಾ ಪ್ರಕರಣ ಕಾಣಿಸಿಕೊಂಡ ಗೋಪಾಡಿ ಗ್ರಾಪಂ ಕೊರೋನಾ ಮುಕ್ತವಾಗಿದ್ದು, ಇಷ್ಟಕ್ಕೆ ಜವಾಬ್ದಾರಿ ಮುಗಿಯುವುದಿಲ್ಲ. 3ನೇ ಅಲೆ ತಡೆ, ನಿರ್ವಹಣೆ ಬಗ್ಗೆ ಎಚ್ಚರಿಕೆ ವಹಿಸಿ, ತಡೆಯುವ ಕೆಲಸ ಆಗಬೇಕಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಗೋಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕರೋನಾ ನಿರ್ಮೂಲನಾ ಸಮಿತಿ ಹಾಗೂ ಕರೋನಾ ಸೇನಾನಿಗಳ ಸಭೆಯ ಅಧ್ಯಕ್ಷತೆ ವಹಿಸಿ, ರಾಜ್ಯ ಸರ್ಕಾರ ಕೊರೋನ ನಿರ್ಮೂಲನೆ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಜವಾಬ್ದಾರಿ ನೀಡುವ ಮೂಲಕ ಕೊರೋನ ವಿರುದ್ಧ ಹೋರಾಟಕ್ಕೆ ಪ್ರಾಮುಖ್ಯತೆ ನೀಡಿದ್ದು, ಗ್ರಾಮ ಸಂಪೂರ್ಣ ಚಿತ್ರಣ ಗ್ರಾಪಂ ಸದಸ್ಯರಿಗೆ, ಅಂಗನವಾಡಿ ಆಶಾ ಕಾರ್ಯಕರ್ತೆಯರಿಗೆ ತಿಳಿದಿರುವುದರಿಂದ ಕೊರೋನಾ ಹತೋಟಿಗೆ ಸಹಕಾರಿ ಆಯಿತು ಎಂದರು.

ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಎಸ್ಸಿಗೆ ಬೇಡಿಕೆಯಿದ್ದು, ಜನ ಸಂಖ್ಯೆ ಆಧಾರದಲ್ಲಿ ಪಿಎಸ್ಸಿ ತೆರೆಯುವ ಬಗ್ಗೆ ಚೆರ್ಚೆ ನಡಿಯುತ್ತಿದ್ದು, ಮುಂದೆ ಗ್ರಾಮ ಮಟ್ಟದಲ್ಲಿ ಪಿಎಸ್ಸಿ ತೆರೆಯುವ ಸ್ಪಷ್ಟ ಚಿತ್ರಣ ಸಿಗಲಿದೆ. ಈಗಾಗಾಲೇ 95 ಸಾವಿರ ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕೆಲಸಕ್ಕೆ ಸರ್ಕಾರ ಚಾಲನೆ ನೀಡಿದೆ ಎಂದರು.

ಗೋಪಾಡಿ ಗ್ರಾಪಂ ಹೊಸ ಆಡಳಿತ ಮಂಡಳಿ ಅಧಿಕಾರಿಕ್ಕೆ ಬಂದ ನಂತರ ಮೊಟ್ಟಮೊದಲು ಭೇಟಿ ನೀಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಗ್ರಾಪಂ ವತಿಯಿಂದ ಸನ್ಮಾನಿಸಲಾಯಿತು.

ಗೋಪಾಡಿಯಲ್ಲಿ ಆಶಾ ಕಾರ್ಯಕರ್ತೆಯರಾಗಿ ಶ್ರಮಿಸುತ್ತಿರುವ ವೈಲೆಟ್ ಬೆರೆಟ್ಟೊ, ಶ್ಯಾಮಲಾ, ಶೋಭಾ ಅವರ ಗ್ರಾಪಂ ಪರವಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸನ್ಮಾನಿಸಿದರು.

ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಾ ಪೂಜಾರಿ, ಉಪಾಧ್ಯಕ್ಷ ನಾಗೇಶ್ ಶೆಟ್ಟಿಗಾರ್, ಕುಂಭಾಶಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಶೋಭಾ, ಮಾಜಿ ಜಿಪಂ ಸದಸ್ಯ ಶ್ರೀಲತಾ ಸುರೇಶ್ ಶೆಟ್ಟಿ, ಗ್ರಾ.ಪಂ ಸದಸ್ಯರಾದ ಸುರೇಶ್ ಶೆಟ್ಟಿ, ಗಿರೀಶ್ ಉಪಾಧ್ಯಾಯ, ಪ್ರಕಾಶ್, ಸುಶೀಲಾ, ಶಾಂತಾ, ಸಾವಿತ್ರಿ, ನೇತ್ರಾವತಿ ಮೊದಲಾದವರು ಇದ್ದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ್ ಸ್ವಾಗತಿಸಿ, ನಿರೂಪಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.