ಆರೋಗ್ಯ

ಲಸಿಕೆ ಪಡೆಯುವವರಿಗೆ ಎಸ್‌ಎಂಎಸ್ : ಲಸಿಕೆ ಪಡೆಯುವವರಿಗೆ ಅನಾನುಕೂಲತೆ ತಪ್ಪಿಸಲು ಜಿಲ್ಲಾಡಳಿತದಿಂದ ಕ್ರಮ : ಅಪರ ಜಿಲ್ಲಾಧಿಕಾರಿ

Pinterest LinkedIn Tumblr

ಉಡುಪಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಜನರು ಉಡುಪಿ ನಗರದಲ್ಲಿನ ಲಸಿಕಾ ಕೇಂದ್ರಗಳಿಗೆ ಬಂದು ಸರದಿ ಸಾಲಿನಲ್ಲಿ ನಿಂತು ಟೋಕನ್ ಪಡೆದು ಲಸಿಕೆಯನ್ನು ಪಡೆಯುತ್ತಿದ್ದು, ಈ ಅನಾನುಕೂಲತೆಯನ್ನು ತಪ್ಪಿಸಲು ಮೊದಲ ಡೋಸ್ ಪಡೆದ ದಿನಾಂಕದ ಜೇಷ್ಥತೆ ಆಧಾರದಲ್ಲಿ (Seniority of first dose date ) ಬರುವ ಅರ್ಹ ವ್ಯಕ್ತಿಗಳಿಗೆ ಉಡುಪಿ ಜಿಲ್ಲಾಡಳಿತದಿಂದ ಮುಂಚಿನ ದಿನವೇ SMS ಕಳುಹಿಸಿ ಲಸಿಕೆ ಪಡೆಯಲು ತಿಳಿಸಲಾಗುವುದು.

ಉಡುಪಿ ನಗರದಲ್ಲಿರುವ ಸೈಂಟ್ ಸಿಸಿಲೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತೆರೆಯಲಾಗಿರುವ ಲಸಿಕಾ ಕೇಂದ್ರದಲ್ಲಿ 100 ಡೋಸ್ ಮತ್ತು ನಗರ ಆರೋಗ್ಯ ಕೇಂದ್ರ, ವೇಣುಗೋಪಾಲ ದೇವಸ್ಥಾನದ ಬಳಿ, ಮಣಿಪಾಲದ ಲಸಿಕಾ ಕೇಂದ್ರದಲ್ಲಿ – 70 ಡೋಸ್ ಲಸಿಕೆಯನ್ನು ದಿನಾಂಕ: 13-05-2021 ರಂದು ಬೆಳಿಗೆ 10.00 ರಿಂದ ಸಂಜೆ: 4.00 ಗಂಟೆಯೊಳಗೆ ನೀಡಲಾಗುವುದು.

ಎರಡನೇ ಡೋಸ್ ಲಸಿಕೆ ಪಡೆಯಲು SMS ಪಡೆದವರು ದಾಖಲೆಯೊಂದಿಗೆ ಸದ್ರಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆಯನ್ನು ಪಡೆಯುವುದು. ಮುಂದೆ ಲಸಿಕೆಗಳು ಸರಬರಾಜಾದಂತೆ ಇದೇ ರೀತಿ ಜೇಷ್ಟತೆ ಆಧಾರದಲ್ಲಿ SಒS ಕಳುಹಿಸಲಾಗುವುದು. ಅದರಂತೆ ಎಸ್‌ಎಂಎಸ್ ಪಡೆದವರು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆಯನ್ನು ಪಡೆಯುವುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Comments are closed.