ಆರೋಗ್ಯ

ಕೊರೋನಾದಿಂದ ಜನರನ್ನು ರಕ್ಷಿಸಲು ಸರಕಾರ ಮಾಡಿದ ಲಾಕ್ಡೌನ್ ನಿರ್ಧಾರ ಶಿಕ್ಷೆಯಲ್ಲ: ಸಂಸದ ಬಿ.ವೈ ರಾಘವೇಂದ್ರ

Pinterest LinkedIn Tumblr

ಉಡುಪಿ: ಕೋವಿಡ್ ಎರಡನೇ ಅಲೆಯಲ್ಲಿ ಯುವಕರು ಕೂಡಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೊರೋನಾ ವಿಚಾರದಲ್ಲಿ ಅನಗತ್ಯ ಭಯಬೇಡ ಆದರೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದ್ದು ಸರ್ಕಾರ ಎರಡನೇ ಹಂತದ ಲಾಕ್ ಡೌನ್ ಘೋಷಿಸಿದೆ. ಇದು ಶಿಕ್ಷೆ ಅಲ್ಲ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಕೊಲ್ಲೂರಿನಲ್ಲಿ ಕೊರೋನಾ ನಿಯಂತ್ರಣ ಕುರಿತಾಗಿ ವಿವಿಧ ಇಲಾಖಾಧಿಕಾರಿಗಳ‌ ಸಭೆ ನಡೆಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಜನರ ಜೀವ ಉಳಿಸಲು ಪ್ರಧಾನಿ, ಮುಖ್ಯಮಂತ್ರಿಗಳು, ಶಾಸಕರು ಶ್ರಮ ಪಡುತ್ತಿದ್ದಾರೆ. ಕೋವಿಡ್ ವಾರಿಯರ್ಸ್ ಜೀವದ ಹಂಗು ತೊರೆದು ಶ್ರಮ ಪಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು, ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬೇಕೆ ಹೊರತು ಅನಗತ್ಯ ತಿರುಗಾಡದೆ ಜನ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.

ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಎಸಿ, ತಾಲೂಕು ಮಟ್ಟದ ಅಧಿಕಾರಿಗಳು,ಶಾಸಕರ ನೇತೃತ್ವದಲ್ಲಿ ಮೂರು ಬಾರಿ ಸಭೆ ನಡೆಸಿದ್ದೇವೆ. ಮತ್ತೆ ಸಭೆ ನಡೆಸಿ ಲಾಕ್ ಡೌನ್ ಯಾವ ರೀತಿ ಬಿಗಿ ಮಾಡಬೇಕು, ಅವಶ್ಯಕ ವಸ್ತುಗಳನ್ನು ಮನೆ ಮನೆಗೆ ಹೇಗೆ ಜನಸಂದಣಿ ಆಗದಂತೆ ತಲುಪಿಸಬೇಕು. ಆಸ್ಪತ್ರೆ ವ್ಯವಸ್ಥೆ ದೃಷ್ಟಿಯಿಂದ ವಿಶೇಷವಾಗಿ ಸೋಂಕು ಹೆಚ್ಚಾಗುತ್ತಿರುವ ಮಲೆನಾಡು, ಸಿದ್ಧಾಪುರಗಳಲ್ಲಿ ಯಾವ ರೀತಿ ಗಮನ ಕೊಡಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ. ಎರಡು ವಾರದಲ್ಲಿ ದೇಶಾದ್ಯಂತ ಸೋಂಕು ನಿಯಂತ್ರಿಸುವ ವಿಶ್ವಾಸ ಇದೆ ಎಂದಿದ್ದಾರೆ.

ರೇಷನ್ ಕಾರ್ಡ್, ಕಿಟ್ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಲಾಗುವುದು. ರೇಷನ್ ನೀಡುವ ವೇಳೆ ಜನಸಂದಣಿ ಆಗದಂತೆ ಒಂದೊಂದು ಊರಿಗೆ ಒಮ್ಮೊಮ್ಮೆ ಮಾಡುವ ಕಾರ್ಯ ಮಾಡಲಾಗುವುದು.

ಖಾಸಗಿ ಆಂಬುಲೆನ್ಸ್ ನಿಮ್ಮ ಬೆಲೆಗೆ ಬಂದಿಲ್ಲವಾದ್ರೆ ಟೇಕ್ ಓವರ್ ಮಾಡಲು ಕಾನೂನಿನಲ್ಲ ಅವಕಾಶ ಇದೆ. ಎಷ್ಟು ಬೇಕೋ ಅಷ್ಟು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತದೆ.

ಆಶಾ ಕಾರ್ಯಕರ್ತೆಯರಿಗೆ, ಹೆಲ್ತ್ ಸೆಕ್ಟರ್ ಗಳಲ್ಲಿ ಕೆಲಸ ಮಾಡುವವರಿಗೆ ಕೋವಿಡ್ ವಾರಿಯರ್ಸ್ ಪರಿಗಣಿಸಲಾಗಿದ್ದು, ಅವರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎಂದರು. ರೈತರಿಗೆ ಅವರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.

ಈ ಸಂದರ್ಭದಲ್ಲಿ ಬೈಂದೂರು ಶಾಸಕ‌ ಸುಕುಮಾರ್ ಶೆಟ್ಟಿ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಡಿವೈಎಸ್ಪಿ ಶ್ರೀಕಾಂತ್, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ, ಕೊಲ್ಲೂರು ಠಾಣೆ ಉಪನಿರೀಕ್ಷಕ ನಾಸೀರ್ ಹುಸೇನ್, ಕುಂದಾಪುರ ಠಾಣೆಯ ಪಿಎಸ್ಐ ಸದಾಶಿವ ಗವರೋಜಿ, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ನೋಡಲ್ ಅಧಿಕಾರಿ ಡಾ. ನಾಗೇಶ್ ಮೊದಲಾದವರಿದ್ದರು.

Comments are closed.