ಆರೋಗ್ಯ

ಅಣ್ಣಯ್ಯ, ಬಿಂದಾಸ್, ರನ್ನ ಚಿತ್ರದ ನಿರ್ಮಾಪಕ ಎಂ. ಚಂದ್ರಶೇಖರ್ ಕೊರೋನಾಕ್ಕೆ ಬಲಿ

Pinterest LinkedIn Tumblr

ಬೆಂಗಳೂರು: ಸುದೀಪ್ ನಟನೆಯ ಹಿಟ್ ಚಿತ್ರ ರನ್ನ ಮತ್ತು ರವಿಚಂದ್ರನ್ ನಟನೆಯ ಅಣ್ಣಯ್ಯ, ಪುನೀತ್ ರಾಜಕುಮಾರ್ ನಟನೆಯ ಬಿಂದಾಸ್ ಮೊದಲಾದ ಸಿನಿಮಾ ನಿರ್ಮಾಪಕ ಎಂ. ಚಂದ್ರಶೇಖರ್ ಕೊರೊನಾಗೆ ಬಲಿಯಾಗಿದ್ದಾರೆ.

ನಿಮಿಷಾಂಬ ಪ್ರೊಡಕ್ಷನ್ ನ ಅಣ್ಣಯ್ಯ, ಬಿಂದಾಸ್ ಏನೋ ಒಂಥರಾ, ರನ್ನ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಸ್ಯಾಂಡಲ್ ವುಡ್ ನಿರ್ಮಾಪಕರೊಬ್ಬರನ್ನು ಕೊರೊನಾ ಬಲಿ ಪಡೆದಿದೆ.

ಕಳೆದ 23 ದಿನಗಳ ಹಿಂದೆ ಚಂದ್ರಶೇಖರ್ ಅವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ನಂತರ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಕೋವಿಡ್ ನಿಂದ ಗುಣಮುಖರಾಗಿದ್ದಾದರೂ ಶ್ವಾಸಕೋಶ ಸಮಸ್ಯೆ ಉಲ್ಬಣಗೊಂಡು ಇಂದು (ಏಪ್ರಿಲ್ 29) ಕೊನೆಯುಸಿರೆಳೆದಿದ್ದಾರೆ.

ಚಂದ್ರಶೇಖರ್ ಅವರು ಇತ್ತೀಚೆಗಷ್ಟೆ ತಮ್ಮ ಹೊಸ ಚಿತ್ರವೊಂದನ್ನು ಘೋಷಿಸಿದ್ದರು.

Comments are closed.