ಆರೋಗ್ಯ

ಕೋವಿಡ್ 2ನೇ ಅಲೆ; ಸಭೆ-ಸಮಾರಂಭ ನಡೆಸುವವರಿಗೆ ಹೊಸ ಆದೇಶ ಅನ್ವಯ: ಡಿಸಿ ಜಿ. ಜಗದೀಶ್

Pinterest LinkedIn Tumblr

ಉಡುಪಿ: ಕೊರೋನಾ ಎರಡನೇ ಅಲೆ ಹಿನ್ನೆಲೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಅಧಿಕಾರಿಗಳು ಸಭೆ ನಡೆಸಿ ಮುನ್ನೆಚ್ಚರಿಕೆ ವಹಿಸಲು ಸಂಬಂದಪಟ್ಟವರಿಗೆ ಸೂಚನೆ ನೀಡಿದ್ದು, ಮಾಸ್ಕ್ ಕಡ್ಡಾಯವಾಗಿ ಧರಿಸುವುದು, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಅತ್ಯಗತ್ಯ. ಸಾರ್ವಜನಿಕ ಸಭೆ ಸಮಾರಂಭಗಳಿಗೆ ಸಂಬಂಧಿಸಿದಂತೆ ಹಳೆ ಆದೇಶ ರದ್ಧುಗೊಳಿಸಿ ಹೊಸ ಆದೇಶ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಅವರು ಮಂಗಳವಾರ ಬೆಳಗ್ಗೆ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿ, ಮದುವೆ ಸಮಾರಂಭದಲ್ಲಿ ಐದುನೂರು ಜನ, ಬರ್ತ್ ಡೇ ಮೊದಲಾದ ಪಾರ್ಟಿಗಳಿಗೆ ನೂರು ಜನರ ಸೇರಲು ಅವಕಾಶವಿದೆ. ಸರಕಾರದ ಆದೇಶದಂತೆ ಮುಂದಿನೆರಡು ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದಿದ್ದರೆ ದಂಡ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಮಹಾರಾಷ್ಟ್ರ ಕೇರಳ ರಾಜ್ಯದಲ್ಲಿ ಈಗಾಗಲೇ ಕೇಸು ಹೆಚ್ಚಳವಾಗುತ್ತಿರುವುದು ಗಮನಿಸಿದರೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸದಿದ್ದರೆ‌ ಅಪಾಯ ಖಂಡಿತ ಎನ್ನುವುದು ಕಂಡುಬರುತ್ತಿದೆ. ಮಹಾರಾಷ್ಟ್ರ, ಕೇರಳದಲ್ಲಿ ಪ್ರಕರಣ ಹೆಚ್ಚುತ್ತಿರುವುದರಿಂದ ನಮ್ಮ ಜಿಲ್ಲೆಗೆ ಆ ಜಿಲ್ಲೆಗಳ ಜೊತೆ ಉಡುಪಿಗೆ ನಿಕಟ ಸಂಬಂದವಿರುವ ಕಾರಣ ಅಗತ್ಯ ಕ್ರಮ ವಹಿಸಲಾಗಿದೆ. ನೆಗೆಟಿವ್ ವರದಿ ಇಲ್ಲದೇ ತಮ್ಮೂರಿಗೆ ಬಂದರೆ ಮಾಹಿತಿ ನೀಡಿ ಎಂದರು.

ಕೊರೋನಾ ವಿಚಾರದಲ್ಲಿ ಮುಖ್ಯವಾಹಿನಿಯಲ್ಲಿ ಕೆಲಸ ಮಾಡಿದವರಲ್ಲಿ ಬಹಳಷ್ಟು ಜನರು ಲಸಿಕೆಯ ಒಂದೇ ಡೋಸ್ ಪಡೆದು ಸುಮ್ಮನಾಗಿದ್ದಾರೆ. ಕೊರೊನಾ ಲಸಿಕೆಯ ಒಂದನೇ ಡೋಸ್ ಪಡೆದು 28 ದಿನದ ಬಳಿಕ ಎರಡನೇ ಡೋಸ್ ಪಡೆಯದಿದ್ದರೆ ಲಸಿಕೆ ಹಾಕಿಸಿಕೊಂಡು ಯಾವುದೇ ಪ್ರಯೋಜನವಿಲ್ಲ. ಜವಬ್ದಾರಿಯುತ ಅಧಿಕಾರಿಗಳು, ಸಿಬ್ಬಂದಿಗಳು ನಾವಾಗಿದ್ದೇವೆ. ಹಿರಿಯ ನಾಗರಿಕರು ರಕ್ಷಣೆ ನಿಟ್ಟಿನಲ್ಲಿ ಆಯಾಯ ಮನೆಯವರು ಹಿರಿಯ ನಾಗರಿಕರನ್ನು ಕರೆದುಕೊಂಡು ಬಂದು ಕೋವಿಡ್ ಲಸಿಕೆ ನೀಡಬೇಕು ಎಂದು ಹೇಳಿದರು.

ಅಂಗಡಿ- ಮಾಲ್ ಗಳಲ್ಲಿ ಅಂಗಡಿ ಮಾಲಕರು ಸಿಬ್ಬಂದಿಗಳು ಕೋವಿಡ್ ನಿಯಮ ಪಾಲಿಸದಿದ್ದರೆ ದಂಡ ಹಾಕುವುದಲ್ಲದೆ ಅಂಗಡಿ ಲೈಸೆನ್ಸ್ ರದ್ದು ಮಾಡಲಾಗುತ್ತೆ ಎಂದು ಎಚ್ಚರಿಸಿದ್ದಾರೆ.

Comments are closed.