ಆರೋಗ್ಯ

ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ: ನಿಯಮ ಉಲ್ಲಂಘಿಸಿದ್ರೆ 10 ಸಾವಿರದವರೆಗೂ ದಂಡ: ಡಿಸಿ ಜಿ.ಜಗದೀಶ್

Pinterest LinkedIn Tumblr

ಉಡುಪಿ: ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ಕಾಪಾಡದೇ ,ನಿಯಮಗಳನ್ನು ಪಾಲನೆ ಮಾಡದೇ ಇರುವ ಬಗ್ಗೆ ಸರ್ಕಾರದ ಅಧಿಸೂಚನೆ ಹೊರಡಿಸಿದ್ದು ಅದರಂತೆ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಮಗಳ 2020 ಕ್ಕೆ ಈ ಕೆಳಕಂಡಂತೆ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟನೆ ಹೊರಡಿಸಿದ್ದಾರೆ.

ಎಲ್ಲಾ ಕಿಟಕಿಗಳನ್ನು ಮುಚ್ಚಿ ಒಬ್ಬರೇ ಕಾರನ್ನು ಚಾಲನೆ ಮಾಡುವಾಗ ,ಕಿಟಕಿಗಳನ್ನು ತೆರೆದಿರುವಾಗ ಸಹ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ. ಸಾರ್ವಜನಿಕ ಸ್ಥಳಗಳಾದ ಹೋಟೆಲ್‌, ಸಿನೆಮಾ ಥಿಯೇಟರ್‌, ಮಾಲ್ ಗಳು ಅಥವಾ ಅಂಗಡಿಗಳ ಆವರಣದಲ್ಲಿ ಮಾಲೀಕರು ವ್ಯವಹರಿಸುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು ಅಥವಾ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಇತರ ಸಡಿಲವಾದ ಬಟ್ಟೆಯಿಂದ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳವುದು ಹಾಗೂ ಇತರ ವ್ಯಕ್ತಿಯಿಂದ ಕನಿಷ್ಠ 1 ಮೀಟರ್ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳವುದು ಅಗತ್ಯವಾಗಿದೆ‌. ಈ ನಿಯಮಗಳ ಉಲ್ಲಂಘನೆ ಮಾಡಿದ ಪಕ್ಷದಲ್ಲಿ ಈ ಕೆಳಕಂಡಂತೆ ದಂಡವನ್ನು ವಿಧಿಸಲು ಅವಕಾಶವಿದೆ.

*ಹವಾ ನಿಯಂತ್ರಣ ವ್ಯವಸ್ಥೆ ಇಲ್ಲದ ಪಾರ್ಟಿ ಹಾಲ್‌ ಗಳು , ಡಿಪಾರ್ಟ್ ಮೆಂಟಲ್‌ ಸ್ಟೋರ್‌ ಗಳು –ರೂ 5,000/

*ಹವಾ ನಿಯಂತ್ರಿತ ಪಾರ್ಟಿ ಹಾಲ್‌ ಗಳು, ಡಿಪಾರ್ಟಮೆಂಟಲ್‌ ಸ್ಟೋರ್‌ ಗಳು , ಬ್ರಾಂಡೆಡ್‌ ಶಾಪ್‌ ಗಳು(Single and Multiple brands) ಶಾಪಿಂಗ್‌ ಮಾಲ್‌ ಗಳು-ರೂ10,000/-

*ತ್ರಿಸ್ಟಾರ್‌ ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ಟಾರ್‌ ಹೋಟೆಲ್‌ ಗಳು , ಕನಿಷ್ಠ 500 ಜನರು ಸೇರಲು ಅವಕಾಶವಿರುವ ಮದುವೆ ಅಥವಾ ಕನ್‌ ವೆನ್‌ಷನ್‌ ಹಾಲ್ ಗಳು ಹಾಗೂ ಇದೇ ರೀತಿಯ ಇತರ ಸಾರ್ವಜನಿಕ ಸ್ಥಳಗಳು –ರೂ10,000/-

*ಸಾರ್ವಜನಿಕ ಸಮಾರಂಭಗಳ ಆಯೋಜಕರು , RALLYಗಳು , ಗುಂಪು ಸೇರುವಿಕೆ ಅಥವಾ ಆಚರಣೆಗಳು -ರೂ10,000/-

Comments are closed.