ಆರೋಗ್ಯ

ಸಣ್ಣ ಮಕ್ಕಳಿಗೆ ಚಾಕೊಲೇಟ್ ನ ಬದಲಾಗಿ ಇದನ್ನ ಕೊಟ್ಟರೆ ಬಹಳ ಒಳ್ಳೆಯದು.

Pinterest LinkedIn Tumblr

ರಕ್ತ ಹೀನತೆಯಿಂದ ಬಳಲುತ್ತಿರುವವರು ವಾರಕ್ಕೆ 3 ಬಾರಿಯಾದರೂ ತಿನ್ನಬೇಕು. ಎರಡರಿಂದ ಮೂರು ತಿಂಗಳಲ್ಲಿ ಇದರ ಫಲಿತಾಂಶ ದೊರೆಯುತ್ತದೆ. ಇದನ್ನು ಮಾಡಿ ಒಂದು ಬಾಕ್ಸ್ ನಲ್ಲಿ ಹಾಕಿಟ್ಟು ಚಾಕೊಲೇಟ್ ನ ಬದಲಾಗಿ ಚಿಕ್ಕಿ ಮಕ್ಕಳಿಗೆ ಕೊಟ್ಟರೆ ಬಹಳ ಒಳ್ಳೆಯದು.

ಶೇಂಗಾ ಚಿಕ್ಕಿ ಯಾರಿಗೆ ಇಷ್ಟವಾಗುವುದಿಲ್ಲ. ಇದನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಯಾರೂ ಮನೆಯಲ್ಲಿ ಮಾಡುವುದಿಲ್ಲ. ಹಣ ಕೊಟ್ಟು ತಂದು ತಿನ್ನುವವರೇ ಜಾಸ್ತಿ. ಮನೆಯಲ್ಲಿ ಸುಲಭವಾಗಿ ಚಿಕ್ಕಿಯನ್ನು ಮಾಡುವ ವಿಧಾನದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಚಿಕ್ಕಿಯನ್ನು ಸುಲಭವಾಗಿ ಮನೆಯಲ್ಲಿ ಮಾಡಬಹುದು.ಇದಕ್ಕೆ ಬೇಕಾಗುವ ಸಾಮಗ್ರಿಗಳೆಂದರೆ ಹುರಿದ ಕಡಲೆಬೀಜ, ಎಳ್ಳು, ತುಪ್ಪ,ಬೆಲ್ಲಾ. ಮೊದಲು ಒಂದು ಕಪ್ ಕಡಲೇಬೀಜವನ್ನು ಚೆನ್ನಾಗಿ ಹುರಿದು ಸಿಪ್ಪೆ ತೆಗೆದಿಟ್ಟುಕೊಳ್ಳಬೇಕು. ಕಡಲೆಬೀಜವನ್ನು ಶೇಂಗಾ ಎಂದು ಸಹ ಕರೆಯಲಾಗುತ್ತದೆ. ಇದಕ್ಕೆ ತಕ್ಕಂತೆ ಅರ್ಧ ಕಪ್ ಬಿಳಿ ಎಳ್ಳನ್ನು ಹುರಿದಿಟ್ಟುಕೊಳ್ಳಬೇಕು.ಈಗ ಒಂದು ಪಾತ್ರೆಗೆ ಎರಡು ಚಮಚ ತುಪ್ಪ ಹಾಕಬೇಕು. ಅದಕ್ಕೆ ಒಂದೂವರೆ ಕಪ್ ಬೆಲ್ಲವನ್ನು ಹಾಕಬೇಕು. ಇದನ್ನು ಲೋ ಫ್ಲೇಮ್ ನಲ್ಲಿ ಇಟ್ಟು ಕೈಯಾಡುತ್ತಿರಬೇಕು. ಅದು ಕರಗಿ ಪಾಕ ಬರಲು ಶುರುವಾಗುತ್ತದೆ.

ಗಟ್ಟಿಯಾದ ಪಾಕ ಬರುವವರೆಗೆ ಕೈಯಾಡುತ್ತಿರಬೇಕು. ಬೆಲ್ಲದ ಪಾಕವನ್ನು ನೀರಿರುವ ತಟ್ಟೆಗೆ ಹಾಕಿ ಪಾಕ ಗಟ್ಟಿಯಾಗಿದೆಯೋ ಇಲ್ಲವೋ ಎಂದು ನೋಡಬೇಕು. ಪಾಕವನ್ನು ಚೂರು ತೆಗದು ನೀರಿನಲ್ಲಿ ಹಾಕಿ 2 ನಿಮಿಷಗಳ ನಂತರ ಅದನ್ನು ಮುರಿಯಲು ಬರಬೇಕು. ಈ ಹದ ಬಂದ ನಂತರ ಎಳ್ಳು ಮತ್ತು ಶೇಂಗಾವನ್ನು ಗ್ಯಾಸ್ ಆಫ್ ಮಾಡದೇ ಹಾಕಿ ಚೆನ್ನಾಗಿ ಕಲಸಬೇಕು. ನಂತರ ತಡಮಾಡದೇ ಒಂದು ಬಟ್ಟಲಿಗೆ ಹಾಕಿ ಕಟ್ ಮಾಡುವ ಮಾರ್ಕ್ ಮಾಡಬೇಕು. ಆರಿದ ನಂತರ ಕೈಯಲ್ಲಿ ಮುರಿದರೆ ಕಟ್ ಮಾಡಿದ ಹಾಗೆ ಬರುತ್ತದೆ.

ಇವೆಲ್ಲವು ಸಂಗ್ರಹಿತ ಮಾಹಿತಿಗಳು.

Comments are closed.