ಆರೋಗ್ಯ

ಉತ್ತಮ ಆಹಾರ ಸೇವೆನೆಯ ನಂತರವು ಹೊಟ್ಟೆ ಉಬ್ಬರ, ಎದೆಯಲ್ಲಿ ಉರಿ, ಯಾಕೆ ಬರುತ್ತೆ..?

Pinterest LinkedIn Tumblr

ಜಗತ್ತಿನಲ್ಲಿ ಹಲವರು ಧೂಮಪಾನ ಮಧ್ಯಪಾನ ಮಾಡುವುದಿಲ್ಲ, ಜೀವನದಲ್ಲಿ ಯಾವತ್ತೂ ಮಾಂಸಾಹಾರಿ ಆಹಾರ ತಿನ್ನೊಂದಿಲ್ಲ ಆಹಾರ ಸೇವನೆಯ ಎಲ್ಲಾ ನಿಯಮಗಳನ್ನು ನಿಟ್ಟಾಗಿ ಪಾಲಿಸಿಕೊಂಡು, ಸಾತ್ವಿಕ ಆಹಾರವನ್ನು ತೆಗೆದುಕೊಳ್ಳುತ್ತಾರೆ ಆದರೂ. ಹೊಟ್ಟೆಯಲ್ಲಿ ಉರಿ ಅನುಭವ, ಗ್ಯಾಸ್ ಸಮಸ್ಯೆ, ಮಲಬದ್ಧತೆ, ಹೊಟ್ಟೆ ಉಬ್ಬರ, ಎದೆಯಲ್ಲಿ ಉರಿ, ಹೊಟ್ಟೆಯಲ್ಲಿ ಸಂಕಟ ಇವೆಲ್ಲ ವ್ಯತ್ಯಾಸಗಳಿಂದ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಇವುಗಳಿಗೆ ಕಾರಣ ಏನು ಎಂಬುದನ್ನು ತಿಳಿಯೋಣ.

ಹೊಟ್ಟೆಯಲ್ಲಿ ಸಮಸ್ಯೆಗಳು, ಗಾಬರಿ ಆಗುವುದು, ತಲೆಸುತ್ತು, ಇಂತಹ ಸಮಸ್ಯೆಗಳು ಪ್ರಾರಂಭವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಎಲ್ಲಾ ತರಹದ ಚೆಕಪ್ ಮಾಡಿಸಿಕೊಂಡಾಗೂ ನಾರ್ಮಲ್ ಎಂದು ಬರುತ್ತದೆ‌. ಆದರೆ ಸಮಸ್ಯೆಗಳು ನಿಲ್ಲುವುದಿಲ್ಲ. ಹಾಗಾದರೆ ಇದಕ್ಕೆ ಕಾರಣ ಏನು ಎಂದರೆ ನಾಭಿಯ ಸ್ಥಾನ ಜರುಗಿರುವುದು. ಈ ಸಮಸ್ಯೆಗಳು ಪ್ರಾರಂಭವಾಗಿರುವುದು ಯಾವಾಗ ಎಂದರೆ ಎಲ್ಲರಿಂದ ಬರುವ ಉತ್ತರ ಬಿದ್ದಾಗ ಎಂದು. ಬಿದ್ದಾಗ ನಾಭಿ ಅದರ ಸ್ಥಾನದಿಂದ ಜರುಗಿದ್ದರೆ ಅಸಿಡಿಟಿ ಸಮಸ್ಯೆಗಳು ಕಂಡುಬರುತ್ತದೆ.

ನಾಭಿ ಜರುಗಿರುವುದನ್ನು ಪರೀಕ್ಷೆ ಮಾಡುವುದು ಹೇಗೆ ಎಂದರೆ
ಮೊದಲನೆಯ ವಿಧಾನ- ಎಡಗಡೆಯ ಎದೆಯ ನಿಪ್ಪಲ್ ನಿಂದ ಹೊಕ್ಕಳವರೆಗಿನ ಅಳತೆ, ಬಲಗಡೆ ಎದೆಯ ನಿಪ್ಪಲ್ ನಿಂದ ಹೊಕ್ಕಳವರೆಗಿನ ಅಳತೆ ಎರಡೂ ಒಂದೆ ಇದ್ದರೆ, ಹಾಗೂ ಹೊಕ್ಕಳಿನಿಂದ ಎಡಗಾಲಿನ ಹೆಬ್ಬೆರಳಿನ ವರೆಗಿನ ಅಳತೆ ಹಾಗೂ ಹೊಕ್ಕಳಿನಿಂದ ಬಲಗಾಲಿನ ಹೆಬ್ಬೆರಳಿನ ವರೆಗಿನ ಅಳತೆ ಒಂದೆ ಇದ್ದರೆ ಆಗ ನಾಭಿ ಸರಿಯಾದ ಜಾಗದಲ್ಲಿ ಇದೆ ಎಂದು ಅರ್ಥ.

ಎರಡನೆಯ ವಿಧಾನ- ಅಂಗಾತ ಮಲಗಿ ಕೈಯಲ್ಲಿನ ಮೂರು ಬೆರಳುಗಳನ್ನು ಒಟ್ಟುಗೂಡಿಸಿ ಹೊಕ್ಕಳಿನಲ್ಲಿ ಹಾಕಿದಾಗ, ಮೂರು ಬೆರಳುಗಳ ಮಧ್ಯದಲ್ಲಿ ಸಣ್ಣದಾದ ಬಡಿತದ ಅನುಭವ ಆಗುತ್ತಿದ್ದರೆ ನಾಭಿ ಸರಿಯಾದ ಜಾಗದಲ್ಲಿ ಇದೆ ಎಂದು ಅರ್ಥ. ಮೇಲೆ, ಬಲಗಡೆ ಅಥವಾ ಎಡಗಡೆ ನಾಭಿ ಬಡಿತದ ಅನುಭವವಾದರೆ ನಾಭಿ ಜರುಗಿದೆ ಎಂದು ಅರ್ಥ. ಹಳೆಯ ಕಾಲದಲ್ಲಿ ಬಟ್ಟಿ ಜರುಗುವುದು ಎನ್ನುತ್ತಾರೆ. ಆದರೆ ಜನಪದ ಭಾಷೆಯಲ್ಲಿ ಬಟ್ಟಿ, ಕನ್ನಡದಲ್ಲಿ ಹೊಕ್ಕುಳು, ಸಂಸ್ಕೃತದಲ್ಲಿ ನಾಭಿ ಎನ್ನುತ್ತಾರೆ.

ನಾಭಿ ಕೆಳಗೆ ಜರುಗಿದರೆ ಮಲಬದ್ಧತೆ ಬರುತ್ತದೆ ಅದೆ ಹೆಣ್ಣು ಮಕ್ಕಳಲ್ಲಿ ಮುಟ್ಟಿನ ಸಮಸ್ಯೆ, ಗರ್ಭಕೋಶದ ಸಮಸ್ಯೆ ಬರುತ್ತದೆ. ನಾಭಿ ಮೇಲೆ ಜರುಗಿದರೆ ಗ್ಯಾಸ್, ಅಸಿಡಿಟಿ ಸಮಸ್ಯೆ, ಪಿತ್ತ, ಕಣ್ಣು ಮಂಜಾಗುವುದು, ವಾಂತಿ ಸಮಸ್ಯೆ ಬರುತ್ತದೆ. ನಾಭಿ ಎಡಗಡೆ ಜರುಗಿದರೆ ಮಧುಮೇಹ ಮತ್ತು ಮುಂತಾದ ಸಮಸ್ಯೆಗಳು ಕಂಡು ಬರುತ್ತದೆ. ಹಾಗೆ ನಾಭಿ ಬಲಗಡೆ ಜರುಗಿದರೆ ಲಿವರ್ ಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಾಭಿ ಸರಿದರೆ ಆಸ್ಪತ್ರೆಗಳ ಯಾವ ಚೆಕಪ್ ಗಳಲ್ಲಿಯೂ ಇದು ಕಾಣಸಿಗುವುದಿಲ್ಲ. ಯಾವ ಚಿಕಿತ್ಸೆ, ಮಾತ್ರೆಗಳು ಪ್ರಭಾವ ಬಿರುವುದಿಲ್ಲ. ಯಾವುದೆ ಶಸ್ತ್ರ ಚಿಕಿತ್ಸೆಯೂ ಫಲಕಾರಿಯಾಗುವುದಿಲ್ಲ. ನಾಭಿ ಸರಿದಾಗ ಅದರ ಸುತ್ತಲಿರುವ ಜಠರ, ಮೂತ್ರಕೋಶ, ಹೆಣ್ಣು ಮಕ್ಕಳಲ್ಲಿ ಗರ್ಭಕೋಶ, ಲಿವರ್, ಬೆನ್ನು ಹುರಿ ಇವೆಲ್ಲದರ ಮೇಲೆ ಪರಿಣಾಮ ಬೀರುತ್ತದೆ. ನಾಭಿಯನ್ನು ಸರಿಯಾದ ಸ್ಥಾನದಲ್ಲಿ ಕೂರಿಸಲು ಆದಿ ಚಿಕಿತ್ಸೆ ಮಾಡಿಕೊಳ್ಳಬೇಕು. ನಾಭಿ ಚಿಕಿತ್ಸೆ ತೆಗೆದುಕೊಂಡರೆ ಯಾವುದೇ ಆಸ್ಪತ್ರೆಗಳ ಮಾತ್ರೆಗಳ ಅವಶ್ಯಕತೆ ಇಲ್ಲದೆ ಸಮಸ್ಯೆಗಳ ಪರಿಹಾರ ಸಿಗುತ್ತದೆ. ಈ ಚಿಕಿತ್ಸೆಗಳು ಹಿಂದಿನ ಕಾಲದಿಂದಲೂ ಇರುವ ಚಿಕಿತ್ಸೆಯ ಪದ್ಧತಿಯೆ ಆಗಿದೆ.

ಈ ಎಲ್ಲ ಸಮಸ್ಯೆಗಳಿಗೆ ಆಸ್ಪತ್ರೆಗಳ ಇಂಗ್ಲೀಷ್ ಮಾತ್ರೆಗಳು ಪರಿಹಾರ ನೀಡುವುದಿಲ್ಲ. ಈ ಮೇಲಿನ ಸಮಸ್ಯೆ ಇದ್ದವರು ನಾಭಿ ಚಿಕಿತ್ಸೆ ಮಾಡುವುದು ಉತ್ತಮ.

Comments are closed.