ಆರೋಗ್ಯ

ದೇಹದಲ್ಲಿ ಕೊಲೆಸ್ಟ್ರಾಲ್ ಅತಿಯಾಗಿ ಇದ್ದರೂ ಈ ಬೀಜ ಹೃದಯಕ್ಕೆ ತುಂಬಾ ಒಳ್ಳೆಯದು

Pinterest LinkedIn Tumblr

ಆರೋಗ್ಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ,ತೂಕ ಇಳಿಸಿಕೊಳ್ಳಲು ಈ ಬೀಜ ಸಹಕಾರಿ ಇದನ್ನು ನಿಯಮಿತವಾಗಿ ತೆಗೆದುಕೊಂಡರೆ ನಾವು ಆರೋಗ್ಯಕರ ಲಾಭವನ್ನು ಪಡೆದುಕೊಳ್ಳಬಹುದು..ಅದು ಯಾವುದು ಗೋತ್ತೆ ಅದುವೇ ಗೋಡಂಬಿ ಬೀಜ. ಗೋಡಂಬಿಯನ್ನು ಜಗತ್ತಿನ ಅತಿ ಆರೋಗ್ಯದಾಯಕ ಆಹಾರ ಎಂದು ಹೇಳುತ್ತಾರೆ. ಇದರಲ್ಲಿ ಪ್ರೊಟೀನ್, ವಿಟಮಿನ್, ಖನಿಜಗಳು ಹೇರಳವಾಗಿ ಇರುತ್ತದೆ. ಹಾಗಾಗಿ ಗೊಡಂಬಿಯಿಂದ ನಮ್ಮ ದೇಹಕ್ಕೆ ಏನೆಲ್ಲಾ ಆರೋಗ್ಯಕರ ಲಾಭಗಳು ಇವೆ ಅನ್ನೋದರ ಬಗ್ಗೆ ತಿಳಿಯಿರಿ.

ಫೈಬರ್, ಪ್ರೊಟೀನ್ ಆರ್ಜಿನೆನ್ ಅಂಶ ಇರುವುದರಿಂದ ನಿತ್ಯವೂ ಮಿತವಾಗಿ ಗೋಡಂಬಿ ಸೇವಿಸಿದರೆ ಉತ್ತಮ. ಗೋಡಂಬಿಯಲ್ಲಿ ಕೊಲೆಸ್ಟ್ರಾಲ್ ಅತಿಯಾಗಿ ಇದ್ದರೂ ಇದು ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಹಾಗಾಗಿ ಇದು ಹೃದಯಕ್ಕೆ ತುಂಬಾ ಒಳ್ಳೆಯದು. ಇದನ್ನು ತಿನ್ನುವುದರಿಂದ ಹೃದಯದ ಸ್ನಾಯುಗಳು ಬಲವಾಗುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ . ಗೋಡಂಬಿಯಲ್ಲಿ ಪೊಟ್ಯಾಷಿಯಂ, ಮಗ್ನಿಶಿಯಂ ಅಂಶ ಇರುವುದರಿಂದ ಮೂಳೆಗೆ ಸಂಬಂಧಿತ ಸಮಸ್ಯೆಗಳಿಗೆ ರಕ್ಷಣೆ ಆಗಿ ನಿಲ್ಲುತ್ತದೆ. ಕಣ್ಣುಗಳನ್ನು ಕಣ್ಣಿನ ಪೊರೆಯನ್ನು ರಕ್ಷಿಸಲು ಗೋಡಂಬಿ ತುಂಬಾ ಸಹಕಾರಿ.

ನಿತ್ಯವೂ ಗೋಡಂಬಿ ಸೇವಿಸಿದರೆ ನಮ್ಮ ದೇಹಕ್ಕೆ ಹೇರಳವಾದ ಮಿನರಲ್ಸ್ ಮತ್ತು ವಿಟಮಿನ್ ಸಿಗುತ್ತವೆ. ಈಗ ಕೃಷಿಯಲ್ಲಿ ತುಂಬಾ ರಾಸಾಯನಿಕ ಬಳಸುವುದರಿಂದ ಅಷ್ಟೊಂದು ಪೌಷ್ಟಿಕವಾದ ಆಹಾರ ನಮಗೆ ಸಿಗಲ್ಲ. ಹಾಗಾಗಿ ತುಂಬಾ ಜನರು ಡ್ರೈ ಫ್ರೂಟ್ಸ್ ನ ಮೊರೆ ಹೋಗಿರುತ್ತಾರೆ. ಅದರಲ್ಲಿ ಈ ಗೋಡಂಬಿ ಅತ್ಯದ್ಭುತವಾದ ಡ್ರೈ ಫ್ರೂಟ್ ಆಗಿದೆ.

ನೀವು ಕೂಡ ಪ್ರತಿನಿತ್ಯ ಮಿತವಾಗಿ ಗೋಡಂಬಿಯನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಬದಲಾವಣೆಯನ್ನು ಕಾಣಬಹುದು. ಹೆಚ್ಚಿನ ಪ್ರಮಾಣದಲ್ಲಿ ಗೋಡಂಬಿಯನ್ನು ಸೇವಿಸುವುದರಿಂದ ರಕ್ತ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಹುದು. ರಕ್ತದಲ್ಲಿ ಕಬ್ಬಿಣಾಂಶ ಕೊರತೆ ಇರುವವರು ನಿತ್ಯವೂ ಗೋಡಂಬಿ ಸೇವಿಸಿದರೆ ಉತ್ತಮ. ಬಾದಾಮಿ ಗೋಡಂಬಿ ಸೇವಿಸಿದರೆ ಸಣ್ಣಗಾಗಲು ಸಹಾಯ ಆಗುತ್ತದೆ. ಇದರಲ್ಲಿ ಕೊಬ್ಬು ಹಾಗೂ ಕ್ಯಾಲೋರಿಗಳು ಇದ್ದರೂ ತೂಕವನ್ನು ಹೆಚ್ಚಿಸುವುದಿಲ್ಲ. .

ಹಾಗದರೆ ಇಂದಿನಿಂದಲೇ ಗೋಡಂಬಿ ಸೇವಿಸಲು ಪ್ರಾರಂಭಿಸಿ… ಹಾಗೂ ಆರೋಗ್ಯವಾಗಿರಿ.

 

 

 

 

Comments are closed.