ಕಣ್ಣು ಮನುಷ್ಯನಿಗೆ ಬಹು ಮುಖ್ಯವಾದ ಅಂಗ. ಆಧುನಿಕ ಜೀವನ ಶೈಲಿಯಲ್ಲಿ ಯಾರಿಗೆ ಯಾವಾಗ ಯಾವ ಕಾಯಿಲೆ ಬರತ್ತೆ ಅಂತ ಹೇಳೋದು ಸಾಧ್ಯವಿಲ್ಲ. ಡಯಾಬಿಟೀಸ್ ನಿಂದ ಬರುವಂತಹ ರೇಟಿನೋ ಪತಿ ಹಾಗೂ ಕಣ್ಣಿನಲ್ಲಿ ಪೊರೆ ಕೂಡ ಕಂಡುಬರಬಹುದು. ಇಂತಹ ಸಮಸ್ಯೆಗಳು ಬಂದಾಗ ಸಾಮಾನ್ಯವಾಗಿ ನಾವು ವೈದ್ಯರ ಬಳಿ ಹೋಗುತ್ತೇವೆ. ಕಣ್ಣಿನ ಓಪರೇಶನ್, ಕಣ್ಣಿಗೆ ಕನ್ನಡಕವನ್ನು ಅಥವಾ ಇನ್ನೂ ಸ್ವಲ್ಪ ಮುಂದೆ ಹೋಗಿ ಕಾಂಟ್ಯಾಕ್ಟ್ ಲೆನ್ಸ್ ಅನ್ನೋ ಹಾಕಿ ಕಳಿಸುತ್ತಾರೆ. ಇದರಿಂದಾಗಿಯೇ ನಾವು ಈಗಿನ ಕಾಲದಲ್ಲಿ ಚಿಕ್ಕ ಮಕ್ಕಳು ಸಹ ಕನ್ನಡಕ ಹಾಕುವಂತೆ ಆಗಿದೆ. ಹಾಗಾದ್ರೆ ಈ ಕಣ್ಣಿನ ಸಮಸ್ಯೆಗೆ ಕನ್ನಡಕ ಆಪರೇಶನ್ ಬಿಟ್ರೆ ಬೇರೆ ದಾರಿ ಇಲ್ವಾ ಅನ್ನೋ ಪ್ರಶ್ನೆ ಮೂಡಿದರೆ ತಪ್ಪೇನು ಇಲ್ಲ. ಈ ಪ್ರಶ್ನೆಗೆ ಉತ್ತರ ಮರ್ಮ ಚಿಕಿತ್ಸೆಯಲ್ಲಿ ಇದೆ.
ಮರ್ಮ ಚಿಕಿತ್ಸಾ ವಿಧಾನ :
ನಮ್ಮ ಮುಖದಲ್ಲಿ ಕಣ್ಣು ಹಾಗೂ ಕಿವಿಯ ಮಧ್ಯದಲ್ಲಿ ನಮ್ಮ ಮಧ್ಯದ ಬೆರಳಿನ ಸಹಾಯದಿಂದ ವೃತ್ತಾಕಾರವಾಗಿ ಮೂರು ಬಾರಿ ಎಡಕ್ಕೆ ಹಾಗೂ ಮೂರು ಬಾರಿ ಬಲಕ್ಕೆ ವೃತ್ತಾಕಾರವಾಗಿ ಪ್ರೆಸ್ ಮಾಡುತ್ತಾ ತಿರುಗಿಸಬೇಕು. ಇದು ಒಂದು ಮುಖ್ಯವಾದ ಮರ್ಮ. ಇದರ ನಂತರ ಹುಬ್ಬಿನ ಮಧ್ಯ ಭಾಗದಲ್ಲಿ ಬಲಭಾಗಕ್ಕೆ ಮೂರು ಬಾರಿ ಹಾಗೂ ಎಡ ಭಾಗಕ್ಕೆ ಮೂರು ಬಾರಿ ಎರಡೂ ಹುಬ್ಬಿಗು ವೃತ್ತಾಕಾರವಾಗಿ ಹೆಬ್ಬೆರಳಿನ ಸಹಾಯದಿಂದ ಪ್ರೆಸ್ ಮಾಡಿ ತಿರುಗಿಸಬೇಕು. ನಂತರ ಇದೆ ವಿಧಾನದಲ್ಲಿ ಕಣ್ಣಿನ ತುದಿಯ ಭಾಗಕ್ಕೆ ಕೂಡ ಮಾಡಬೇಕು. ಈ ಮರ್ಮ ಚಿಕಿತ್ಸೆಗಳು ನಮ್ಮ ದೃಷ್ಟಿಯನ್ನು ಹೆಚ್ಚು ಮಾಡುತ್ತೆ.
ಇವಿಷ್ಟನ್ನು ಪ್ರತೀ ನಿತ್ಯ ಮೂರು ಮೂರು ಬಾರಿ ಮಾಡಿಕೊಳ್ಳುವುದರಿಂದ ದೃಷ್ಟಿ ದೋಷ ನಿವಾರಣೆ ಆಗುತ್ತದೆ. ಕಣ್ಣಿನ ಹಲವಾರು ಕುಂದು ಕೊರತೆಗಳ ನಿವಾರಣೆ ಆಗತ್ತೆ. ಈ ವಿಧಾನವನ್ನು ಪ್ರತೀ ನಿತ್ಯ ಬೆಳಿಗ್ಗೆ ೬-೭ ಗಂಟೆ ಈ ಅವಧಿಯಲ್ಲಿ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಈ ಮರ್ಮ ಚಿಕಿತ್ಸೆಗಳನ್ನ ಮಾಡಿಕೊಂಡಾಗಲೂ ಸಹ ದೃಷ್ಟಿ ದೋಷ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ ಅವರು ಆಯುರ್ವೇದ ಪದ್ಧತಿಯ ಮೂಲಕ ನಿವಾರಣೆ ಮಾಡಿಕೊಡುತ್ತಾರೆ.
ಕಣ್ಣಿನ ಸಮಸ್ಯೆಗಳು ಕಾಣಿಸಿಕೊಂಡಾಗ ಈ ರೀತಿಯ ಚಿಕಿತ್ಸೆಗಳನ್ನು ಪಡೆದರೆ ಸಮಸ್ಯೆ ನಿವಾರಣೆ ಆಗತ್ತೆ. ಆಪರೇಷನ್ ಅಗತ್ಯ ಬರುವುದೇ ಇಲ್ಲ. ಮಾಡಿನೋಡಿ ಹಾಗೂ ಕಣ್ಣಿನ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.