ಆರೋಗ್ಯ

ಮಾಗಿದ ಬಾಳೆಹಣ್ಣು ತಿಂದರೆ ಆಗುವ ಲಾಭವನ್ನೊಮ್ಮೆ ನೀವು ಅರಿಯಲೇ ಬೇಕು…..!

Pinterest LinkedIn Tumblr

ಬಾಳೆಹಣ್ಣು(Banana) ಪೊಟ್ಯಾಸಿಯಂ ಮತ್ತು ವಿಟಮಿನ್ ಗಳ ಮಹಾಸಾಗರ. ಇದಲ್ಲದೆ ಬಾಳೆಹಣ್ಣಿನಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ, ಇದು ನಮ್ಮ ದೇಹಕ್ಕೆ ಬಹಳ ಮುಖ್ಯವಾಗಿದೆ. ಈ ಕಾರಣಕ್ಕಾಗಿಯೇ ನಮ್ಮ ದಿನನಿತ್ಯದ ಆಹಾರದಲ್ಲಿ ಬಾಳೆಹಣ್ಣು ಕೂಡ ಸೇರಿದೆ. ನೀವೂ ಪ್ರತಿ ದಿನ ಒಂದು ಬಾಳೆಹಣ್ಣನ್ನು ತಿಂದರೆ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಮಾಗಿದ ಬಾಳೆಹಣ್ಣು ತಿಂದರೆ ಎರಡುಪಟ್ಟು ಅಧಿಕ ಲಾಭವಿದೆ.

ಬಾಳೆಯು ತುಂಬಾ ಹಣ್ಣಾಗುತ್ತಿದ್ದಂತೆ ಸಿಪ್ಪೆಯ ಮೇಲೆ ಕಪ್ಪು ಚುಕ್ಕಿಗಳು ಕಾಣಿಸುತ್ತದೆ. ಇಂತಹ ಬಾಳೆಹಣ್ಣಿನಲ್ಲಿ ರೋಗ ಪ್ರತಿರೋಧಕ ಶಕ್ತಿಯು ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೆ ಇನ್ನೂ ಅನೇಕ ಪ್ರಯೋಜನಗಳಿವೆ.

ರಕ್ತದೊತ್ತಡ ನಿಯಂತ್ರಣ: ಬಾಳೆಹಣ್ಣು ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಮ್ ಮತ್ತು ಕಡಿಮೆ ಪ್ರಮಾಣದ ಸೋಡಿಯಂ ಅನ್ನು ಹೊಂದಿರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ದೇಹದಲ್ಲಿ ನೀರಿನಾಂಶವನ್ನು ಕಡಿಮೆಯಾಗದಂತೆ ನೋಡಿಕೊಳ್ಳುವಲ್ಲಿಯೂ ಬಾಳೆಹಣ್ಣಿನ ಪಾತ್ರ ಮುಖ್ಯವಾದದು.

ಹೊಟ್ಟೆಯ ಸಮಸ್ಯೆಗೆ ಮನೆಮದ್ದು: ಬಾಳೆಹಣ್ಣನ್ನು ಸಕ್ಕರೆಯೊಂದಿಗೆ ತಿನ್ನುವುದರಿಂದ ಎದೆಯುರಿ, ಹುಳಿ ತೇಗು, ಗ್ಯಾಸ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ಹಣ್ಣಿನಲ್ಲಿ ಮೆಗ್ನೀಷಿಯಂ ಪ್ರಮಾಣ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಯು ಸುಲಭವಾಗುತ್ತದೆ. ಇದರಿಂದ ಚಯಾಪಚಯ ಕ್ರಿಯೆಯು ಸ್ಥಿರವಾಗಿರುತ್ತದೆ.

ಬಲ ಹೆಚ್ಚಿಸಿಕೊಳ್ಳಬಹುದು: ವ್ಯಾಯಾಮಕ್ಕೂ ಮುಂಚಿತವಾಗಿ ಎರಡು ಬಾಳೆಹಣ್ಣುಗಳನ್ನು ತಿನ್ನುವುದರಿಂದ ಹುರುಪು ಹೆಚ್ಚಾಗುತ್ತದೆ. ಇದು ಬಲುಬೇಗ ದೇಹ ದಣಿಯುವುದನ್ನು ತಡೆಯುತ್ತದೆ.

ರಕ್ತಹೀನತೆಯಿಂದ ಮುಕ್ತಿ: ಬಾಳೆಹಣ್ಣಿನಲ್ಲಿ ಕಬ್ಬಿಣಾಂಶದ ಪ್ರಮಾಣ ಹೆಚ್ಚಿರುತ್ತದೆ. ಇದು ಹಿಮೊಗ್ಲೋಬಿನ್​ ಅನ್ನು ಹೆಚ್ಚಿಸಿ, ರಕ್ತಹೀನತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಹದಿಹರೆಯದವರು ಹೆಚ್ಚು ಹಣ್ಣಾಗಿರುವ ಬಾಳೆಹಣ್ಣನ್ನು ತಿನ್ನುವುದರಿಂದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಅಲ್ಸರ್ ಸಮಸ್ಯೆಗೆ ಪರಿಹಾರ: ಹೊಟ್ಟೆ ಹುಣ್ಣಿನ ಅಥವಾ ಅಲ್ಸರ್ ಸಮಸ್ಯೆ ಹೊಂದಿದ್ದರೆ ತುಂಬಾ ಹಣ್ಣಾಗಿರುವ ಬಾಳೆಹಣ್ಣನ್ನು ತಿನ್ನಬಹುದು. ಇದರಿಂದ ಅಲ್ಸರ್ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಮುಟ್ಟಿನ ಸಮಯದ ಖಿನ್ನತೆಗೆ ಪರಿಹಾರ: ಮುಟ್ಟಿನ ಸಮಯದಲ್ಲಿ ಉಂಟಾಗುವ ಖಿನ್ನತೆಗೆ ಬಾಳೆಹಣ್ಣನ್ನು ತಿನ್ನುವುದರಿಂದ ಪರಿಹಾರ ಕಾಣಬಹುದು. ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಸರಿದೂಗಿಸಲು ಸಹ ಬಾಳೆಹಣ್ಣು ಸಹಕಾರಿಯಾಗಿದೆ.

Comments are closed.