ಆರೋಗ್ಯ

ಬೆಳ್ಳುಳ್ಳಿಯ ಎರಡು ಎಸಳು ಹಸುವಿನ ಹಾಲಿನಲ್ಲಿ ಬೇಯಿಸಿ ಸೇವಿದರೆ ಹೊಟ್ಟೆಯಲ್ಲಿನ ಹುಳುಗಳ ಸಮಸ್ಯೆ ನಿವಾರಣೆ

Pinterest LinkedIn Tumblr

ನಮ್ಮ ಸುತ್ತ ಮುತ್ತಲಿನಲ್ಲಿರುವ ಹಲವಾರು ವಸ್ತುಗಳಲ್ಲಿ, ವಿವಿಧ ಬಗೆಯ ಜೌಷದೀಯ ಗುಣಗಳಿವೆ ಆದರೆ ಇದು ಎಲ್ಲರಿಗೂ ತಿಳಿದಿರುವುದಿಲ್ಲ.ತಿಳಿದರು ಅದನ್ನು ಬಳಸುವಷ್ಟು ಸಮಯವಿರುವುದಿಲ್ಲ. ಅದಕ್ಕಾಗಿ ಎಲ್ಲರೂ ವೈದರ ಬಳಿ ಹೋಗುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.ಅದಕ್ಕಾಗಿ ಇಲ್ಲಿದೆ ಕೆಲವು ಸುಲಭ ಸರಳ ಮನೆ ಮದ್ದುಗಳು.

ಸಾಮಾನ್ಯವಾಗಿ ಈ ಸಸ್ಯದ ಬಗ್ಗೆ ಬಹುತೇಕ ಜನರಿಗೆ ಗೊತ್ತಿರುತ್ತದೆ ಇದರಲ್ಲಿ ಹತ್ತಾರು ಔಷದಿ ಗುಣಗಳಿವೆ, ಈ ಸಸ್ಯವನ್ನು ಕೆಲವರು ಮನೆಯ ಮುಂದೆ ಬೆಳೆಸಿರುತ್ತಾರೆ. ಆಯುರ್ವೇದಿಕ ಔಷಧಿಗಳಿಗೆ ಈ ಸಸ್ಯ ಉತ್ತಮ ಕೆಲಸ ಮಾಡುವುದು ಇನ್ನು ಸಾಮಾನ್ಯವಾಗಿ ಕಾಡುವಂತ ಶೀತ ಕಫ ಇಂತಹ ಸಮಸ್ಯೆಗಳ ನಿವಾರಣೆಗೆ ಅಂಗೈಯಲ್ಲೇ ಮದ್ದು ಅನ್ನೋ ರೀತಿಯಲ್ಲಿ ಈ ಗಿಡದ ಎಲೆ ಪರಿಹಾರವನ್ನು ನೀಡುತ್ತದೆ. ಅಷ್ಟಕ್ಕೂ ಈ ಗಿಡ ಯಾವುದು ಇದರ ಉಪಯೋಗಗಳು ಯಾವುವು ಅನ್ನೋದನ್ನ ಸಂಪೂರ್ಣವಾಗಿ ತಿಳಿಯೋಣ.

ಈ ಸಸ್ಯವನ್ನು ಆರೋಗ್ಯದ ಸಲುವಾಗಿ ಮನೆಯ ಮುಂದೆ ಬೆಳೆಸುತ್ತಾರೆ, ಇದರ ಹೆಸರು ದೊಡ್ಡಪತ್ರೆ ಎಂಬುದಾಗಿ ಇದು ಬಳಷ್ಟು ಜನಕ್ಕೆ ಚಿರಪರಿಚಿತವಾದ ಸಸ್ಯವಾಗಿದೆ. ಇದರಲ್ಲಿರುವಂತ ಔಷದಿ ಗುಣಗಳು ಯಾವುವು ಅನ್ನೋದನ್ನ ತಿಳಿಯುವುದಾದರೆ, ಮೊದಲನೆಯದಾಗಿ ಎದೆಯಲ್ಲಿ ಕಟ್ಟಿರುವಂತ ಕಫ ಹಾಗೂ ಶೀತ ನಿವಾರಣೆಯನ್ನು ಮಾಡಬಲ್ಲದು, ಹೌದು ಬೆಳಗ್ಗೆ ಖಾಲಿ ಹೊಟ್ಟೆಗೆ ಈ ದೊಡ್ಡ ಪತ್ರೆ ಗಿಡದ ಎಲೆಗಳನ್ನು 7 ರಿಂದ 8 ಎಲೆಗಳನ್ನು ತಗೆದುಕೊಂಡು ಶುದ್ಧವಾದ ನೀರಿನಲ್ಲಿ ತೊಳೆದು ಬೆಳಗ್ಗೆ ಎದ್ದ ತಕ್ಷಣ ಸೇವನೆ ಮಾಡಿದರೆ ಎದೆಯಲ್ಲಿ ಕಟ್ಟಿರುವಂತ ಕಫ ಹಾಗೂ ಶೀತ ನಿವಾರಣೆಯಾಗುವುದು.

ಈ ದೊಡ್ಡಪತ್ರೆ ಗಿಡ ಹಲವು ಔಷಧಿ ಗುಣಗಳನ್ನು ಹೊಂದಿದೆ, ಇನ್ನು ಹಲವು ಔಷಧಿಗುಣಗಳನ್ನು ನಿಮಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತೇವೆ, ನೈಸರ್ಗಿಕವಾಗಿ ಸಿಗುವಂತ ಹಲವು ಸಸ್ಯಗಳು ಮಾನವನ ದೇಹಕ್ಕೆ ಉತ್ತಮ ಪ್ರಯೋಜನಕಾರಿ ಅಂಶಗಳನ್ನು ದೊರಕಿಸಿ ಕೊಡುತ್ತದೆ. ಇನ್ನೊಂದು ವಿಶೇಷವಾದ ಮನೆಮದ್ದುನ್ನು ತಿಳಿಯೋಣ

ಹೊಟ್ಟೆಹುಳು ಸಮಸ್ಯೆಗೆ ಮನೆಮದ್ದು: ಮನೆಯಲ್ಲಿ ಅಡುಗೆಗೆ ಬಳಸುವಂತ ಬೆಳ್ಳುಳ್ಳಿಯನ್ನು ಹತ್ತು ಗ್ರಾಂ ನಷ್ಟು ತಗೆದುಕೊಂಡು ಅದರ ಎಸಳುಗಳನ್ನು ಬಿಡಿಸಿ ಹಸುವಿನ ಹಾಲಿನಲ್ಲಿ ಬೇಯಿಸಿ ಅದನ್ನು ಸೇವಿಸುತ್ತಾ ಬಂದರೆ ಹೊಟ್ಟೆಯಲ್ಲಿ ಇರುವಂತ ಹುಳುಗಳು ನಿವಾರಣೆಯಾಗುತ್ತವೆ.

ಇನ್ನು ಮದುಮೇಹ ಅಂದರೆ ಸಕ್ಕರೆಕಾಯಿಲೆ ಇರುವಂತವರು ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನುಗ್ಗೆಕಾಯಿಯನ್ನು ಅಡುಗೆಗಳಲ್ಲಿ ಬಳಸಿ ಸೇವನೆ ಮಾಡಬೇಕು ಅಷ್ಟೇ ಅಲ್ಲದೆ ನುಗ್ಗೆ ಸೊಪ್ಪನ್ನು ಕೂಡ ಬಳಸುವುದರಿಂದ ಕಾಲಾನುಕ್ರಮೇಣ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ನುಗ್ಗೆಯಲ್ಲಿ ಹಲವು ಪೋಷಕಾಂಶಗಳು ಇದ್ದು ಪುರುಷರಿಗೆ ಹಾಗೂ ಮಹಿಳೆಯರಿಗೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ.

Comments are closed.