ಆರೋಗ್ಯ

ಮಾಸ್ಕ್ ದಂಡ ಇಳಿಸಿದ ರಾಜ್ಯ ಸರಕಾರ; ಇನ್ಮುಂದೆ ನಗರದಲ್ಲಿ 250, ಗ್ರಾಮೀಣ ಭಾಗಕ್ಕೆ 100ರೂ..!

Pinterest LinkedIn Tumblr

ಬೆಂಗಳೂರು: ಕೊರೋನಾ ಹಿನ್ನೆಲೆ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯೇ ಹದಗೆಟ್ಟಿರುವ ನಡುವೆಯೇ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ದುಬಾರಿ ದಂಡ ವಿಧಿಸಿ ರಾಜ್ಯ ಸರಕಾರ ಜನರ ಕಂಗೆಣ್ಣಿಗೆ ಗುರಿಯಾಗಿತ್ತು. ಆದೇಶ ಜಾರಿಗೊಳಿಸಿದ ಕೆಲವೇ ದಿನದಲ್ಲೇ ಸಾರ್ವಜನಿಕರ ವಿರೋಧ ಮತ್ತು ತಜ್ಞರ ಅಭಿಪ್ರಾಯದಂತೆ ರಾಜ್ಯ ಸರಕಾರ ಮಾಸ್ಕ್ ಸಂಬಂಧಿಸಿದ ದಂಡವನ್ನು ಇಳಿಸಿ ಬುಧವಾರ ಆದೇಶ ಹೊರಡಿಸಿದೆ.

ನಗರ ಪ್ರದೇಶದಲ್ಲಿ 1 ಸಾವಿರದಿಂದ 250ಕ್ಕೆ ಇಳಿಕೆ, ಗ್ರಾಮೀಣ ಪ್ರದೇಶದಲ್ಲಿ 500 ರೂ.ನಿಂದ 100 ರೂ.ಗೆ ಮಾಸ್ಕ್ ದಂಡ ಇಳಿಸಿ ಸಿಎಂ ಬಿಎಸ್​​ವೈ ಆದೇಶ ಮಾಡಿದ್ದಾರೆ. ಈ ನೂತನ ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ.

ಪ್ರಧಾನಿ ನರೇಂದ್ರ ಮೋದಿಯವರು ಹೇಖಿದಂತೆ ‘ಜೀವ ಮತ್ತು ಜೀವನ’ ಎರಡನ್ನು ಸರಿದೂಗಿಸಿಕೊಂಡು ಹೋಗಲು ಸರ್ಕಾರ ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರಕಾರದೊಂದಿಗೆ ಸಹಕರಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟನೆಯಲ್ಲಿ ಕೋರಿದ್ದಾರೆ.

Comments are closed.