ಆರೋಗ್ಯ

ಮಹಿಳೆಯ ಗರ್ಭದಲ್ಲಿರುವ ಮಗು ದುಃಖಿತವಾಗಿರುತ್ತದೆಯಾ ಯಾವಾಗಲೂ.?

Pinterest LinkedIn Tumblr

ಗರುಡ ಪುರಾಣ ಮತ್ತು ಭವಿಷ್ಯ ಪುರಾಣಗಳ ಪ್ರಕಾರ ಗರ್ಭದಲ್ಲಿ ಮಗು ದುಃಖಿತವಾಗಿರುವುದು ನಿಜವಾಗಿದೆ, ಮತ್ತು ಮಗು ತಾಯಿಯ ಗರ್ಭದಲ್ಲಿ ಯಾವ ರೀತಿಯ ನೋವುಗಳಿಗೆ ಒಳಗಾಗುತ್ತದೆ ಎಂಬುದನ್ನೂ ಕೂಡ ಸವಿಸ್ತಾರವಾಗಿ ವಿವರಿಸಲಾಗಿದೆ. ಅಷ್ಟೇ ಅಲ್ಲ ಮಗು ಗರ್ಭದಲ್ಲಿ ಬೆಳವಣಿಗೆಯಾಗುವ ರೀತಿಯನ್ನೂ ಕೂಡ ಸವಿವರವಾಗಿ ಹೇಳಲಾಗಿದೆ.

ಗರ್ಭದಿಂದ ಹೊರಗಿನ ಪ್ರಪಂಚಕ್ಕೆ ಬಂದ ಕೂಡಲೇ ಮಗು ಆಳುವುದು ಜಗತ್ತಿನಲ್ಲಿ ಸರ್ವೇ ಸಾಮಾನ್ಯವಾಗಿದೆ. ಹಾಗಾದ್ರೆ ಹುಟ್ಟಿದ ಕೂಡಲೇ ಮಗು ಅಳೋದು ಯಾಕೆ ಗರ್ಭದಲ್ಲಿರುವ ಮಗು ದುಃಖಿತವಾಗಿರುತ್ತದೆಯಾ ಎಮಂದು ಗರುಡ ಪುರಾಣದಲ್ಲಿ ವ್ಯಾಖ್ಯಾನಿಸ ಲಾಗಿದೆ. ಆದ್ದರಿಂದಲೇ ಮಗು ಹೊರಗಿನ ಪ್ರಪಂಚಕ್ಕೆ ತೆರೆದುಕೊಂಡ ತಕ್ಷಣ ಅಳುತ್ತದೆಯಾ ಎಂಬುದಕ್ಕೆ ಹಿರಿಯರು ಹೇಳುವ ರೀತಿಯಲ್ಲಿ ಮಗು ಗರ್ಭದಲ್ಲಿ ಇರುವಾಗ ದುಃಖಿತವಾಗಿರುತ್ತದೆ ಹುಟ್ಟಿದ ನಂತರ ಆಳುತ್ತದೆ ಎಂದು ಹೇಳುತ್ತಾರೆ. ಆ ಬಗ್ಗೆ ಗರುಡ ಪುರಾಣ ಮತ್ತು ಭವಿಷ್ಯ ಪುರಾಣದಲ್ಲಿ ಸ್ಪಷ್ಟವಾಗಿ ಉಲ್ಲೇಖಗಳಿವೆ ಅಲ್ಲದೇ ಈ ಹಾಗಾದ್ರೆ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೋಡೋಣ ಬನ್ನಿ.

ಗರುಡ ಪುರಾಣ ಮತ್ತು ಭವಿಷ್ಯ ಪುರಾಣಗಳ ಪ್ರಾಕಾರ ಮಹಿಳೆಯೊಬ್ಬಳು ಗರ್ಭ ದರಿಸಿದ ಐವತ್ತು ದಿನಗಳ ನಂತರ ಭ್ರೂಣ ರಚನೆ ಯಾಗುತ್ತದೆ ಮತ್ತು ಒಂದು ತಿಂಗಳಲ್ಲಿ ಐದು ಭಾಗಗಳು ಅಂದರೆ ಕುತ್ತಿಗೆ ತಲೆ ಭುಜ ಹೊಟ್ಟೆ ಮತ್ತು ಬೆನ್ನು ಮೂಳೆಗಳ ರಚನೆಯಾಗುತ್ತದೆ. ಮುಂದಿನ ನಾಲ್ಕು ತಿಂಗಳಲ್ಲಿ ಭ್ರೂಣದ ಬೆರಳುಗಳ ರಚನೆಯಾಗುತ್ತದೆ, ಮತ್ತು ಐದು ತಿಂಗಳುಗಳಲ್ಲಿ ಮುಖ ಮೂಗು ಕಿವಿಗಳ ರಚನೆ ಯಾಗುತ್ತದೆ ಹಾಗೂ ಏಳನೇ ತಿಂಗಳಲ್ಲಿ ಮೂತ್ರಪಿಂಡ ಜನನಾಂಗ ಮತ್ತು ಹೊಕ್ಕುಳು ರಚನೆಯಾಗುತ್ತದೆ ಹಾಗೂ ಎಂಟನೇ ತಿಂಗಳು ತುಂಬುವಷ್ಟರಲ್ಲಿ ಎಲ್ಲಾ ಅಂಗಗಳ ರಚನೆ ಪೂರ್ಣಗೊಂಡಿರುತ್ತದೆ. ಅಲ್ಲದೇ ತಲೆಯಲ್ಲಿ ಸ್ವಲ್ಪ ಕೂದಲುಗಳು ಬೆಳೆಯುತ್ತವೆ ಈ ಸಮಯದಲ್ಲಿ ಶಿಶುವಿನ ತಾಯಿ ಯಾವ ಆಹಾರವನ್ನು ಸೇವಿಸುತ್ತಾಳೋ ಆ ಆಹಾರದ ರಸ ಹೊಕ್ಕುಳು ಬಳ್ಳಿಯ ಮೂಲಕ ಮಗುವಿನ ಶರೀರವನ್ನು ಸೇರುತ್ತದೆ ಮತ್ತು ಅದೇ ರಸ ಮಗುವಿನ ಪೋಷಣೆಗೂ ಕಾರಣವಾಗಿರುತ್ತದೆ. ಈ ವರೆಗೆ ನಾವು ಹೇಳಿರುವ ವಿಷಯ ನಿಮಗೆ ಆಗಲೇ ತಿಳಿದಿರಬಹುದು ಆದರೆ ಈ ಹಂತದಲ್ಲಿ ಮಗುವಿನ ಮಾನಸಿಕ ಸ್ಥಿತಿಯ ಬಗ್ಗೆ ನಾವಿಂದು ತಿಳಿಸಿಕೊಡುತ್ತೇವೆ ಬನ್ನಿ.

ಗರುಡ ಪುರಾಣ ಮತ್ತು ಭವಿಷ್ಯ ಪುರಾಣಗಳ ಪ್ರಾಕಾರ ಈ ಹಂತದಲ್ಲಿ ಮಗುವು ತಾಯಿಯ ಗರ್ಭದಲ್ಲಿ ತುಂಬಾ ದುಃಖಿತವಾಗಿರುತ್ತದೆ, ಬಹಳ ನೋವಿನಿಂದ ನರಳುತ್ತಿರುತ್ತದೆ. ಯಾಕಂದ್ರೆ ಈ ಹಂತದಲ್ಲಿ ಮಗುವಿಗೆ ನೋವು ನಲಿವುಗಳ ಅರಿವು ಆಗತೊಡಗಿರುತ್ತದೆ ಅಲ್ಲದೇ ಆ ಮಗುವಿಗೆ ತನ್ನ ಪೂರ್ವಜನ್ಮ ಕೂಡಾ ನೆನಪಿನಲ್ಲಿರುತ್ತದೆ ಹಿಂದಿನ ಜನ್ಮದಲ್ಲಿ ತಾನು ಏನಾಗಿದ್ದೆ ಹಿಂದಿನ ಜನ್ಮದಲ್ಲಿ ತನ್ನ ಜೀವನದಲ್ಲಿ ಯಾವ ಯಾವ ಘಟನೆಗಳು ಗಟಿಸಿದವು ಹಾಗೂ ಕೊನೆಯಲ್ಲಿ ಆ ಜನ್ಮದ ತನ್ನ ಸಾವು ಹೇಗಾಯ್ತು ಎಂಬುದು ಈ ಹಂತದಲ್ಲಿ ಮಗುವಿಗೆ ನೆನಪಿನಲ್ಲಿರುತ್ತದೆ. ತಾನು ಬೇರೆ ಬೇರೆ ಜನ್ಮಗಳನ್ನು ಎತ್ತುತ್ತಾ ಬಂದಿದ್ದೇನೆ ಪ್ರತಿ ಬಾರಿಯೂ ನನಗೆ ಸಾವು ಪ್ರಾಪ್ತಿಯಾಗಿದೆ ಆದರೆ ನಾನು ಮತ್ತೆ ಜನಿಸುತ್ತಿದ್ದೇನೆ ಈ ಲೋಕದಲ್ಲಿ ತನ್ನ ಜನನವಾದ ಬಳಿಕ ಮತ್ತೆ ಸಂಸಾರದ ಬಂಧನದಲ್ಲಿ ಬಂಧಿಯಾಗಬೇಕು ಎಂದು ಮಗು ನೋವನ್ನು ಅನುಭವಿಸುವುದಲ್ಲದೆ ಆ ಮಗು ಆಗಲೇ ಮೋಕ್ಷದ ದಾರಿಯ ಬಗ್ಗೆಯೂ ಯೋಚಿಸತೊಡಗುತ್ತದೆ.

ಪರ್ವತದ ಕೆಳಗೆ ಮನುಷ್ಯ ಸಿಲುಕಿದರೆ ಎಷ್ಟು ಕಷ್ಟ ಅನುಭವಿಸುತ್ತಾನೋ ಅಷ್ಟೇ ಕಷ್ಟಗಳನ್ನು ಈ ಹಂತದಲ್ಲಿ ಮಗು ಅನುಭವಿಸುತ್ತಿರುತ್ತದೆ ಸಮುದ್ರದ ನೀರಿನಲ್ಲಿ ಮುಳುಗುವುದರಿಂದ ಯಾವ ರೀತಿಯ ಹಿಂಸೆಯಾಗುತ್ತದೆಯೋ, ಅದೇ ರೀತಿ ಹಿಂಸೆ ಗರ್ಭದ ಜಲದಲ್ಲಿ ಸಿಲುಕಿದ ಮುಗುವಿಗೂ ಆಗುತ್ತಿರುತ್ತದೆ. ಹಾಗೆಯೇ ಕಾದ ಕಬ್ಬಿಣದ ಕಟ್ಟುಗಳಿಂದ ಕಟ್ಟಿದರೆ ಯಾವ ರೀತಿಯ ನೋವುಂಟಾಗುವುದೊ ಅದೇ ರೀತಿಯ ನೋವು ಮಗುವಿಗೆ ತಾಯಿಯ ಗರ್ಭದ ತಾಪದಿಂದ ಉಂಟಾಗುತ್ತದೆ, ಸೂಜಿಯಿಂದ ಚುಚ್ಚುವಾಗ ಆಗುವ ನೋವಿಗಿಂತ ಎಂಟು ಪಟ್ಟು ಹೆಚ್ಚು ನೋವನ್ನು ಗರ್ಭದಲ್ಲಿರುವ ಮಗು ಅನುಭವಿಸುತ್ತದೆ. ಯಾವ ಜೀವಿಗೂ ಗರ್ಭದಲ್ಲಿ ಆಗುವ ನೋವಿಗಿಂತ ಕಠೋರವಾದ ನೋವು ಮತ್ತೊಂದಿಲ್ಲ ಎಂದು ಗರುಡ ಪುರಾಣ ಮತ್ತು ಭವಿಷ್ಯ ಪುರಾಣಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಆದರೇ ತಾಯಿಯ ಗರ್ಭದಲ್ಲಿರುವಾಗ ಇಷ್ಟೊಂದು ನೋವನ್ನು ಅನುಭವಿಸಿದ ಮಗು ತಾಯಿ ಗರ್ಭದಿಂದ ಹೊರಗೆ ಬರುವಾಗ ತಾಯಿ ಎಷ್ಟು ನೋವನ್ನು ಅನುಭವಿಸುತ್ತಾಳೋ ಅಷ್ಟೇ ನೋವನ್ನು ಮಗುವೂ ಕೂಡಾ ಅನುಭವಿಸುತ್ತದೆ, ಆದರೇ ಒಮ್ಮೆ ಅದು ಈ ಲೋಕಕ್ಕೆ ಸ್ಪರ್ಶಿಸಿ ಈ ಲೋಕದ ಗಾಳಿ ಮಗುವಿಗೆ ಸೋಕಿದ ನಂತರ ಮಗುವು ತಾನು ಗರ್ಭದಲ್ಲಿ ಅನುಭವಿಸಿದ ನೋವನ್ನು ಮತ್ತು ತನ್ನ ಪೂರ್ವದ ಜನ್ಮದ ನೆನಪುಗಳನ್ನು ಮರೆತುಬಿಡುತ್ತದೆ. ಅದು ಯಾವ ಮಟ್ಟಕ್ಕೆ ಅಂದರೆ ತಾನು ಭಗವಂತ ಈಶ್ವರನನ್ನೇ ಮರೆತುಬಿಡುತ್ತದೆ, ನಂತರ ಆ ಮಗುವಿಗೆ ನಾನು ಯಾರು ಎಲ್ಲಿದ್ದೆ ಯಾಕಾಗಿ ಇಲ್ಲಿಗೆ ಬಂದೆ ಎಂಬುದರ ಆರಿವೇ ಇಲ್ಲದಂತಾಗುತ್ತದೆ.

ಇದೇ ಕಾರಣಕ್ಕೆ ಮಗು ತಾಯಿಯ ಗರ್ಭದಿಂದ ಹೊರಗೆ ಬರುತ್ತಲೇ ಜೋರಾಗಿ ಅಳುವುದಕ್ಕೆ ಶುರುಮಾಡಿಬಿಡುತ್ತದೆ ಅಲ್ಲದೇ ಗರುಡ ಪುರಾಣ ಮತ್ತು ಭವಿಷ್ಯ ಪುರಾಣಗಳ ಪ್ರಾಕಾರ ಈ ಹಂತದಲ್ಲಿ ಮಗುವಿಗೆ ಬುದ್ಧಿ ಇದ್ದರೂ ಸಹ ಮಗು ಆ ಬುದ್ಧಿಯನ್ನು ಪ್ರಯೋಗ ಮಾಡಲು ಸಾಧ್ಯವಾಗುವುದಿಲ್ಲ ತಾಯಿಯ ಗರ್ಭದಲ್ಲಿದ್ದುಕೊಂಡು ಮಗುವು ನೋವನ್ನು ಅನುಭವಿಸಿದ್ದಲ್ಲದೇ ಹುಟ್ಟಿದ ನಂತರವೂ ಮಗು ವಿವಿಧ ರೀತಿಯಲ್ಲಿ ನೋವುಗಳನ್ನು ಅನುಭವಿಸುತ್ತಾ ಹೋಗುತ್ತದೆ ಆದರೇ ತಾಯಿಯ ಗರ್ಭದಲ್ಲಿದ್ದಾಗ ಮತ್ತು ತಾಯಿಯ ಗರ್ಭದಿಂದ ಹೊರಗೆ ಬರುವ ಸಂದರ್ಭದಲ್ಲಿ ಆಗುವ ನೋವುಗಳ ಮುಂದೆ ತಾನು ಹುಟ್ಟಿದ ನಂತರ ಆಗುವ ಯಾವ ನೋವುಗಳೂ ಕೂಡಾ ಲೆಕ್ಕಕೆ ಇಲ್ಲ ಎಂದು ಗರುಡ ಪುರಾಣ ಮತ್ತು ಭವಿಷ್ಯ ಪುರಾಣಗಳು ಸ್ಪಷ್ಟಪಡಿಸುತ್ತವೆ.

ಅದಕ್ಕಾಗಿಯೇ ಹಿರಿಯರು ಈ ಮಾತನ್ನು ಹೇಳುವುದು. ಹೆಣ್ಣಿಗೆ ತನ್ನ ಗರ್ಭದಾರಣೆಯ ಕೊನೆಯ ಹಂತದಲ್ಲಿ ಆಕೆಗೆ ಮತ್ತು ಅಕೆಯ ಮಗುವಿಗೆ ಅದು ಪುನರ್‌ಜನ್ಮ ಎಂದು ಹಿರಿಯರು ಹೇಳುವುದು.

Comments are closed.