ಆರೋಗ್ಯ

ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ರೋಗಗಳು ಬೇಗನೆ ಅಂಟೋದಿಲ್ಲ

Pinterest LinkedIn Tumblr

ಪರಿಸರದಲ್ಲಿ ಸಿಗುವಂತಹ ನಾನಾ ರೀತಿಯ ಹಣ್ಣು ತರಕಾರಿಗಳು ಸಹ ಅದರದೆ ಆದ ನೈಸರ್ಗಿಕವಾದ ಗುಣಗಳನ್ನು ಹೊಂದಿದೆ ಹಾಗೂ ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ ಇದರಲ್ಲಿರುವಂತ ಆರೋಗ್ಯಕಾರಿ ಅಂಶಗಳು ಮನುಷ್ಯನ ದೇಹಕ್ಕೆ ಹೆಚ್ಚು ಪೂರಕವಾಗಿದೆ ಅದೇ ನಿಟ್ಟಿನಲ್ಲಿ ಹಣ್ಣು ಸಹ ಹತ್ತಕ್ಕೂ ಹೆಚ್ಚು ದೊಡ್ಡ ದೊಡ್ಡ ಕಾಯಿಲೆಗಳನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ.

ಅಷ್ಟಕ್ಕೂ ಈ ಹಣ್ಣು ಯಾವುದು ಇದರಲ್ಲಿರುವಂತ ವಿಶೇಷತೆ ಏನು ಅನ್ನೋದನ್ನ ತಿಳಿಯುವುದಾದರೆ, ಈ ಹಣ್ಣನ್ನು ಅಮೃತ ನ್ಯೋನಿ ಎಂಬುದಾಗಿ ಕರೆಯಲಾಗುತ್ತದೆ. ಈ ಹಣ್ಣು ಹಲವು ಔಷಧಿಯ ಗುಣಗಳನ್ನು ಹೊಂದಿದೆ ಹಾಗೂ ಆಯುರ್ವೇದದಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ. ಸಂಶೋಧನೆಯ ಮೂಲಕ ಈ ಹಣ್ಣಿನರುವಂತ ಆರೋಗ್ಯಕಾರಿ ಪ್ರಯೋಜನವನ್ನು ತಿಳಿಯಲಾಗಿದೆ.

ಅಮೃತ ನ್ಯೋನಿ ಭಾರತೀಯ ಔಷಧಿ ವಲಯದಲ್ಲಿ ಒಂದಾಗಿದ್ದು ಈ ಹಣ್ಣಿನ ಸೇವನೆಯಿಂದ ಏಡ್ಸ್ ಕ್ಯಾನ್ಸರ್ ಮುಂತಾದ ಮಾರಕ ಕಾಯಿಲೆಗಳನ್ನು ನಿಯಂತ್ರಿಸುವ ಗುಣಗಳನ್ನೂ ಪಡೆಯಬಹುದಾಗಿದೆ.

ಅಷ್ಟೇ ಅಲ್ದೆ ದೈಹಿಕ ಮಾನಸಿಕ ಒತ್ತಡವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿರುವಂತ ಈ ಹಣ್ಣು ಅಲರ್ಜಿ, ಆಮವಾತ, ಆಸ್ತಮಾ, ಗಂಟುನೋವು, ಕೂದಲು ಉದುರುವಿಕೆ ಮುಂತಾದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದಾಗಿ ವೈದ್ಯ ಸಂಶೋಧನೆಯ ಮೂಲಕ ತಿಳಿಯಲಾಗಿದೆ.

ಈ ನ್ಯೋನಿ ಹಣ್ಣು ಮಾರುಕಟ್ಟೆಯಲ್ಲಿ ಸಿಗುತ್ತದೆ. ನಾನಾ ರೀತಿಯ ಜಂಕ್ ಫುಡ್ ಸೇವನೆ ಮಾಡಿ ಅನಾರೋಗ್ಯಕ್ಕೆ ಹಿಡಾಗುವ ಬದಲು ಉತ್ತಮ ಆರೋಗ್ಯದ ಬೆಳವಣಿಗೆಗೆ ಈ ಹಣ್ಣಿನ ಸೇವನೆ ಉತ್ತಮ.

ಈಗಾಗಲೇ ಹಣ್ಣಿನ ಔಷಧಿಯ ಗುಣಗಳ ಬಗ್ಗೆ 30 ಕ್ಕೂ ಅಧಿಕ ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆ ಮಾಡಲಾಗಿದೆ. ಹಾಗಾಗಿ ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ರೋಗಗಳು ಬೇಗನೆ ಅಂಟೋದಿಲ್ಲ ಒಂದುವೇಳೆ ಈ ಹಣ್ಣಿನ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನು ಪಡೆಯುವುದರಿಂದ ಕಾಯಿಲೆಗಳು ಬೇಗನೆ ನಿವಾರಣೆಯಾಗುತ್ತವೆ ಅನ್ನೋದನ್ನ ಹೇಳಲಾಗುತ್ತದೆ.

Comments are closed.