ಆರೋಗ್ಯ

ಹಲ್ಲಿನ ಕ್ಯಾವಿಟಿ ನಿವಾರಣೆ ಹೇಗೆ ಮಾಡಿಕೊಳ್ಳೋದು ಅನ್ನೋದನ್ನ ನೋಡೋನ

Pinterest LinkedIn Tumblr

ಕ್ಯಾವಿಟೀಸ್ ಇದು ದಂತ ಸಮಸ್ಯೆಯಲ್ಲಿ ಒಂದು ಸಾಮಾನ್ಯ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೂ ಈ ಸಮಸ್ಯೆಯನ್ನು ಎದುರಿಸುತ್ತಾ ಇದ್ದಾರೆ. ಆದರೆ ನಮ್ಮ ಹಿರಿಯರು ಅವರ 80 ನೆ ವಯಸ್ಸಿನಲ್ಲಿ ಕೂಡಾ ಹಲ್ಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಇಲ್ಲದೆ ಆರೋಗ್ಯವಂತರಾಗಿ ಇರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ 40 ವರ್ಷ ಆದರೆ ಸಾಕು ಎಲ್ಲರಿಗೂ ಈ ದಂತ ಸಮಸ್ಯೆ ಕಾಡಲು ಆರಂಭ ಆಗುತ್ತೆ. ಇದಕ್ಕೆ ಮುಖ್ಯ ಕಾರಣ ಕ್ಯಾವಿಟೀಸ್. ಅಂದರೆ ನಾವು ತಿಂದಂತಹ ಆಹಾರದ ತುಣುಕುಗಳು ಎಲ್ಲೋ ಒಂದು ಕಡೆ ಹಲ್ಲಲ್ಲಿ ಸಿಕ್ಕಿಕೊಂಡು ಬ್ಯಾಕ್ಟೀರಿಯಗಳಾಗಿ ದಂತಕ್ಷಯ ಉಂಟಾಗತ್ತೆ. ಹಲ್ಲು ಹುಳುಕು, ಹಲ್ಲು ನೋವು ಮುಂತಾದ ದಂತ ಸಮಸ್ಯೆಗಳಿಗೆ ಮನೆಮದ್ದು ಏನು ಅನ್ನೋದನ್ನ ನೋಡೋಣ

ಕ್ಯಾವಿಟಿ ಬರುವುದು ಹೇಗೆ ಬಲ್ಲಿರಾ?
ಸಾಮಾನ್ಯವಾಗಿ ನಾವು ಏನಾದರೂ ತಿಂದಾಗ ಹಲ್ಲುಗಳ ಮೇಲೆ ಪಾಚಿ ತರ ಉಂಟಾಗುತ್ತದೆ. ಆಗ ಹಲ್ಲುಗಳ ಮೇಲೆ ಇರುವ ಏನಾಮಿಲ್ ಕ್ಯಾವಿಟಿ ಆಗಿ ಪರಿವರ್ತನೆ ಆಗುತ್ತೆ. ಇದರಿಂದ ಹಲ್ಲುಗಳ ಮೇಲೆ ಮತ್ತಷ್ಟು ಕರೆ ಕಟ್ಟಿದ ಹಾಗೆ ಆಗುತ್ತೆ ನಾವು ಎಷ್ಟೇ ಬ್ರಶ್ ಮಾಡಿದರು ಕೂಡ ಸ್ವಚ್ಛ ಆಗಲ್ಲ. ಇದರಿಂದಾಗಿ ಹಲ್ಲುಗಳ ನೋವು , ಹುಳುಕು ಆಗುವುದು , ಮುಂತಾದ ಸಮಸ್ಯೆಗಳು ಬರುತ್ತವೆ. ಆದರೆ ನಾವು ಮನೆಯಲ್ಲಿರುವ ಪದಾರ್ಥಗಳನ್ನೇ ಬಳಸಿಕೊಂಡು ಸುಲಭವಾಗಿ ಕ್ಯಾವಿಟಿ ಕಡಿಮೆ ಮಾಡಿಕೊಳ್ಳಬಹುದು ಅದು ಹೇಗೆ ಎಂದು ನೋಡೋಣ.

ಕ್ಯಾವಿಟಿ ಆದಾಗ ಬಾಯಲ್ಲಿ ಉಂಟಾಗುವ ಮೊದಲ ಸಮಸ್ಯೆ ವಿಪರೀತ ಹಲ್ಲು ನೋವು. ಹಲ್ಲು ನೋವನ್ನ ಕಡಿಮೆ ಮಾಡಲು ಲವಂಗ ಸಹಾಯಕಾರಿ. ಮೂರರಿಂದ ನಾಲ್ಕು ಮೊಗ್ಗು ಇರುವ ಲವಂಗವನ್ನು ತೆಗೆದುಕೊಂಡು ಕಲ್ಲಿನಿಂದ ಕುಟ್ಟಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಇದನ್ನು ಯಾವಾಗ ಬೇಕಿದ್ದರೂ ಹಲ್ಲು ನೋವು ಬಂದಾಗ ಬಳಸಬಹುದು. ಒಂದು ಹತ್ತಿಯ ಸಹಾಯದಿಂದ ಹಲ್ಲು ನೋವು ಬಂದ ಜಾಗಕ್ಕೆ ಈ ಲವಂಗದ ಪುಡಿಯನ್ನು ಹಾಕಿ ನೋವು ಇರುವ ಹಲ್ಲಿನಲ್ಲಿ ಇಟ್ಟುಕೊಳ್ಳಬೇಕು. 5 ನಿಮಿಷ ಇದನ್ನು ಇಟ್ಟುಕೊಂಡು ನಂತರ ಬಾಯಿ ತೊಳೆಯಬಹುದು ಇದರಿಂದ ಬೇಗ ಹಲ್ಲುನೋವು ಕಡಿಮೆ ಆಗತ್ತೆ.

ಕ್ಯಾವಿಟಿ ನಿವಾರಣೆ ಮಾಡುವ ವಿಧಾನ:
ಒಂದು ಚಿಕ್ಕ ಬೌಲ್ ಗೆ ಒಂದು ಟೀ ಸ್ಪೂನ್ ಅಷ್ಟು ಸಾಸಿವೆ ಎಣ್ಣೆ ತೆಗೆದುಕೊಂಡು ( ಸಾಸಿವೆ ಎಣ್ಣೆ ಹಲ್ಲು ನೋವು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ) ಇದಕ್ಕೆ ಒಂದು ಟೀ ಸ್ಪೂನ್ ಆಲಂ ಪೌಡರ್ ಸೇರಿಸಿ ಹಾಗೂ ಚಿಟಿಕೆ ಅರಿಶಿನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.ಇದನ್ನ ಒಂದು ಹತ್ತಿ ಅಥವಾ ಬ್ರಶ್ ಸಹಾಯದಿಂದ ಕ್ಯಾವಿಟಿ, ಹಲ್ಲು ನೋವು ಇರುವ ಜಾಗಕ್ಕೆ ಹಚ್ಚಬೇಕು. ಈ ಎಲ್ಲಾ ಪದಾರ್ಥಗಳು ಸಹ ಹಲ್ಲು ನೋವು, ಹಲ್ಲಿನ ಮೇಲೆ ಕರೆ ಕಟ್ಟಿರುವುದು, ಕ್ಯಾವಿಟಿ ಈ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ತುಂಬಾ ಸಹಾಯಕಾರಿ ಆಗಿದೆ. ಇದನ್ನು ವಾರದಲ್ಲಿ ಎರಡು ಬಾರಿ ಆದರೂ ಮಾಡಿಕೊಳ್ಳಬೇಕು. ಹಲ್ಲಿಗೆ ಹಚ್ಚಿ ಅರ್ಧ ಮುಕ್ಕಾಲು ಗಂಟೆ ಬಿಟ್ಟು ಬಾಯಿ ತೊಳೆದುಕೊಳ್ಳಬೇಕು. ಇವು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ

Comments are closed.