ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಕೆಲವೊಮ್ಮೆ ಇಂತಹ ಸನ್ನಿವೇಶಗಳು ಹೇಳಿ ಕೇಳಿ ಬರೋದಿಲ್ಲ, ಅತ್ಮಹತ್ಯೆ ಪಯತ್ನವೋ ಅಥವಾ ಅನಿರೀಕ್ಷಿತವಾಗಿಯೋ ವಿಷ ಸೇವಿಸಿದಾಗ ಅದನ್ನು ಹೇಗೆ ನಿವಾರಿಸಬೇಕು ಅನ್ನೋದು ಆ ಸಂದರ್ಭದಲ್ಲಿ ಪಕ್ಕನ್ನೆ ನೆನಪಾಗೋದಿಲ್ಲ, ಅದುದರಿಂದ ಮನೆಯಲ್ಲೇ ಇರುವಂತ ಒಂದಿಷ್ಟು ಸಾಮಾಗ್ರಿ ಬಳಸಿ,ವಿಷ ಸೇವಿಸಿದ ವ್ಯಕ್ತಿಗೆ ಮೊದಲು ಪ್ರಥಮ ಚಿಕಿತ್ಸೆ ಮಾಡುವುದು ಉತ್ತಮ, ಹೇಗೆ ಅನ್ನೋದನ್ನ ಮುಂದೆ ನೋಡಿ ನಿಮಗೆ ಈ ಮಾಹಿತಿ ಉಪಯುಕ್ತ ಅನಿಸಿದರೆ ಇದರ ಉಪಯೋಗ ನಿಮಗೆ ಆಗಬಹುದು.
ಮೊದಲನೆಯದಾಗಿ ವಿಷ ಸೇವಿಸಿದ ವ್ಯಕ್ತಿಗೆ ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಬೆರಸಿ ಕುಡಿಯಲು ಕೊಡುವುದು. ಹೀಗೆ ಮಾಡುವುದರಿಂದ ವ್ಯಕ್ತಿ ವಾಂತಿ ಮಾಡಿಕೊಳ್ಳುತ್ತಾನೆ ಇದರಿಂದ ಹೊಟ್ಟೆಯಲ್ಲಿ ಇರುವಂತ ವಿಷ ವಾಂತಿಯ ಮೂಲಕ ಹೊರ ಬರುತ್ತದೆ. ಇನ್ನು ಬಟ್ಟೆ ಸೋಪಿನ ನೀರನ್ನು ಕೂಡ ವಿಷ ಸೇವಿಸಿದ ವ್ಯಕ್ತಿಗೆ ಕುಡಿಯಲು ಕೊಡಬಹುದಾಗಿದೆ. ವಾಂತಿ ಮಾಡದೇ ಇದ್ದಂತ ಸಂದರ್ಭದಲ್ಲಿ ಬೇಗನೆ ಹತ್ತಿರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದ್ಯೋಯಬೇಕಾಗುತ್ತದೆ.
ಎರಡನೇಯದು ನಾಯಿ ಕಚ್ಚಿದ ವಿಷ ನಿವಾರಣೆ ಮಾಡುವ ವಿಧಾನ: ಮೊದಲು ಯಾವ ನಾಯಿ ಕಚ್ಚಿದೆ ಎಂಬುದನ್ನು ತಿಳಿದುಕೊಳ್ಳಬೇಕು ಹುಚ್ಚು ನಾಯಿ ಕಚ್ಚಿದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ, ಅಂತಹ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಹೇಗೆ ಮಾಡಬೇಕು ಅನ್ನೋದನ್ನ ತಿಳಿದುಕೊಂಡರೆ ಬಹಳ ಒಳ್ಳೇದು.
ಚಿಕಿತ್ಸೆ ಮಾಡುವ ವಿಧಾನ:
1.ನಾಯಿ ಕಚ್ಚಿದ ರೋಗಿಯ ಗಾಯವನ್ನು ತಕ್ಷಣ ಸಾಬೂನಿನಿಂದ (ಲಭ್ಯವಿದ್ದರೆ ‘ಲೈಫ್ ಬಾಯ್ ನಂತಹ ‘ಕಾರ್ಬೋಲಿಕ್ ಆಮ್ಲವಿರುವ ಸಾಬೂನಿನಿಂದ) ನಿಧಾನವಾಗಿ ತೊಳೆಯಿರಿ. ನಂತರ ಗಾಯಕ್ಕೆ ಹರಿಯುವ ನೀರನ್ನು ಅಂದರೆ ನಲ್ಲಿ ನೀರನ್ನು ಕನಿಷ್ಟ ೧೦ ನಿಮಿಷಗಳ ಕಾಲ ಸತತವಾಗಿ ಬಿಟ್ಟು ಗಾಯವನ್ನು ತೊಳೆಯಿರಿ.
2.ನಾಯಿ ಕಚ್ಚಿದ ಮೇಲೆ ಆದಷ್ಟು ಬೇಗ ರೋಗಿಯ ಗಾಯವನ್ನು ತೊಳೆಯಬೇಕು. ಹೀಗೆ ಮಾಡುವುದರಿಂದ ನಾಯಿ ಕಚ್ಚಿದಾಗ ಗಾಯದಲ್ಲಿ ಹೋಗಿರುವ ರೋಗಾಣುಗಳು ಶರೀರದಿಂದ ಹೊರಗೆ ಹೋಗುತ್ತವೆ ಮತ್ತು ಅವುಗಳಿಗೆ ಶರೀರದಲ್ಲಿ ಹರಡಲು ಅವಕಾಶ ಸಿಗುವುದಿಲ್ಲ. ನಾಯಿ ಕಚ್ಚಿದ ಮೇಲೆ ಗಾಯವನ್ನು ತೊಳೆಯಲು ತಡವಾದರೂ ಗಾಯವನ್ನು ತೊಳೆಯಬೇಕು. ಇದರಿಂದ ಗಾಯದಲ್ಲಿ ಉಳಿದ ಅಲ್ಪಸ್ವಲ್ಪ ರೋಗಾಣುಗಳಾದರೂ ಶರೀರದಿಂದ ಹೊರಗೆ ಹೋಗುತ್ತವೆ.
3. ರೋಗಿಯ ಗಾಯವನ್ನು ತೊಳೆಯುವಾಗ ಗಾಯವನ್ನು ನಿಮ್ಮ ಕೈಯಿಂದ ಸ್ಪರ್ಶಿಸಬೇಡಿ. ಹಾಗೊಂದು ವೇಳೆ ಗಾಯವನ್ನು ಮುಟ್ಟಲೇ ಬೇಕಾಗಿದ್ದರೆ ಬಳಸಿ ಎಸೆಯುವ (ಡಿಸ್ಪೋಸೆಬಲ್) ಕೈಗವಸುಗಳನ್ನು ಬಳಸಿ. ರೋಗಿಯ ಗಾಯಕ್ಕೆ ಮಣ್ಣು, ಮೆಣಸು ಇತ್ಯಾದಿಗಳನ್ನು ಹಚ್ಚಲು ಹೋಗಬೇಡಿ. ಹೆಚ್ಚಿನ ಚಿಕಿತ್ಸೆ ನೀಡಲು ಕೂಡಲೇ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು.

Comments are closed.