ಆರೋಗ್ಯ

ಕೊರೋನಾ ಸೋಂಕಿಗೆ ಒಳಗಾದ ನಂತರ ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಕಾರಿ ಈ ಇಮ್ಯೂನಿಟಿ ಚಟ್ನಿ

Pinterest LinkedIn Tumblr

ಶೀತ ಮತ್ತು ಸಾಮಾನ್ಯ ಸೋಂಕುಗಳಿಂದ ನಮ್ಮನ್ನು ರಕ್ಷಿಸಲು ಮಾತ್ರವಲ್ಲದೆ ಅನೇಕ ರೀತಿಯ ಗಂಭೀರ ಖಾಯಿಲೆಗಳಿಂದ ರಕ್ಷಣೆ ನೀಡುವ ಸಾಮರ್ಥ್ಯವೂ ನಮ್ಮ ದೇಹಕ್ಕೆ ಅವಶ್ಯವಾಗಿದೆ. ಕೊರೋನಾ ವೈರಸ್ ಸೋಂಕನ್ನು ತಪ್ಪಿಸಲು ಮತ್ತು ಸೋಂಕಿಗೆ ಒಳಗಾದ ನಂತರ ಶೀಘ್ರವಾಗಿ ಚೇತರಿಸಿಕೊಳ್ಳಲು ಬಲವಾದ ಇಮ್ಯೂನಿಟಿ ಹೊಂದಿರುವುದು ಬಹಳ ಮುಖ್ಯ.ಇದಕ್ಕಾಗಿ ಅತ್ಯಂತ ಮುಖ್ಯವಾದ ಅಂಶವೆಂದರೆ ದೇಹದಲ್ಲಿ ಇಮ್ಯೂನಿಟಿಯನ್ನು ಹೆಚ್ಚಿಸಿಕೊಳ್ಳುವುದು. ಇಮ್ಯೂನಿಟಿ ಹೆಚ್ಚಿಸಲು ಎಲ್ಲಾ ಸಲಹೆಗಳನ್ನು ಪಾಲಿಸಬೇಕು.

ಇಮ್ಯೂನಿಟಿ ಹೆಚ್ಚಿಸಲು ಇಂದು ಶುಂಠಿ ಚಟ್ನಿ ತಯಾರಿಸುವ ವಿಧಾನವನ್ನು ನೋಡೋಣ..

ಬೇಕಾಗುವ ಪದಾರ್ಥಗಳು: –
ಸ್ವಲ್ಪ ಹುಣಸೆಹಣ್ಣು
1/4 ಕಪ್ ಬಿಸಿ ನೀರು
2 ಟೀಸ್ಪೂನ್ ಎಣ್ಣೆ
1½ ಟೀಸ್ಪೂನ್ ಕಡಲೆ ಬೇಳೆ
1 ಟೀಸ್ಪೂನ್ ಉದ್ದಿನ ಬೇಳೆ
1/4 ಸಾಸಿವೆ
1/4 ಟೀಸ್ಪೂನ್ ಮೆಂತ್ಯ
4-7 ಕಾಶ್ಮೀರಿ ಕೆಂಪು ಮೆಣಸಿನಕಾಯಿ
ಕರಿಬೇವಿನ ಎಲೆಗಳು ಸ್ವಲ್ಪ
1/4 ಕಪ್ ಶುಂಠಿ
2 ಟೀಸ್ಪೂನ್ ಬೆಲ್ಲ
ರುಚಿಗೆ ತಕ್ಕಷ್ಟು ಉಪ್ಪು

ಒಗ್ಗರಣೆಗೆ :-
1 ಟೀಸ್ಪೂನ್ ಎಣ್ಣೆ
ಸಾಸಿವೆ
ಕರಿಬೇವಿನ ಎಲೆಗಳು

ತಯಾರಿಸುವ ವಿಧಾನ: – ಮೊದಲನೆಯದಾಗಿ, ಹುಣಸೆಹಣ್ಣನ್ನು ಬಿಸಿ ನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿ, ರಸ ತೆಗೆದು ಬೇರ್ಪಡಿಸಿ.
ನಂತರ ಪ್ಯಾನ್ ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ.
1½ ಟೀಸ್ಪೂನ್ ಕಡಲೆ ಬೇಳೆ, 1 ಟೀಸ್ಪೂನ್ ಉದ್ದಿನ ಬೇಳೆ, ¼ ಟೀಸ್ಪೂನ್ ಸಾಸಿವೆ ಮತ್ತು ¼ ಟೀಸ್ಪೂನ್ ಮೆಂತ್ಯೆ ಸೇರಿಸಿ. ಕಡಿಮೆ ಉರಿಯಲ್ಲಿ ಒಂದು ನಿಮಿಷ ಹುರಿಯಿರಿ.

ನಂತರ 4-7 ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳು ಮತ್ತು ಸಿಪ್ಪೆ ತೆಗೆದ ¼ ಕಪ್ ಶುಂಠಿಯನ್ನು ಸೇರಿಸಿ. ಶುಂಠಿಯಿಂದ ಹಸಿ ವಾಸನೆ ಹೋಗುವವರೆಗೆ ಕಡಿಮೆ ಉರಿಯಲ್ಲಿ ಫ್ರೈ ಮಾಡುವುದನ್ನು ಮುಂದುವರಿಸಿ.

ನಂತರ ಮಿಶ್ರಣವನ್ನು ಬ್ಲೆಂಡರ್ ಗೆ ವರ್ಗಾಯಿಸಿ. ಬೆಲ್ಲ, ಉಪ್ಪು ಮತ್ತು ಹುಣಸೆರಸ ಸೇರಿಸಿ. ಅಗತ್ಯವಿದ್ದರೆ ಹೆಚ್ಚಿನ ನೀರನ್ನು ಸೇರಿಸಿ ನಯವಾದ ಪೇಸ್ಟ್ ಮಾಡಿ.

ಒಗ್ಗರಣೆಗೆ ಸಣ್ಣ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.ಸಾಸಿವೆ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ನಂತರ ಒಗ್ಗರಣೆಯನ್ನು ತಯಾರಾದ ಶುಂಠಿ ಚಟ್ನಿಯ ಮೇಲೆ ಹಾಕಿ.

Comments are closed.