ಆರೋಗ್ಯ

ಸಾಸಿವೆ ಎಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದೇ?

Pinterest LinkedIn Tumblr

ಎಣ್ಣೆ ಬಗ್ಗೆ ಕೆಲವರಿ ಹಲವು ರಿತಿಯ ಅಭಿಪ್ರಾಯಗಳಿರುತ್ತವೆ. ಸಾಸಿವೆ ಎಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ದರಿಂದ ಇದನ್ನು ಅಡುಗೆಗೆ ಬಳಸುತ್ತಾರೆ. ಹಾಗೇ ಇದು ಚರ್ಮದ ಆರೋಗ್ಯಕ್ಕೂ ಕೂಡ ಉತ್ತಮ. ಆದರೆ ಇದನ್ನು ಕೂದಲಿಗೆ ಹಚ್ಚಬಹುದೇ ಎಂಬ ಗೊಂದಲ ಹಲವರಲ್ಲಿದೆ.

ಸಾಸಿವೆ ಎಣ್ಣೆ ಕೂದಲಿಗೆ ಹಚ್ಚುವುದರಿಂದ ಹಲವು ಪ್ರಯೋಜನಗಳಿವೆ.

* ಸಾಸಿವೆ ಎಣ್ಣೆಯನ್ನು ಕೂದಲಿಗೆ ಬಳಸಿದರೆ ವಯಸ್ಸಾದರೂ ಕೂದಲು ಬೆಳ್ಳಗಾಗುವುದಿಲ್ಲ.

* ಸಾಸಿವೆ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಒಣ ಕೂದಲಿನ ಸಮಸ್ಯೆ ನಿವಾರಣೆಯಾಗಿ ಕೂದಲು ತೇವಾಂಶದಿಂದ ಕೂಡಿರುತ್ತದೆ. ಹಾಗೇ ಕೂದಲು ಸಿಕ್ಕಾಗುವುದು ಕಡಿಮೆಯಾಗುತ್ತದೆ.

* ಈ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.

* ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಗಳು, ಒಮೆಗಾ 3, ಕೊಬ್ಬಿನ ಆಮ್ಲಗಳು ಇರುವುದರಿಂದ ಕೂದಲು ಉದ್ದವಾಗಿ ಬೆಳೆಯಲು ಸಹಕಾರಿ.
* ಸಾಸಿವೆ ಎಣ್ಣೆಯನ್ನು ಕೂದಲಿಗೆ ಬಳಸುವುದರಿಂದ ಕೂದಲು ತುಂಡಾಗುವುದನ್ನು ತಡೆಯಬಹುದು. ಹಾಗೇ ಕೂದಲುದುರುವ ಸಮಸ್ಯೆ ದೂರವಾಗುತ್ತದೆ.

* ಒಂದು ಟೇಬಲ್ ಚಮಚ ತೆಂಗಿನ ಎಣ್ಣೆಗೆ ಒಂದು ಟೇಬಲ್ ಚಮಚ ಬಿಸಿ ಸಾಸಿವೆ ಎಣ್ಣೆಯನ್ನು ಬೆರೆಸಿ. ಈ ಮಿಶ್ರಣವನ್ನು ಕೂದಲ ಬುಡಕ್ಕೆ ಲೇಪಿಸಿ ತದನಂತರ ಇದನ್ನು 10 ನಿಮಿಷ ನೆನೆಯಲು ಬಿಡಿ, ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಕೂದಲು ಹೊಳಪಿನಿಂದ ಕೂಡಿರುತ್ತದೆ.

Comments are closed.