ಆರೋಗ್ಯ

ಕೆಮ್ಮು, ಉಸಿರಾಟದ ತೊಂದರೆ ಇರುವವರು ಇದರ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸಿದರೆ ಉತ್ತಮ

Pinterest LinkedIn Tumblr

ಸದಾ ಯೌವ್ವನವನ್ನು ಕಾಯ್ದಿರಿಸಿಕೊಂಡು, ಚಟುವಟಿಕೆಯಿಂದ ಕೂಡಿರಲು ಒಂದೆಲಗ ಬಹಳ ಸಹಾಯ ಮಾಡುತ್ತದೆ. ಇನ್ನು ಒಂದೆಲಗವು ಕುಷ್ಠರೋಗಕ್ಕೂ ಮದ್ದು ಎಂದು ಪರಿಗಣಿಸಲ್ಪಟ್ಟಿದೆ. ಬಾಯಿಹುಣ್ಣು, ಚರ್ಮದ ಗಾಯಗಳಿಗೆ ಒಂದೆಲಗ ರಾಮಬಾಣ. ಇದು ಚರ್ಮಗಳಲ್ಲಿ ಆರೋಗ್ಯಕರವಾದ ಲಿಪಿಡ್ ಗಳು ಮತ್ತು ಪ್ರೋಟೀನ್ ಗಳನ್ನು ಹೆಚ್ಚಿಸುತ್ತವೆ. ಮೆದುಳು ಮತ್ತು ನರಗಳ ವ್ಯವಸ್ಥೆಯನ್ನು ಸಮರ್ಥವಾಗಿಸುವ ಶಕ್ತಿ ಒಂದೆಲಗದಲ್ಲಿದೆ. ಏಕಾಗ್ರತೆಯನ್ನು ಹೆಚ್ಚಿಸಲು ಒಂದೆಲಗ ಅನಾದಿಕಾಲದಿಂದ ಬಳಸಲ್ಪಡುತ್ತಿದೆ. ಶರೀರಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒಂದೆಲಗ ಪೂರೈಸುತ್ತದೆ.

ಒಂದೇ ಎಲೆಯಿಂದ ಕಂಗೊಳಿಸುವ ಈ ಸಸ್ಯದ ಹೆಸರುಗಳು ಸಾಕಷ್ಟಿವೆ. ಇದನ್ನು ಬ್ರಾಹ್ಮೀ, ಸರಸ್ವತಿ, ಮಂಡೂಕಪರ್ಣಿ ಎಂದು ಕರೆಯುತ್ತಾರೆ. ತುಳುವಿನಲ್ಲಿ ತಿಮರೆ, ಕೊಂಕಣಿ, ಮರಾಠಿಗಳಲ್ಲಿ ಕರಾನ್ನೋ ಎಂದು ಕರೆಯುತ್ತಾರೆ. ಇದು ನೀರಿನ ಆಶ್ರಯದಲ್ಲಿ ಸಮೃದ್ಧವಾಗಿ ಬೆಳೆಯುತ್ತವೆ. ಕರಾವಳಿ ಪರಿಸರದಲ್ಲಿ ಜೌಗು ಪ್ರದೇಶದಲ್ಲಿ ಹರಡಿಕೊಂಡು ಬೆಳೆಯುತ್ತದೆ.

ಚೀನಾ ಹಾಗೂ ಆಫ್ರಿಕಾಗಳಲ್ಲಿಯೂ ಒಂದೆಲಗವನ್ನು ಪಾರಂಪರಿಕ ಔಷಧಿಯಾಗಿ ಬಳಸುತ್ತಾರೆ. ಇದರ ವೈಜ್ಞಾನಿಕ ಹೆಸರು ಸೆಂಟಿಲ್ಲಾ ಏಸಿಯಾಟಿಕಾ. ಕೆಮ್ಮು, ಉಸಿರಾಟದ ತೊಂದರೆ ಇರುವವರು ಇದರ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸುತ್ತಾರೆ.

ಮಕ್ಕಳಿಗೆ ಪ್ರತಿದಿನ ಬೆಳಗ್ಗೆ ಎರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ನೆನಪಿನ ಶಕ್ತಿ ವೃದ್ಧಿಸುತ್ತದೆ. ದಿನಕ್ಕೆ ನಾಲ್ಕೈದು ಎಲೆಗಳನ್ನು ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಸಹ ನಿವಾರಣೆಯಾಗುತ್ತದೆ.

ಮಾಹಿತಿ ಸಂಗ್ರಹ:

Comments are closed.