ಆರೋಗ್ಯ

ಸೋಂಪಿನಕಾಳಿನ ಕಪಾಯಕ್ಕೆ ಒಂದು ಚಮಚ ಜೇನುತುಪ್ಪ ಬೆರಸಿ ಕುಡಿಯುವುದರಿಂದ ಹೊಟ್ಟೆನೊವು ನಿವಾರಣೆ

Pinterest LinkedIn Tumblr

ಶೀತ ಹಾಗೂ ಕೆಮ್ಮಿಗೆ ಉತ್ತಮ ಪರಿಹಾರ ಎಂದು ಪರಿಗಣಿಸಲಾಗಿದೆ. ಅರಶಿನ ಹಾಲು ವೈರಸ್ ವಿರೋಧಿ ಮತ್ತು ಬ್ಯಾಕ್ಟೇರಿಯಾ ನಿರೋಧಕ ಗುಣಗಳನ್ನು ಹೊಂದಿರುವ ಕಾರಣ ಕೆಮ್ಮು, ನೆಗಡಿ, ನೋಯುತ್ತಿರುವ ಗಂಟಲು, ಕೆಮ್ಮು, ಶೀತಕ್ಕೆ ತ್ವರಿತ ಪರಿಹಾರ ನೀಡಬಲ್ಲದ್ದು. ಅವುಗಳಲ್ಲದೆ. ರಕ್ತ ಶುದ್ಧೀಕರಣ ಮಾಡಲು ಮತ್ತು ರಕ್ತ ಪರಿಚಲನೆ ಹೆಚ್ಚಿಸುತ್ತದೆ.

ಮೂಳೆಗಳ ಧೃಡತೆಗೆ ಅರಶಿನ ಹಾಲು ಸಹಾಯಕಾರಿಯಾಗುತ್ತದೆ. ಮೂಳೆಗಳನ್ನು ಬಲವಾಗಿ ಇರಿಸಿಕೊಳ್ಳಲು ಸಹಾಯ ಮಾಡುವ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಭಾರತ ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ನಿತ್ಯವು ಅರಶಿನದ ಹಾಲನ್ನೇ ಕುಡಿಯುತ್ತಾರೆ. .ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆ ನೋವು ಮೊದಲಾದ ಎಲ್ಲಾ ಸಮಸ್ಯೆಗಳಿಗೆ ಅರಿಶಿನದ ಬಿಸಿ ಹಾಲು ಸಹಾಯ ಮಾಡುತ್ತದೆ.

ಸ್ತನ ಕ್ಯಾನ್ಸರ್, ಚರ್ಮ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಹಲವು ಸಂಬಂಧಿತ ರೋಗಗಳನ್ನು ನಿವಾರಿಸಬಲ್ಲ ಶಕ್ತಿ ಅರಶಿನ ಹಾಲಿನಲ್ಲಿದೆ. ಒಟ್ಟಾರೆಯಾಗಿ ಅರಿಶಿನದ ಹಾಲಿನ ಮಹತ್ವ ವಿಸ್ಮಯಕಾರಿಯಾಗಿದೆ.

ಒಂದು ಲೋಟ ನೀರಿಗೆ ತುಸು ಅರಿಶಿನ ಪುಡಿಯನ್ನು ಹಾಕಿ ಕುಡಿಯುವುದರಿಂದ ಬಾಯಿಯ ವಾಸನೆ ದೂರಾಗುತ್ತದೆ.

ಕಿತ್ತಳೆ ಸಿಪ್ಪೆಯಿಂದ ಹಲ್ಲುಜ್ಜಿದರೆ ಹಲ್ಲಿನ ಹಳದಿಯನ್ನು ಇಲ್ಲವಾಗಿಸಬಹುದು.

ಒಂದು ಕಪ್ ಹಾಲಿಗೆ ಎರಡು ಚಮಚ ಜೇನುತುಪ್ಪು ಬೆರೆಸಿ, ದಿನಕ್ಕೆ ಎರಡು ಬಾರಿಯಂತೆ ನಿಯಮಿತವಾಗಿ ಸೇವಿಸುವುದರಿಂದ ಮೂಳೆ ಸದೃಢಗೊಳ್ಳುತ್ತದೆ.

ಕಹಿ ಬೇವಿನ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಗಳನ್ನು ನಿವಾರಿಸಬಹುದು.

ಮಲಗುವಾಗ ಒಂದು ಕಪ್ ಹಾಲಿಗೆ ಎರಡು ಚಮಚ ಜೇನುತುಪ್ಪ ಬೆರಸಿ, ಕುಡಿಯುವುದರಿಂದ ನಿದ್ರಾ ಹೀನತೆಯನ್ನು ದೂರವಿಡಬಹುದು.

ಸೋಂಪಿನಕಾಳಿನ ಕಪಾಯಕ್ಕೆ ಒಂದು ಚಮಚ ಜೇನುತುಪ್ಪ ಬೆರಸಿ ಕುಡಿಯುವುದರಿಂದ ಹೊಟ್ಟೆನೊವು ನಿವಾರಣೆಯಾಗುತ್ತದೆ.

Comments are closed.