ರಾತ್ರಿಯ ಸಮಯದಲ್ಲಿ ಆಗಾಗ್ಗೆ ಎದ್ದು ಹೋಗಬೇಕೆಂಬ ಕಾರಣದಿಂದ, ಎಷ್ಟು ಜನ ಮಲಗುವ ಮೊದಲು ತಾವು ನೀರನ್ನು ಕುಡಿಯಲು ಬಯಸುವದಿಲ್ಲವೆಂದು ಹೇಳುತ್ತಾರೆ?
ರಾತ್ರಿಯ ಸಮಯದಲ್ಲಿ ಜನರು ಯಾಕೆ ಅಷ್ಟೊಂದು ಮೂತ್ರವಿಸರ್ಜನೆಗೆ ಹೋಗುತ್ತಾರೆ?ಎಂಬ ಪ್ರಶ್ನೆಗೆ ಓರ್ವ ಹೃದಯದ ವೈದ್ಯರ (ಶ್ವಾಸಕೋಶ ತಜ್ಞವೈದ್ಯ) ಪ್ರತಿಕ್ರಿಯೆ.ಈ ರೀತಿ ಇರುತ್ತದೆ.
“ನೀವು ಬಹಳ ಸಮಯ ಲಂಬವಾಗಿ (ನೇರಾನೇರವಾಗಿ) ನಿಂತಾಗ, ಸಾಧಾರಣವಾಗಿ ನಿಮ್ಮ ಕಾಲುಗಳಲ್ಲಿ ಊತ ಅಂದರೆ ದಪ್ಪವಾಗುವಿಕೆ ಆಗುತ್ತದೆ, ಏಕೆಂದರೆ ಗುರುತ್ವಶಕ್ತಿ ಸಹಜವಾಗಿ ನೀರನ್ನು ನಿಮ್ಮ ದೇಹದ ಕೆಳಭಾಗಕ್ಕೆ ಕೊಂಡೊಯ್ಯುತ್ತದೆ.
ಈಗ ನೀವು ಅಂಗಾತವಾಗಿ ಮಲಗಿದ್ದಾದರೆ, ನಿಮ್ಮ ದೇಹದ ಕೆಳಭಾಗವು (ದೇಹ, ಕಾಲುಗಳು ಇತ್ಯಾದಿ) ನಿಮ್ಮ ಮೂತ್ರ ಪಿಂಡಗಳ ಸಮಪಾತಳಿಗೆ ಬರುವದರಿಂದ, ಮೂತ್ರಪಿಂಡಗಳು ನೀರನ್ನು ಹೊರಹಾಕುವ ಕಾರ್ಯವು ಅತ್ಯಂತ ಸುಲಭವಾಗುತ್ತದೆ.
ಇದು ಕೊನೆಯ ಹೇಳಿಕೆಯನ್ನು ಸಮರ್ಥಿಸುತ್ತದೆ.
ನಮಗೆ ನಮ್ಮ ದೇಹದಲ್ಲಿನ ಹಾನಿಕಾರಕ ವಿಷಪದಾರ್ಥಗಳನ್ನು ಹೊರಹಾಕಲು, ಕನಿಷ್ಟ ಪ್ರಮಾಣದ ನೀರು ಅವಶ್ಯಕ ಎಂಬ ಅರಿವು ಇದ್ದಿತ್ತಾದರೂ, ಈ ಮೇಲೆ ವಿವರಿಸಿದ ವಿಷಯ ನನಗೆ ಹೊಸದೇ ಆಗಿದ್ದಿತು.
ಹಾಗಿದ್ದರೆ, ನೀರನ್ನು ಕುಡಿಯಲು ಸೂಕ್ತವಾದ ಸಮಯ ಯಾವುದು? ಇದನ್ನು ಅರಿತುಕೊಳ್ಳುವುದು ಅತೀ ಮಹತ್ವದ್ದಾಗಿದೆ. ಇದಕ್ಕೆ ಹೃದಯ ತಜ್ಞರ ಸಲಹೆಗಳು.
ನಿಗದಿತ ಸಮಯಗಳಲ್ಲಿ ನೀರನ್ನು ಕುಡಿಯುವುದು ದೇಹದ ಮೇಲೆ ಉತ್ಕೃಷ್ಟ ಪರಿಣಾಮಗಳನ್ನು ನೀಡುತ್ತದೆ.
೧. ಮುಂಜಾನೆ ಎದ್ದಕೂಡಲೇ ಕುಡಿಯುವ ಎರಡು ಲೋಟ ನೀರು, ದೇಹದ ಒಳ-ಅಂಗಾಂಗಗಳ ಕ್ರಿಯಾಶಕ್ತಿಯ ಹೆಚ್ಚಳಕ್ಕೆ ಸಹಾಯಕಾರಿ.
೨. ಊಟದ 30 ನಿಮಿಷಗಳ ಮೊದಲು ಕುಡಿಯುವ ಒಂದು ಲೋಟ ನೀರು ಜೀರ್ಣಕ್ರಿಯೆಗೆ ಸಹಾಯಕಾರಿ.
೩. ಸ್ನಾನ ಮಾಡುವ ಮೊದಲು, ಒಂದು ಲೋಟ ನೀರು ಸೇವನೆ ಏರು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕಾರಿ. (ಈ ಸಂಗತಿ ಯಾರಿಗೆ ತಿಳಿದಿತ್ತು???)
೪. ಮಲಗುವ ಮುನ್ನ ಒಂದು ಲೋಟ ನೀರಿನ ಸೇವನೆ ಹೃದಯ ಸ್ಥಂಭನದ ಅಪಾಯವನ್ನು ನಿವಾರಿಸಬಹುದು. (ಇದನ್ನು ಅರಿತಿರುವುದು ಒಳ್ಳೆಯದು!)
೫. ಇನ್ನೂ ಹೆಚ್ಚಿನದಾಗಿ, ರಾತ್ರಿ ಶಯನಸಮಯದ ಮೊದಲು, ಸೇವಿಸುವ ಒಂದು ಲೋಟ ನೀರು, ರಾತ್ರಿ ಸಮಯದಲ್ಲಿ ಆಗುವ ಕಾಲಿನ ಸ್ನಾಯುಸೆಳೆತಗಳನ್ನು ನಿವಾರಿಸಲು ಅನುಕೂಲ ಮಾಡಿಕೊಡುತ್ತದೆ.
೬. ಕಾಲಿನ ಸ್ನಾಯುಗಳು ಬೆಳಿಗ್ಗೆ ಏಳುವಾಗ ಆಕುಂಚನಗೊಂಡಿರುತ್ತವೆ ಹಾಗೂ ಸೆಳೆತದಿಂದ ಮುಕ್ತಗೊಳ್ಳಲು ನೀರಿನ ತೇವಾಂಶವನ್ನು ಬಯಸುತ್ತಿರುತ್ತದೆ.

Comments are closed.