ಆರೋಗ್ಯ

ಮೂಳೆಗೆ ಉತ್ತಮ ಶಕ್ತಿ ಹಾಗೂ ಬೆನ್ನಿನ ಭಾಗದ ನಮ್ಯತೆ ಕಾಡುವ ಯೋಗ್ಯ ಆಸನ

Pinterest LinkedIn Tumblr

ಮರ್ಜರಿ ಆಸನ ಎಂಬುದು ಬೆನ್ನು ಮೂಳೆಗೆ ಉತ್ತಮ ಶಕ್ತಿಯನ್ನು ಹಾಗೂ ಬೆನ್ನಿನ ಭಾಗದ ನಮ್ಯತೆಯನ್ನು ಹೆಚ್ಚಿಸುವ ಯೋಗಾಸನ ಭಂಗಿಯಾಗಿದೆ. ಬನ್ನಿ ಇದನ್ನು ಮಾಡುವ ವಿಧಾನ ಹೇಗೆ ಎಂದು ತಿಳಿದುಕೊಳ್ಳೋಣ.

ಆಸನವನ್ನು ಮಾಡಲು ಹಂತ ಹಂತವಾದ ಸೂಚನೆಗಳು:
ನೆಲದ ಮೇಲೆ ಮಂಡಿ ಮತ್ತು ಹಸ್ತಗಳನ್ನು ಬಳಸಿಕೊಂಡು ನಿಂತ ಬೆಕ್ಕಿನಂತಹ ಸ್ಥಿತಿಗೆ ಬನ್ನಿ. ನಿಮ್ಮ ಬೆನ್ನು ಮೂಳೆಯು ನೆಲಕ್ಕೆ ಸಮಾನಾಂತರವಾಗಿ ಇರಬೇಕು.ನಿಮ್ಮ ಗಮನ ಅಥವಾ ಮುಖವನ್ನು ನೇರವಾಗಿಟ್ಟುಕೊಳ್ಳಿ.ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ನಿಮ್ಮ ತಲೆಯನ್ನು ಮೇಲಕ್ಕೆ ಎತ್ತಿ (ಆಕಾಶವನ್ನು ನೋಡಿ), ಭುಜಗಳನ್ನು ಅಗಲ ಮಾಡಿ ಮತ್ತು ನಿಮ್ಮ ಬೆನ್ನುಮೂಳೆ ಹಾಗು ಕೆಳಹೊಟ್ಟೆಯನ್ನು ನೆಲದ ಕಡೆಗೆ ಒತ್ತಿ.ನೀವು ಉಸಿರು ಉಸಿರನ್ನು ಬಿಡುವಾಗ ತಲೆಯನ್ನು ಕೆಳಕ್ಕೆ ಬಾಗಿಸಿ. ಈಗ ನಿಮ್ಮ ಕೆಳಹೊಟ್ಟೆಯನ್ನು ಆಕಾಶದ ಕಡೆಗೆ ಒತ್ತಿ (ದೇಹ ಈಗ ಬಿಲ್ಲಿನಂತೆ ಕಾಣುತ್ತದೆ).
ನಿಮ್ಮ ಗಲ್ಲದ ಭಾಗವನ್ನು ಎದೆಗೆ ಸ್ಪರ್ಶಿಸದಂತೆ ನೋಡಿಕೊಳ್ಳಿ.ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಅಭ್ಯಾಸವನ್ನು ನೀವು ಐದು ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ಮಾಡಬಹುದು.

ಒಂದು ವಿಚಾರ ನೆನಪಿಡಿ, ಈ ಆಸನವನ್ನು ಮಾಡುವಾಗ ಯಾವುದೇ ಕಾರಣಕ್ಕೂ ಕೈಗಳನ್ನು ಮತ್ತು ಕಾಲುಗಳನ್ನು ಸರಿಸಬೇಡಿ.

ದೈಹಿಕ ಪ್ರಯೋಜನಗಳು:
* ಬೆನ್ನು ಮೂಳೆಯ ನಮ್ಯತೆಯನ್ನು ಹೆಚ್ಚಿಸಲು ಈ ಆಸನವು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.
* ಕೆಳ ಮತ್ತು ಮೇಲ್ಭಾಗದ ಬೆನ್ನು ನೋವನ್ನು ಇದು ಕಡಿಮೆ ಮಾಡುತ್ತದೆ.
* ಕೆಳ ಹೊಟ್ಟೆಯ ಭಾಗ, ಕೆಳ ಹೊಟ್ಟೆಯ ಅಂಗಗಳ ಸ್ನಾಯುಗಳನ್ನು ಇದು ಸ್ನಾಯುಗಳ ಸಾಮರ್ಥ್ಯ ಅಥವಾ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ಜೀರ್ಣಕ್ರಿಯೆಗೆ ಸಹಕರಿಸುತ್ತದೆ.
* ಇದು ನಿಮ್ಮ ಹಸ್ತ, ಮಣಿಕಟ್ಟು, ಕೈಗಳು ಮತ್ತು ಭುಜಗಳನ್ನು ಬಲಗೊಳಿಸುತ್ತದೆ.
* ಮನಸ್ಸಿಗೆ ದೊರೆಯುವ ಪ್ರಯೋಜನಗಳು:
* ಇದು ಆತಂಕವನ್ನು ಕಡಿಮೆ ಮಾಡುವ ಮೂಲಕ ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ.
* ಭಾವನಾತ್ಮಕ ಮಟ್ಟದಲ್ಲಿ ಉಂಟಾಗುವ ಪ್ರಯೋಜನಗಳು:
* ಇದು ಭಾವನೆಗಳನ್ನು ಸಮತೋಲನದಲ್ಲಿರಿಸುತ್ತದೆ.

ಯಾರು ಈ ಆಸನವನ್ನು ಮಾಡಬಾರದು:
* ತಲೆ ಅಥವಾ ಕುತ್ತಿಗೆ ಅಥವಾ ಮಂಡಿಯ ಗಾಯಗಳನ್ನು ಹೊಂದಿರುವವರು ಈ ಆಸನವನ್ನು ಮಾಡಬಾರದು.

Comments are closed.