ಆರೋಗ್ಯ

ಕುರದಿಂದ ಮುಕ್ತಿ ನೀಡಲು ಹಳ್ಳಿ ಮನೆ ಮದ್ದಿನ ಸಂಪೂರ್ಣ ಮಾಹಿತಿ!

Pinterest LinkedIn Tumblr

ನಮ್ಮೆಲ್ಲರ ಸುತ್ತ ಮುತ್ತ ಅನೇಕರು ಹಳ್ಳಿ ವೈದ್ಯರಿದ್ದಾರೆ . ಅನೇಕ ರೋಗಗಳನ್ನು ಯಾರಿಗೂ ಹೋಗಲಾಡಿಸಲ ಸಾಧ್ಯವಾದರೂ ನಮ್ಮ ಹಳ್ಳಿ ವೈದ್ಯರ ಬಳಿ ಈ ರೋಗಗಳು ಕೇವಲ ಗುಳ್ಳೆಯಷ್ಟೇ. ಇಂಥಹ ಅನೇಕ ವೈದ್ಯರ ಮನೆ ಮದ್ದಿನ ಸಂಪೂರ್ಣ ಮಾಹಿತಿ ನಿಮಗೆ ಒದಗಿಸುವದು ನಮ್ಮ ಈ ಲೇಖನದ ಉದ್ದೇಶ ಇದನ್ನು ಓದಿ ಇತರಿಗೆ ಇದನ್ನು ಶೇರ್ ಮಾಡಿ. ಯಾಕೆಂದರೆ ಅವರಿಗೂ ಇದರ ಉಪಯೋಗ ತಿಳಿದುಕೊಳ್ಳಲ್ಲಿ….

ಕುರದಿಂದ ನೋವನ್ನು ಅನುಭವಿಸುವ ಕೆಟ್ಟ ನೋವು ಮತ್ತೊಂದಿಲ್ಲ ..

ಕುರ ಸರಿಯಾಗಿ ಗಳಿತು ಒಡೆದರೆ ಮತ್ತೆ ಬರುವುದಿಲ್ಲವಂತೆ . ಹಾಗಂತ ಒಮ್ಮೆ ಏನಾದರೂ ಸರಿಯಾಗಿ ಗಳಿಯದೆ ಒಡೆದರೆ ಮತ್ತೆ ಬರುವ ಸಂಭವವಿದೆ . ಪ್ರಾಕೃತಿಕವಾಗಿ ಕುರ ಗಳಿಯಲು ಅನೇಕ ದಿನ ಬೇಕು . ಅಲ್ಲಿಯವರೆಗಿನ ನೋವಿನ ಬೇನೆ ಬಹಳ ಕಷ್ಟ . ಕುರ ಗಳಿತು ಒಡೆದ ದಿನ ಮತ್ತೋಂದು ಜನ್ಮ ಪಡೆದ ಅನುಭವ !.ಹಾಗಿದ್ದರೆ ನಾವು ಈಗ ಅಷ್ಟು ದಿನಗಳ ವರೆಗೆ ಕಾಯುವದು ಬೇಕಿಲ್ಲ .

ಕುರಕ್ಕೆ(ಉಷ್ಣ ಗುಳ್ಳೆ) ಬೇಕಾದ ಸುಲಭ ಸರಳ ಹಳ್ಳಿಮನೆ ಮದ್ದು:
* ಉದ್ದಿನ ಬೆಲೆಯನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ನುನ್ನಗೆ ಮಾಡಿ ಕುರದ ಬಾಯನ್ನು ಬಿಟ್ಟು ಸುತ್ತ ಹಚ್ಚಿ ಬಿಡಿ. ಇದನ್ನು ಬೆಳಗ್ಗೆ ಒಮ್ಮೆ ರಾತ್ರೆ ಒಮ್ಮೆ ಮಾಡಿ ನೋಡಿ . ಮರುದಿನ ನಿಮ್ಮ ಕುರ ಪ್ರಾಕ್ರುಥಿಕವಾಗಿಯೇ ಬೆಳೆದು ಒಡೆದುಬಿಡುತ್ತದೆ.

ನಿಮಗೆ ನಿಮ್ಮ ಕುರದ ಬೇನೆ ಒಂದು ಅಥವಾ ಎರಡು ದಿನದಲ್ಲಿ ಅಗೋಚರ
.
*ಟೊಮ್ಯಾಟೋ ಹಣ್ಣಿನ ರಸಕ್ಕೆ ಚಿಟಿಕೆ ಉಪ್ಪು ಮತ್ತು ಮೆಣಸಿನ ಕಾಳನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಧುಮೇಹ ನಿಯಂತ್ರನಕೆ ಬರುತ್ತದೆ.

*ಬೇವಿನ ಎಲೆ ಮತ್ತು ಅರಿಶಿನ ಪುಡಿಯ ಪೇಸ್ಟ್ ತಯಾರಿಸಿ ಬಾಧಿತ ಭಾಗಕ್ಕೆ ಲೇಪಿಸುವದರಿಂದ ಪರಿಣಾಮಕಾರಿ ಫಲಿತಾಂಶ ದೊರೆಯುವದು.

*ಉದ್ದಿನ ಬೆಲೆಯನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ನಿನ್ನಗೆ ಮಾಡಿ ಕುರದ ಬಾಯನ್ನು ಬಿಟ್ಟು ಸುತ್ತ ಹಚ್ಚಿ ಬಿಡಿ. ಇದನ್ನು ಬೆಳಗ್ಗೆ ಒಮ್ಮೆ ರಾತ್ರೆ ಒಮ್ಮೆ ಮಾಡಿ ನೋಡಿ . ಮರುದಿನ ನಿಮ್ಮ ಕುರ ಬೆಳೆದು ಒಡೆದುಬಿಡುತ್ತದೆ. ನಿಮಗೆ ನಿಮ್ಮ ಕುರದ ಬೇನೆ ಒಂದು ಅಥವಾ ಎರಡು ದಿನದಲ್ಲಿ ಅಗೋಚರ
.
*ನೀರನ್ನು ಒಲೆಯಮೇಲಿಟ್ಟು ಅದು ಕುದಿಯುವಾಗ ಅದಕ್ಕೆರಾಗಿಹಿಟ್ಟು / ಮೆಂತೆಯ ಹಿಟ್ಟು ಮತ್ತು ಅರಿಶಿನ ಸೇರಿಸಿ ತಿರುವಿ ಅದು ಗಟ್ಟಿಯಾದ ಕೂಡಲೇ ಅದನ್ನು ಬಟ್ಟೆಯ ಮೇಲೆ ಸವರಿ ಸಹನೆಯಾಗುವಷ್ಟು ಬಿಸಿಯಾಗಿರುವಾಗ ಕುರದ ಮೇಲೆ ಲೇಪಿಸಬೇಕು
.
*ದಾಸವಾಳದ ಎಲೆಗಳನ್ನು ಅಕ್ಕಿಯೊಂದಿಗೆ ಅರೆದು ದೋಸೆ ಮಾಡಿ ತಿನ್ನಬೇಕು

* 3 ದಿವಸ ದಿನಾ ಬೆಳಗ್ಗೆ ಖಾಲಿ ಹೊಟ್ಟೆಗೆ 1 ಸ್ಪೂನ್ ತುಪ್ಪ1 ಸ್ಪೂನ್ ಸಕ್ಕರೆ ಬೆರೆಸಿ ತಿಂದರು ಕಡಿಮೆ ಆಗುತ್ತೆ.

* ಬಾಳೆ ದಿಂಡಿನ ಪಲ್ಯ ಮಾಡಿ ತಿನ್ನಬೇಕು.

* ಕುರಕ್ಕೆ ಬೆಣ್ಣೆ ಹಚ್ಚಿ ಬಿಸಿ ನೀರಲ್ಲಿ ಬಟ್ಟೆ ಅಡ್ಡಿ ಕುರಕ್ಕೆ ಶಾಖ ಕೊಡುವುದರಿಂದ ಬೇಗ ಹಣ್ಣಾಗಿ ಒಡೆಯುತ್ತೆ
.
*ಕುರಕ್ಕೆ ಪ್ಯೂರ್ ಕುಂಕುಮವನ್ನು ಬೆಣ್ಣೆಯ ಜೊತೆಯಲ್ಲಿ ಮಿಕ್ಸ್ ಮಾಡಿ ಹಚ್ಚಿದರೆ ಕುರು ಒಡೆದು ಕಡಿಮೆಯಾಗುವದು.

*ತೊಂಡೆ ಎಳೆಯನ್ನು ಅಥವಾ ವೀಳ್ಯದ ಎಳೆಯನ್ನು ಸ್ವಲ್ಪ ಬಿಸಿ ಮಾಡಿ ಕಟ್ಟಿದರೆ ಕಡಿಮೆಯಾಗಿತ್ತದೆ

*ಬೂರಲ ಮರದ ಚಕ್ಕೆಯನ್ನು ನೀರಲ್ಲಿ ತೇಯ್ದು ಹಚ್ಚಿದರೂ ಕಡಿಮೆಯಾಗುವದು.

*ಶಂಖವನ್ನು ಲಿಂಬೆರಸದಲ್ಲಿ ತೇದು ಹಚ್ಚಿದರೆ ಕುರ ಒಡೆದುಮಾಯುತ್ತದೆ
.
*ಆಗತಾನೇ ಏಳುತ್ತಿರುವ ಕುರಕ್ಕೆ ಶುದ್ಧ ಜೇನುತುಪ್ಪವನ್ನುಹತ್ತಿಯಲ್ಲಿ ಅದ್ದಿ ಕುರದ ಮೇಲಿರಿಸುವುದು. ಇದು ಎಲ್ಲ ಬಾವುಗಳ ಮೇಲೂ ಉಪಯೋಗವಾಗುತ್ತದೆ.

=====

Comments are closed.