ಆರೋಗ್ಯ

ಲಿವರ್ ಕ್ಯಾನ್ಸರ್‌‌ನಿಂದ ಬಜಾವಾಗಲು ಪ್ರತಿದಿನ ಕನಿಷ್ಟ ಮೂರು ಲೋಟ ಕಾಫಿ ಸೇವಿಸಿದರೆ ಉತ್ತಮ

Pinterest LinkedIn Tumblr

ಇಲ್ಲಿ ಕೇಳಿ… ಕಾಫಿ ಕುಡಿದು ಲಿವರ್ ಕ್ಯಾನ್ಸರ್ ತಡೆಯಿರಿ! ಹೌದು ಇತ್ತೀಚಿನ ಸಂಶೋಧನೆಯೊಂದು ಈ ಮಾತು ಹೇಳಿದೆ. ಪ್ರತಿದಿನ ಕನಿಷ್ಟ ಮೂರು ಲೋಟ ಕಾಫಿ ಕುಡಿದರೆ ಶೇ.50ರಷ್ಟು ಲಿವರ್ ಕ್ಯಾನ್ಸರ್‍ನ ತೊಂದರೆಯಿಂದ ಬಚಾವಾಗಬಹುದಂತೆ. ಇಷ್ಟೇ ಅಲ್ಲ ಹೆಪ್ಯಾಟೊಸೆಲ್ಲೂಲರ್ ಕ್ಯಾರ್ಸಿಮೋನ(ಎಚ್‍ಸಿಸಿ) ಕಾಯಿಲೆಯನ್ನು ಕೂಡ ಶೇ.40ರಷ್ಟು ನಿಯಂತ್ರಿಸುತ್ತದೆಯಂತೆ. ಈ ಬಗ್ಗೆ ಕ್ಲಿನಿಕಲ್ ಗ್ಯಾಸ್ಟ್ರೋ ಎಂಟಾಲಜಿ ಅಂಡ್ ಹೆಪ್ಸಾಟೋಲಜಿ ಎಂಬ ಆರೋಗ್ಯಕ್ಕೆ ಸಂಬಂಧಿಸಿದ ಅಮೆರಿಕದ ನಿಯತಕಾಲಿಕವೊಂದು ಲೇಖನ ಪ್ರಕಟಿಸಿದೆ. ಲಿವರ್ ಕ್ಯಾನ್ಸರ್ ವಿಶ್ವದ 6ನೇ ಅತಿ ಸಾಮಾನ್ಯ ಕಾಯಿಲೆ ಮತ್ತು ಕ್ಯಾನ್ಸರ್ ಸಾವಿನಲ್ಲಿ ಮೂರನೆಯದು. ಲಿವರ್ ಕ್ಯಾನ್ಸರ್‍ನಲ್ಲಿ ಮುಖ್ಯವಾದುದೆಂದರೆ ಈ ಹೆಚ್‍ಸಿಸಿ ಮಾದರಿ ಕಾಯಿಲೆ.

ಕಾಫಿ ಆರೋಗ್ಯಕ್ಕೆ ಒಳ್ಳೆಯದು, ವಿಶೇಷವಾಗಿ ಲಿವರ್ ಕ್ಯಾನ್ಸರ್‍ಗೆ ಉತ್ತಮ ಪರಿಹಾರ ಎನ್ನುತ್ತಾರೆ ಕಾರ್ಲೊಲವೆಚಿಯಾ. ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವ ಔಷಧೀಯ ಗುಣ ಕಾಫಿಯಲ್ಲಿದೆ. ಹಾಗಾಗಿ ಕಾಫಿ ಹಲವು ಕಾಯಿಲೆಗಳಿಗೆ ದಿವ್ಯೌಷಧ ಎಂದು ಇಟಲಿಯ ಯೂನಿವರ್ಸಿಟಿ ಡೆಗ್ಲಿ ಸ್ಟಡಿ ಮಿಲಾನ್‍ನ ಕಾರ್ಲೊಲ ವೆಚಿಯ ಸ್ಪಷ್ಟಪಡಿಸಿದ್ದಾರೆ. 1996ರಿಂದ 2012ರವರೆಗಿನ ಸುದೀರ್ಘಾವಧಿಯಲ್ಲಿ ಒಟ್ಟಾರೆ 3,153 ಪ್ರಕರಣ ಸಮೀಕ್ಷೆ ನಡೆಸಿ ವರದಿ ತಯಾರಿಸಲಾಗಿದೆಯಂತೆ.

Comments are closed.