ಮೂಲಂಗಿಯಲ್ಲಿ ಯಾವ ಯಾವ ಪೋಷಕಾಂಶಗಳು ಇವೆ ಎಂಬುದರ ಬಗ್ಗೆ ತಿಳಿದಿತ್ತು ಅಲ್ವ ಈಗ ಮೂಲಂಗಿಯಲ್ಲಿ ಯಾವ ಯಾವ ಔಷಧೀಯ ಗುಣಗಳು ಇವೆ ಎಂಬುದ ಬಗ್ಗೆ ಮಾಹಿತಿ ನಿಮಗಾಗಿ.
ಮಲಬದ್ಧತೆ: ಸೇವಿಸಿದ ಆಹಾರ ಪದಾರ್ಥಗಳು ಸುಲಭವಾಗಿ ಜೀರ್ಣವಾಗುವುದರಿಂದ ಮಲಬದ್ಧತೆ ಉಂಟಾಗುವುದಿಲ್ಲ.
ಬಹೂಪಯೋಗಿ ಮೂಲಂಗಿ: ಹಸಿ ಮೂಲಂಗಿಯ ಸೇವನೆಯಿಂದ ಮೂಲವ್ಯಾಧಿಯ ತೊಂದರೆ ಹತೋಟಿಗೆ ಬರುವುದು. ಕಣ್ಣಿನ ನರಗಳಿಗೆ ಶಕ್ತಿ ಬರುವುದು. ವೀರ್ಯವೃದ್ಧಿಯಾಗುವುದು.
ಕಣ್ಣಿನ ನರಗಳಿಗೆ ಶಕ್ತಿ: ಹಸಿ ಮೂಲಂಗಿಯ ಸೇವನೆಯಿಂದ ಕಣ್ಣಿನ ನರಗಳಿಗೆ ಶಕ್ತಿ ಬರುವುದು.
ಶರೀರದ ಉಷ್ಣತೆ: ಕೆಂಪು ಮೂಲಂಗಿಯನ್ನು ಚೆನ್ನಾಗಿ ಹುರಿದು ಹೆಸರುಬೇಳೆ ಕೋಸಂಬರಿಯ ಜೊತೆ ಕಲೆಸಿ ಸೇವಿಸಿದರೆ ಶರೀರದ ಉಷ್ಣತೆ ಕಡಿಮೆಯಾಗುವುದು.
ಬಿಕ್ಕಳಿಕೆ: ಕೆಂಪು ಮೂಲಂಗಿಯ ಬೇರನ್ನು ಎದೆ ಹಾಲಿನಲ್ಲಿ ತೇಯ್ದು ಮೂಗಿನ ಹೊಳ್ಳೆಯೊಳಗೆ ನಶ್ಯದಂತೆ ಎಳೆದುಕೊಂಡರೆ ಬಿಕ್ಕಳಿಕೆಯ ಸಮಸ್ಯೆ ದೂರವಾಗುವುದು.
ಚೇಳು ಕುಟುಕಿದಾಗ: ಚೇಳು ಕುಟುಕಿದಾಗ ಚೇಳು ಕುಟುಕಿದಾಗ ಮೂಲಂಗಿ ಹಾಗೂ ಸ್ವಲ್ಪ ಅರಶಿನವನ್ನು ಬೆರೆಸಿ ಜಜ್ಜಿ ಕುಟುಕಿದ ಭಾಗಕ್ಕೆ ಹಚ್ಚಿದರೆ ಉರಿ ಶಮನವಾಗುವುದು.
ಹೊಟ್ಟೆಯಲ್ಲಿ ಉರಿ: ಕೆಂಪು ಮೂಲಂಗಿಯ ರಸವನ್ನು ಬಿಳಿ ಮೂಲಂಗಿಯ ರಸದೊಂದಿಗೆ ಬೆರಸಿ ಕುಡಿಯುವುದರಿಂದ ಹೊಟ್ಟೆಯ ಉರಿ ಶಾಂತವಾಗುತ್ತದೆ
ಮುಟ್ಟಿನ ತೊಂದರೆ: ಮುಟ್ಟು ಆಗದೆ ಬಹಳ ದಿನ ನಿಂತಿದ್ದರೆ ಮೂಲಂಗಿ ಬೀಜ, ಮೆಂತ್ಯ ಈ ಮೂರನ್ನು ಸಮ ಪ್ರಮಾಣದಲ್ಲಿ ಮಿಶ್ರಮಾಡಿ ರುಚಿ ಚೂರ್ಣ ತಯಾರಿಸಿಕೊಳ್ಳಬೇಕು. ಈ ಚೂರ್ಣವನ್ನು ಪ್ರತಿ ದಿನ ಚಮಚದಷ್ಟು ಸೇವಿಸುತ್ತಿದ್ದಂತೆ ರಜಸ್ಸು ಪ್ರಾರಂಭವಾಗುತ್ತದೆ.
ನೆಗಡಿ: ಹಸಿ ಮೂಲಂಗಿಯ ಕೋಸಂಬರಿ ಮಾಡಿ ಪದೇ ಪದೇ ತಿನ್ನುತ್ತಿದ್ದರೆ ನೆಗಡಿ ದೂರವಾಗುವುದು.
ಕೆಂಪು ಮೂಲಂಗಿ: ಕೆಂಪು ಮೂಲಂಗಿಯ ಸೇವನೆಯಿಂದ ಲೈಂಗಿಕ ಸಾಮರ್ಥ್ಯ ಹೆಚ್ಚಾಗುವುದು. ಊಟದ ನಂತರ ಕೆಂಪು ಮೂಲಂಗಿಯನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲುಗಳು ಸ್ವಚ್ಚವಾಗುತ್ತದೆ ಹಾಗೂ ಬಾಯಿಯ ದುರ್ಗಂಧ ದೂರವಾಗುವುದು. ಜೀರ್ಣಶಕ್ತಿಯು ವೃದ್ಧಿಸುತ್ತದೆ.
ಮೂಲಂಗಿಯಿಂದ ಆಗುವ ಉಪಯೋಗಗಳು ಅವುಗಳಲ್ಲಿರುವ ಪೋಷಕಾಂಶಗಳು ಬಗ್ಗೆ ತಿಳಿದರೆ ಮೂಲಂಗಿಯನ್ನು ಉಪಯೋಗಿಸದೆ ನೀವು ಬಿಡಲ್ಲ.!
100 ಗ್ರಾಂ ಮೂಲಂಗಿಯಲ್ಲಿ ದೊರೆಯುವ ಪೋಷಕಾಂಶಗಳು ಹೀಗಿವೆ
ಸಸಾರಜನಕ 0,7 ಗ್ರಾಂ
ಶರ್ಕರ ಪಿಷ್ಠ5 ಗ್ರಾಂ
ಮೇದಸ್ಸು: 0.1 ಗ್ರಾಂ
ನಾರಿನಾಂಶ8 ಗ್ರಾಂ
ಖನಿಜಾಂಶ6 ಗ್ರಾಂ
ರಕ್ಷಕ ಹಣ್ಣು ಮತ್ತು ತರಕಾರಿಗಳು
ರಂಜಕ 22 ಗ್ರಾಂ
ಕಬ್ಬಿಣ4 ಮಿಲಿಗ್ರಾಂ
ಸುಣ್ಣ 50 ಮಿಲಿಗ್ರಾಂ
ಪೊಟ್ಯಾಸಿಯಂ 138 ಮಿಲಿಗ್ರಾಂ
ಥಿಯಾಮಿನ್06 ಮಿಲಿಗ್ರಾಂ
ರಿಬೋಫ್ಲಾವಿನ್02 ಮಿಲಿಗ್ರಾಂ
ಆಕ್ಸಾಲಿಕ್ ಆಮ್ಲ 9 ಮಿಲಿಗ್ರಾಂ
‘ಎ’ ಜೀವಸತ್ವ 5 ಐಯು
“ಬಿ’ ಜೀವಸತ್ವ 15 ಮಿಲಿಗ್ರಾಂ
ಹಾಗಾದರೆ ಇನ್ನೇಕ ತಡ ಮೂಲಂಗಿಯನ್ನು ನಿತ್ಯ ಊಟದಲ್ಲಿ ಉಪಯೋಗಿಸ ಬಹುದಲ್ವ
Comments are closed.