ಆರೋಗ್ಯ

ಪ್ರತಿದಿನ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಪಚನ ಶಕ್ತಿಗೆ ಸಹಾಯಕಾರಿ.

Pinterest LinkedIn Tumblr

ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ ಆಹಾರ ಯೋಗ್ಯವಾದ ಹಣ್ಣೆಂದರೆ ಅದೇ ನೆಲ್ಲಿಕಾಯಿ. ಇದನ್ನು ಉಪಯುಕ್ತವಾದ ಹಣ್ಣು ಎಂದು ಕರೆಯಲು ಕಾರಣ ಇದರಲ್ಲಡಗಿರುವ ವೈದ್ಯಕೀಯ ಗುಣಲಕ್ಷಣಗಳು ಹಾಗೂ ಪೌಷ್ಟಿಕಾಂಶ.

ಈ ನೆಲ್ಲಿಕಾಯಿ ಮರವು ಚಿಕ್ಕದಾಗಿ ಒಂದು ಸಾಧಾರಣ ಎತ್ತರಕ್ಕೆ ಬೆಳೆಯುತ್ತದೆ. ಇದರ ಗರಿಷ್ಠ ಎತ್ತರ 18 ಮೀ. ಆಗಿರುತ್ತದೆ. ಇದರ ಎಲೆಗಳು ಸ್ವಾಭಾವಿಕ ಎಲೆಗಳಂತಿದ್ದು ರೆಂಬೆಗಳಿಗೆ ತಾಗಿಕೊಂಡೇ ಬೆಳೆಯುತ್ತದೆ. ಆಚಾರ್ಯ ಚರಕರವರ ಪ್ರಕಾರ, “ನೆಲ್ಲಿಕಾಯಿಯು ಎಲ್ಲಾ ಔಷಧಿಗಳ ಪಿತೃ ಆಗಿದೆ ಹಾಗೂ ಇದು ಯೌವನವನ್ನು ಪ್ರೇರೇಪಿಸುತ್ತದೆ. ಅದೇ ರೀತಿ ಇದು ಎಲ್ಲಾ ಹಣ್ಣುಗಳಲ್ಲಿ ಉತ್ತಮವಾದ ಹಣ್ಣಾಗಿದೆ.” ಇದು ಸಾಮಾನ್ಯವಾಗಿ ತಿನ್ನಲು ಹುಳಿಯಾಗಿದ್ದರೂ ಆರೋಗ್ಯಕ್ಕೆ ಫಲಕಾರಿಯಾಗಿದೆ. ಕೆಲವು ನೆಲ್ಲಿಕಾಯಿಗಳು, ಖಾರ, ಕಹಿ ಹಾಗೂ ಸಿಹಿಯಾಗಿಯೂ ಇರುತ್ತದೆ. ಇದು ವಾತ, ಪಿತ್ತ ಹಾಗೂ ಕಫ ಎಂಬ ಮೂರು ದೋಷಗಳನ್ನು ಸಮಾನಾಂತರ ವಾಗಿಡುವಲ್ಲಿ ಸಹಾಯ ಮಾಡುತ್ತದೆ. ಎಲ್ಲಾ ಹುಳಿಯಾದ ಹಣ್ಣುಗಳು ಪಿತ್ತವನ್ನು ಅಧಿಕಗೊಳಿಸುತ್ತವೆ. ಆದರೆ ನೆಲ್ಲಿಕಾಯಿಯು ಪಿತ್ತವನ್ನು ಕಡಿಮೆಗೊಳಿಸುತ್ತದೆ.

ಇದು ವಿಟಮಿನ್ `ಸಿ’ ಹಾಗೂ ವಿಟಮಿನ್ `ಇ’ಯ ಮೂಲ ವಸ್ತುವಾಗಿದೆ. ನೆಲ್ಲಿಕಾಯಿಯು ಹಾನಿಯಾದ ಅಣು ಕೋಶದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಕಬ್ಬಿಣಾಂಶ ಹಾಗೂ ಇತರ ಪೌಷ್ಟಿಕಾಂಶಗಳಿರುತ್ತದೆ. ಅದು ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ.

ನೆಲ್ಲಿಕಾಯಿಯಲ್ಲಿ ವಿವಿಧ ರೀತಿಯ ಗುಣಗಳು ಅಡಗಿಕೊಂಡಿದೆ. ಒಳ್ಳೆಯ ರೀತಿಯಲ್ಲಿ ಆಹಾರವನ್ನು ಜೀರ್ಣಿಸುವಲ್ಲಿ ದೇಹಕ್ಕೆ ಸಹಾಯ ಮಾಡುತ್ತದೆ. ರಕ್ತದ ಶುದ್ಧೀಕರಣ ಹಾಗೂ ಪಿತ್ತಾಶಯದ ಸಹಜವಾದ ಕಾರ್ಯವನ್ನು ಕಾಪಾಡುತ್ತದೆ. ಇದು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ. ಇದು ತಿನ್ನಲು ಹುಳಿಯಾದರೂ ಎದೆ ಉರಿತ, ಆಯಸಿಡಿಟಿ, ಗ್ಯಾಸ್ಟ್ರಿಕ್, ಅಜೀರ್ಣದ ಸಂದರ್ಭದಲ್ಲಿ ಉಪಕಾರಿಯಾಗಿ ಮಾನವರಿಗೆ ಆರೋಗ್ಯವನ್ನು ಒದಗಿಸುತ್ತದೆ. ಅಸ್ತಮಾ, ಗಂಟಲು ರೋಗ, ಅಲರ್ಜಿ ಹಾಗೂ ಶೀತಕ್ಕೂ ಗುಣೌಷಧವಾಗಿದೆ.

ಈ ನೆಲ್ಲಿಕಾಯಿಯು ಕಾಲಕ್ಕೆ ತಕ್ಕಂತೆ ಬೆಳೆಯುತ್ತದೆ. ನಮಗೆ ಈ ಕಾಯಿಯು ಇಡೀ ವರ್ಷಕ್ಕೆ ಉಪಯೋಗವಾಗ ಬೇಕೆಂದರೆ ನಾವು ಇದನ್ನು ಶೇಖರಿಸಿಡಬೇಕಾಗುತ್ತದೆ. ಇದನ್ನು ವಿವಿಧ ರೀತಿಯಲ್ಲಿ ಶೇಖರಣೆ ಮಾಡಬಹುದು. `ನೆಲ್ಲಿಕಾಯಿ ಮುರಬ್ಬ’ ಅಥವಾ ಸಿಹಿಯಾದ ನೆಲ್ಲಿಕಾಯಿಯಾಗಿ ಮಾಡಿ, ನೆಲ್ಲಿಕಾಯಿಯನ್ನು ಒಣಗಿಸಿ ಅದನ್ನು ಪುಡಿ ಮಾಡಿ ಇಟ್ಟುಕೊಳ್ಳಬಹುದು. ನೆಲ್ಲಿಕಾಯಿಯ ಉಪ್ಪಿನಕಾಯಿ ತಯಾರಿಸಬಹುದು. ಜಾಮ್ ಇತ್ಯಾದಿ ಪಳಗದ ಹಣ್ಣನ್ನು ಹಾಗೆಯೇ ಉಪ ಯೋಗಿಸಬಹುದು ಅಥವಾ ಜ್ಯೂಸ್ ಹಾಗೂ ಚಟ್ನಿ ಮಾಡಿ ಸೇವಿಸಬಹುದು.

ಮನೆ ಮದ್ದಾಗಿ ನೆಲ್ಲಿಕಾಯಿ ಬಳಕೆ:
* ಪ್ರತಿದಿನ ಮುಂಜಾನೆ ಒಳ್ಳೆಯ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಶಕ್ತಿಯು ಹೆಚ್ಚುವುದರ ಜೊತೆಗೆ ಪಚನ ಶಕ್ತಿಗೆ ಸಹಾಯಕವಾಗುತ್ತದೆ.
* ಒಣಗಿದ ನೆಲ್ಲಿಕಾಯಿಯ ತುಂಡುಗಳನ್ನು ಜಗಿಯುವುದರಿಂದ ಪಿತ್ತೋದ್ರಕದಿಂದ ನಮ್ಮ ದೇಹವನ್ನು ಮುಕ್ತಿಗೊಳಿಸುತ್ತದೆ.
* ಸುಮಾರು 3-6 ಗ್ರಾಂನಷ್ಟು ನೆಲ್ಲಿ ಕಾಯಿಯ ಹುಡಿಯನ್ನು ಬಟರ್ ಮಿಲ್ಕ್ ಅಥವಾ ಬಿಸಿನೀರಲ್ಲಿ ಹಾಕಿ ಕುಡಿಯುವು ದರಿಂದ ಮಲಬದ್ಧತೆ ಹಾಗೂ ಪೈಲ್ಸ್‍ನ ತೊಂದರೆಯಿಂದ ನಮ್ಮನ್ನು ರಕ್ಷಿಸುತ್ತದೆ.
* ಒಣ ನೆಲ್ಲಿಕಾಯಿಯು ಜೀರ್ಣಶಕ್ತಿಗೆ ಉಪಕಾರಿ. ವಾಯು ದೋಷದಿಂದ ಮುಕ್ತಿ ಪಡೆಯಲು ಸ್ವಲ್ಪ ಸಕ್ಕರೆಯಲ್ಲಿ ಒಂದು ಗ್ರಾಂ ನೆಲ್ಲಿಕಾಯಿ ಪುಡಿಯನ್ನು ಹಾಕಿ, ಅದಕ್ಕೆ ಒಂದು ಗ್ಲಾಸ್ ನೀರನ್ನು ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯಬೇಕು.
* ನೆಲ್ಲಿಕಾಯಿಯ ಜ್ಯೂಸ್ ಹಾಗೂ ಕರಿಬೇವಿನ ಜ್ಯೂಸ್ ಕುಡಿಯುವುದರಿಂದ ರಕ್ತ ಹೀನತೆಯನ್ನು ತಡೆಯಬಹುದು.
* ನೆಲ್ಲಿಕಾಯಿ ಪುಡಿಯನ್ನು ಬಟರ್ ಮಿಲ್ಕ್‍ನಲ್ಲಿ ಇಡೀ ರಾತ್ರಿ ನೆನೆಸಿಡಬೇಕು. ಮರುದಿನ ಅದಕ್ಕೆ ಸೀಗೆ ಕಾಯಿ ಹುಡಿ ಹಾಗೂ ನೊರೆಕಾಯಿ ಹುಡಿಯನ್ನು ಸೇರಿಸಬೇಕು. ಆ ಮಿಶ್ರಣವನ್ನು ತಲೆಯ ಹಣೆ ಹಾಗೂ ಕೂದಲಿಗೆ ಹಾಕಬೇಕು. ಸುಮಾರು ಒಂದೂವರೆ ಗಂಟೆಯ ಬಳಿಕ ಉಗುರು ಬೆಚ್ಚಗಿರುವ ನೀರಿನಲ್ಲಿ ತೊಳೆಯ ಬೇಕು. ಇದು ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ ಹಾಗೂ ಬಕ್ಕತಲೆಯನ್ನು ಹೋಗಲಾಡಿಸುತ್ತದೆ.
* ನೆಲ್ಲಿಕಾಯಿಯಿಂದ ತಯಾರಿಸಿದ ಫೇಸ್ ಪ್ಯಾಕ್ ಕಣ್ಣನ್ನು ತಂಪಾಗಿಸಲು ಹಾಗೂ ಕಣ್ಣಿನ ಸುತ್ತವಿರುವ ಕಪ್ಪÅ ಕಲೆ ಗಳನ್ನು ಹೋಗಲಾಡಿಸುವಲ್ಲಿ ಬಹಳ ಉಪಕಾರಿಯಾಗಿದೆ. ನೆಲ್ಲಿಕಾಯಿಯ ಜ್ಯೂಸ್ ಒಳ ಒತ್ತಡವನ್ನು ಕಡಿಮೆಗೊಳಿಸು ವುದಲ್ಲದೇ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ.
* 250 ಮಿಲಿ ನೀರು ಹಾಗೂ 150 ಗ್ರಾಮ್ ನೆಲ್ಲಿಕಾಯಿ ಹುಡಿಯನ್ನು ಕುದಿಸಿ ಅರ್ಧಕ್ಕೆ ಇಳಿಸಬೇಕು. ಸೋಸಿ, ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವನ್ನು ತಡೆಗಟ್ಟಬಹುದು.
* ನೆಲ್ಲಿಕಾಯಿ ಹುಡಿ, ಶ್ರೀಗಂಧ ಹುಡಿ, ಅರಿಸಿನ ಹುಡಿಯನ್ನು ರೋಸ್ ವಾಟರ್ ಅಥವಾ ಬಟರ್ ಮಿಲ್ಕ್ ಜೊತೆ ಮಿಶ್ರಣ ಮಾಡಿ ಆ ಪೇಸ್ಟನ್ನು ಮುಖದಲ್ಲಿ ಬಿದ್ದಿರುವ ಪಿಂಪಲ್ಸ್‍ಗೆ ಹಚ್ಚಿ ದರೆ ವಿಶೇಷವಾಗಿ ಎಣ್ಣೆ ಚರ್ಮದವರಿಗೆ ಉಪಯುಕ್ತವಾಗಿರುತ್ತದೆ.
* ನೆಲ್ಲಿಕಾಯಿ ಹಾಗೂ ಅರಿಸಿನ ಜ್ಯೂಸ್ ಅನ್ನು ಪ್ರತಿದಿನ ಡಯಟ್ ಮಾಡುವ ಸಕ್ಕರೆ ಕಾಯಿಲೆ ಸಂಬಂಧಿ ರೋಗಿಗಳು ಕುಡಿದರೆ ಉತ್ತಮ. ಇದನ್ನು ಉಪಯೋಗಿಸುವ ಮೊದಲು ಆ ರೋಗಿಗಳು ಇದರ ಬಗ್ಗೆ ಆಯುರ್ವೇದಿಕ್ ವೈದ್ಯರ ಬಳಿ ಸಲಹೆ ಪಡೆಯಬೇಕು.
* ಕೊತ್ತಂಬರಿ ಬೀಜ ಹಾಗೂ ಜೀರಿಗೆ ಬೀಜವನ್ನು ರಾತ್ರಿಯಿಡೀ ನೆನಸಿಡಬೇಕು. ಮರುದಿನ ಅದನ್ನು ಸೋಸಿ ಅದರ ನೀರಿಗೆ ನೆಲ್ಲಿಕಾಯಿ ಜ್ಯೂಸನ್ನು ಹಾಗೂ ಕಲ್ಲು ಸಕ್ಕರೆಯನ್ನು ಸೇರಿಸಬೇಕು. ಇದು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಿಡುವಲ್ಲಿ ಸಹಾಯ ಮಾಡುತ್ತದೆ.

Comments are closed.