‘ಪರಂಗಿ ಎಲೆಯ ರಸದಲ್ಲಿರುವ ಎಂಜೈಮ್ ಡೆಂಗೆ ಜ್ವರವನ್ನು ಗುಣಪಡಿಸುವುದರ ಜತೆಗೆ ಇತರ ವೈರಲ್ ಜ್ವರಗಳನ್ನೂ ನಿಯಂತ್ರಿಸುವ ಗುಣ ಹೊಂದಿದೆ ಎಂಬ ಅಂಶ ಫ್ಲೋರಿಡಾದ ಡಾ. ನ್ಯಾಮ್ ಡ್ಯಾಂಗ್ ಎಂಬುವವರ ಸಂಶೋಧನೆಯಲ್ಲಿದೆ,’’ ಎಂದು ಅವರು ವಿವರಿಸಿದರು.
ಇದರ ವಿಶೇಷ ಏನು? ‘‘ಪರಂಗಿ ಎಲೆಯಲ್ಲಿ ಕೈಮೋಪ್ಯಾಪಿನ್ ಮತ್ತು ಪ್ಯಾಪಿನ್ ಎಂಬ ಕಿಣ್ವ (ಎಂಜೈಮ್) ಇರುವುದನ್ನು ಸಂಶೋಧನೆ ಮೂಲಕ ಪತ್ತೆ ಮಾಡಲಾಗಿದೆ. ಅದರಲ್ಲೂ ಎಳೆ ಪಪ್ಪಾಯ ಎಲೆಗಳಲ್ಲಿ ಇವುಗಳ ಪ್ರಮಾಣ ಹೆಚ್ಚಿರುತ್ತದೆ. ಈ ಕಿಣ್ವಗಳು ಮನುಷ್ಯನ ದೇಹದಲ್ಲಿ ಪ್ಲೇಟ್‌ಲೆಟ್‌ಗಳನ್ನು ಹೆಚ್ಚಿಸುತ್ತವೆ. ಜತೆಗೆ ಪಪ್ಪಾಯ ಎಲೆಯ ರಸ ಲಿವರ್(ಯಕೃತ್)ನ ಕಾರ್ಯ ಸುಗಮಗೊಳಿಸುತ್ತದೆ,’’
ರಸ ಸೇವನೆ ಹೇಗೆ? * ಪರಂಗಿ ಎಲೆಯ ರಸವನ್ನು ಸೇವಿಸಿದ ತಕ್ಷಣವೇ ಫಲಿತಾಂಶ ಕಾಣುವುದಿಲ್ಲ. 40ರಿಂದ 48 ಗಂಟೆಗಳ ನಂತರ ಅದರ ಪರಿಣಾಮ ತಿಳಿಯುತ್ತದೆ.
* ಪಪ್ಪಾಯ ಎಲೆಯನ್ನು ಮಿಕ್ಸಿಗೆ ಹಾಕಿ ಅದರಿಂದ ತೆಗೆದ ಹಸಿ ರಸವನ್ನು 20 ರಿಂದ 25 ಎಂ.ಎಲ್‌ನಷ್ಟು ದಿನಕ್ಕೆ ಎರಡು ಬಾರಿಯಂತೆ ನಿರಂತರ ಏಳು ದಿನ ತೆಗೆದುಕೊಳ್ಳಬೇಕು.
* ಸಾಮಾನ್ಯವಾಗಿ 10 ವರ್ಷ ಮೀರಿದವರು ಪಪ್ಪಾಯ ಎಲೆಯ ರಸ ಸೇವಿಸಬಹುದು. ವೈದ್ಯರ ಮಾರ್ಗದರ್ಶನದ ಪ್ರಕಾರವೇ ಇದನು ಸೇವಿಸುವುದು ಸೂಕ್ತ. —
ಕಿವಿಗೆ ಬಂದ ಭಾಗ್ಯ ಡೆಂಗೆ ಜ್ವರದ ‘ಕಿವಿ’ ಹಿಂಡುತ್ತದೆ ಎಂಬ ಭಾವನೆ ಎಲ್ಲೆಡೆ ಹರಡಿ ನ್ಯೂಜಿಲೆಂಡ್‌ನ ಕಿವಿ ಹಣ್ಣಿಗೆ ಭಾರಿ ಬೇಡಿಕೆ ಬಂದಿದೆ. ಮೊಟ್ಟೆಯಾಕಾರದಲ್ಲಿರುವ ಖಾಕಿ ಬಣ್ಣದ ಈ ಹಣ್ಣು ಪೌಷ್ಠಿಕಾಂಶಗಳ ಗಣಿ. ಈ ಹಣ್ಣಿನ ಸುತ್ತಲೂ ಉರುಟುರುಟಾದ ಕಂಬಳಿಯಲ್ಲಿರುವ ಎಳೆಗಳಿರುತ್ತವೆ. ಈ ಕಾರಣಕ್ಕೆ ಯಾರ ಗಮನಕ್ಕೂ ಬೀಳದ ಹಣ್ಣು ಈಗ ಕೈಗೆ ಸಿಕ್ಕರೆ ದೊಡ್ಡ ಪುಣ್ಯ ಎನ್ನುವಂತಾಗಿದೆ. ಬೆಂಗಳೂರಿನಲ್ಲಿ ಕೊಳ್ಳುವವರಿಗೆ ದಮ್ಮಯ್ಯ ಎನ್ನುತ್ತಿದ್ದ ಮಾರಾಟಗಾರರು ಈಗ ಕೆಜಿಗೆ 500-600 ರೂ ರೇಟು ಏರಿಸಿ, ಚೌಕಾಶಿ ಮಾತೇ ಇಲ್ಲ ಎನ್ನುತ್ತಿದ್ದಾರೆ. ಇದು ಹೃದ್ರೋಗಕ್ಕೆ ರಾಮಬಾಣ, ಚರ್ಮಕಾಂತಿ ವರ್ಧಕ, ರಕ್ತದೊತ್ತಡ ನಿವಾರಕ ಆದರೆ ಡೆಂಗೆ ನಿವಾರಣೆ ಕುರಿತು ಖಚಿತ ಮಾಹಿತಿ ಇಲ್ಲದಿದ್ದರೂ ಬಾಯಿಂದ ಬಾಯಿಗೆ ಹರಡಿ ರಾಜ್ಯಾದ್ಯಂತ ರೋಗಿಗಳು ಕಿವಿಯ ಹಿಂದೆ ಬಿದ್ದಿದ್ದಾರೆ. —
ಜ್ವರ ಬಾಧೆಯಿಂದ ಕುಸಿತವಾಗಿರುವ ಪ್ಲೇಟ್‌ಲೇಟ್‌ಗಳ ಉತ್ಪಾದನೆ ಪ್ರಮಾಣ ಪರಂಗಿ ಎಲೆಯ ರಸ ಸೇವನೆಯಿಂದ ಹೆಚ್ಚಾಗುತ್ತದೆ. ಒಂದು ವಾರದಲ್ಲಿ ರೋಗಿ ಸಂಪೂರ್ಣ ಚೇತರಿಸಿಕೊಳ್ಳಲು ನೆರವಾಗುತ್ತದೆ
Comments are closed.