ಆರೋಗ್ಯ

ಮರೆವಿನ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಸುಲಭ ವಿಧಾನಗಳ ಪಟ್ಟಿ

Pinterest LinkedIn Tumblr

ವಯಸ್ಸು ಆದಂತೆ ಮರೆವು ಹೆಚ್ಚಾಗುತ್ತದೆ ಎಂಬುದು ಗೊತ್ತು ಆದರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಮರೆವು ಎಂಬುದು ಇರುತ್ತದೆ ಕೆಲವು ಮಕ್ಕಳಿಗೆ ಎಷ್ಟು ಹೇಳಿಕೊಟ್ಟರು ಕೂಡ ಬೆಳ್ಳಿಗೆ ಹೇಳಿದ್ದು ಸಂಜೆಯವರೆಗೆ ನೆನಪು ಇರುವುದಿಲ್ಲ ಇವತ್ತು ಆಗಿದ್ದು ನಾಳೆ ನೆನಪು ಇರುವುದಿಲ್ಲ ಚಿಕ್ಕ ವಯಸ್ಸಿನಲ್ಲಿ ಇದು ಒಂದು ರೀತಿಯ ದೊಡ್ಡ ಸಮಸ್ಯೆ ಆಗಿರುತ್ತದೆ ಏಕೆಂದರೆ ಚಿಕ್ಕ ಮಕ್ಕಳಿಗೆ ಈ ಮರೆವಿನ ಸಮಸ್ಯೆ ಎಂಬುದು ಇದ್ದರೆ ಅವರ ಭವಿಷ್ಯದಲ್ಲಿ ತುಂಬಾ ಕಷ್ಟ ಆಗುತ್ತದೆ ಅದಕ್ಕಾಗಿ ಮರೆವಿನ ಸಮಸ್ಯೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಾತ್ರೆ ಔಷಧಿ ಎಂದು ಕೊಡಿಸುತ್ತಾರೆ ಆದರೂ ಕೂಡ ಈ ಮರೆವಿನ ಸಮಸ್ಯೆ ಎಂಬುದು ದೂರ ಆಗುವುದಿಲ್ಲ.

ಮಕ್ಕಳು ಹಗಲು ರಾತ್ರಿ ಎಂಬುದನ್ನು ನೋಡದೆ ಕಷ್ಟಪಟ್ಟು ಪರೀಕ್ಷೆಗೆ ತಯಾರಿ ಆಗಿರುತ್ತಾರೆ ಆದರೆ ಪರೀಕ್ಷೆಯ ಕೊಠಡಿಗೆ ಹೋಗಿದ ತಕ್ಷಣ ಓದಿದ್ದೆಲ್ಲ ಮರೆತು ಹೋಗಿರುತ್ತದೆ. ಅಷ್ಟೇ ಅಲ್ಲ ದೊಡ್ಡವರು ಸಹ ಮರೆವಿನ ಸಮಸ್ಯೆಗೆ ಸಿಲುಕಿ ಒದ್ದಾಡುತ್ತಾರೆ. ಹಾಗಾದರೆ ಈ ಮರೆವಿನ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಸುಲಭ ವಿಧಾನವನ್ನು ನೋಡೋಣ ಬನ್ನಿ. ಈ ನೆನಪಿನ ಶಕ್ತಿ ಎಂಬುದು ಕಡಿಮೆಯಾಗಲು ಮುಖ್ಯವಾದ ಕಾರಣಗಳು ಎಂದರೆ ಆಕರ್ಷಣೆ ಇಲ್ಲದಿರುವುದು, ಹೆಚ್ಚು ದುಃಖ ದುಮ್ಮಾನ, ಬೇಸರ, ಭಯ, ಆತಂಕ, ಅನಾರೋಗ್ಯ. ಪೌಷ್ಟಿಕ ಆಹಾರ ಇಲ್ಲದಿರುವುದು. ಇವೆಲ್ಲವು ಕೂಡ ಮುಖ್ಯ ಕಾರಣಗಳಾಗಿವೆ.

ಮನುಷ್ಯನಿಗೆ ಪೌಷ್ಟಿಕಾಂಶ ಇರುವ ಆಹಾರ ಎಂಬುದು ತುಂಬಾ ಮುಖ್ಯ ಈ ಪೌಷ್ಠಿಕ ಆಹಾರವನ್ನು ಸೇವಿಸುವುದರಿಂದ ಮೆದುಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತದೆ. ಮೆದುಳಿಗೆ ಒಳ್ಳೆಯ ಶಕ್ತಿ ಸಿಗುತ್ತದೆ. ಯಾವುದೇ ಒಂದು ವಿಚಾರದ ಬಗ್ಗೆ ಹೆಚ್ಚು ಆಸಕ್ತಿ ತೋರಬೇಕು. ಯಾವುದೇ ಒಂದು ವಿಷಯವನ್ನು ಓದುವಾಗ ಆದಷ್ಟು ಜೋರಾಗಿ ಓದುವ ಅಭ್ಯಾಸವನ್ನು ಮಾಡಿಕೊಂಡರೆ ನಾವು ಓದಿದ್ದು ನೆನಪಿನಲ್ಲಿ ಉಳಿಯುತ್ತದೆ. ಹಾಗೆಯೇ ಓದಲು ಹಾಗೂ ಬರೆಯಲು ಪ್ರತಿ ದಿನ ಒಂದು ಅನುಕೂಲಕರವಾದ ಸಮಯವನ್ನು ನಿಗದಿ ಮಾಡಿಕೊಳ್ಳಬೇಕು ಹಾಗೂ ಪ್ರತಿದಿನ ಅದೇ ಸಮಯದಲ್ಲಿ ಓದುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.

ಓದಿದ ವಿಚಾರಗಳನ್ನು ಅಥವಾ ಪಾಠವನ್ನು ಸಹಪಾಠಿ ಗಳೊಂದಿಗೆ ಹಂಚಿಕೊಳ್ಳಬೇಕು. ಚರ್ಚೆ ಮಾಡಬೇಕು ಇದರಿಂದ ಓದಿದ್ದು ನೆನಪಿನಲ್ಲಿ ಉಳಿಯುತ್ತವೆ. ಓದಿಗೆ ಒಂದು ಒಳ್ಳೆಯ ಪ್ರಶಾಂತವಾದ ಜಾಗವನ್ನು ಮಾಡಿಕೊಳ್ಳಬೇಕು. ಓದುವಾಗ. ಬರೆಯುವಾಗ. ಇನ್ನಿತರ ಯಾವುದೇ ಚಿಂತೆ. ದುಃಖ. ತಲೆಯಲ್ಲಿ ಇರಬಾರದು. ಓದುವಾಗ ನಾವು ಮೊದಲು ನಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಂಡಿರಬೇಕು. ಏನನ್ನು ಓದಬೇಕು ಎಂದರು ಮೊದಲು ಅದನ್ನು ಇಷ್ಟ ಪಡಬೇಕು ಆಗ ಓದಿದ್ದು ನೆನಪಿನಲ್ಲಿ ಇರುತ್ತದೆ. ಹಾಗೆಯೇ ಮರೆವಿನ ಸಮಸ್ಯೆ ಇರುವವರು ಬೆಳಿಗ್ಗೆ ಬೇಗ ಎದ್ದು ಯೋಗ ಮಾಡಬೇಕು. ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವ ನಿದ್ರೆಯನ್ನು ಮಾಡಬೇಕು. ಒಂದೇ ಸಮಯದಲ್ಲಿ ಹೆಚ್ಚು ಕೆಲಸವನ್ನು ಮಾಡಲು ಹೋಗಬಾರದು.

ನಿತ್ಯ ವ್ಯಾಯಾಮವನ್ನು ಮಾಡುವುದರಿಂದ ದೈಹಿಕ ಆರೋಗ್ಯವು ಉತ್ತಮವಾಗುತ್ತದೆ ಜೊತೆಗೆ ಮಾನಸಿಕ ಆರೋಗ್ಯವೂ ಉತ್ತಮಗೊಂಡು ನಮ್ಮ ಮಿದುಳಿನ ನರಕೋಶಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸುತ್ತದೆ ಇದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಇವುಗಳನ್ನು ಮಾಡುವುದರಿಂದ ನಿಮ್ಮ ಮರೆವಿನ ಸಮಸ್ಯೆ ದೂರ ಆಗುತ್ತದೆ. ಜೊತೆಗೆ ಒಂದೆಲಗ ಸೊಪ್ಪನ್ನು ನಿತ್ಯ ಸೇವಿಸುವುದರಿಂದ ನೆನಪಿನ ಶಕ್ತಿ ಎಂಬುದ್ ಹೆಚ್ಚುತ್ತದೆ. ರಾತ್ರಿಯ ಸಮಯದಲ್ಲಿ ಬಾದಾಮಿಯನ್ನು ನೆನೆಸಿ ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ.

Comments are closed.