ಆರೋಗ್ಯ

ಕೋವಿಡ್-19 : ಸ್ವಯಂ ಸೇವೆಗೆ ವೈದ್ಯರು, ನರ್ಸ್’ಗಳು, ಲ್ಯಾಬ್ ಟೆಕ್ನೀಷಿಯನ್ಸ್ ನೊಂದಾಯಿಸಲು ಮನವಿ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು , ರೋಗಿಗಳ ಚಿಕಿತ್ಸೆ ಬಗ್ಗೆ ಹಾಲಿ ಇರುವ ವ್ಯವಸ್ಥೆಯನ್ನು ಉನ್ನತಿಕರಿಸಬೇಕಾದ ಅಗತ್ಯತೆ ಇದೆ.ಅದೇ ರೀತಿ ವೈದ್ಯರು / staff nurse ಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯವಿರುತ್ತದೆ.

ಅಲ್ಲದೇ ಲ್ಯಾಬ್ ಗಳಲ್ಲಿ ಲ್ಯಾಬ್ Technicians ಗಳ ಕೆಲಸ ಅವಶ್ಯಕತೆ ಇರುತ್ತದೆ. ಆದುದರಿಂದ ಸ್ವಯಂ ಪ್ರೇರಿತರಾಗಿ ಕಾರ್ಯನಿರ್ವಹಿಸಲು ಇಚ್ಚಿಸುವ ವೈದ್ಯರು, staff nurse ಗಳು ಮತ್ತು ಲ್ಯಾಬ್ Technicians ಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಉಡುಪಿ ಇವರನ್ನು ಸಂಪರ್ಕಿಸಬಹುದಾಗಿದೆ.

ಜಿಲ್ಲೆಯ ಸರ್ಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ Ventilator ಗಳು ಮತ್ತು High Pressure Oxygen System ಗಳ ತೀರಾ ಅವಶ್ಯಕತೆ ಇರುವುದರಿಂದ Ventilator ಹಾಗೂ High Pressure Oxygen System ಗಳನ್ನು ನೀಡಲು ಇಚ್ಚಿಸುವ ದಾನಿಗಳು /ಸಂಘ ಸಂಸ್ಥೆಗಳು ಜಿಲ್ಲಾಧಿಕಾರಿ ಕಚೇರಿಗೆ ಹಸ್ತಾಂತರಿಸಿ ಕೋವಿಡ್ -19 ನಿಯಂತ್ರಣದಲ್ಲಿ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಸಹಕರಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

Comments are closed.